ಕ್ರೀಡೆ

ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಸೋಲಿಗೆ ನೆಹ್ರಾ ಕಾರಣವೇ? ವ್ಯಾಪಕ ಆಕ್ರೋಶ….

Pinterest LinkedIn Tumblr

ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಸೋಮವಾರ ಮುಂಬೈ ಇಂಡಿಯನ್ಸ್ ವಿರುದ್ಧ ಮುಗ್ಗರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ-ಆಫ್ ಪ್ರವೇಶ ಸಾಧ್ಯತೆ ಕ್ಷೀಣಿಸಿದೆ.

ಇದರಂತೆ ಆರ್‌ಸಿಬಿ ವ್ಯವಸ್ಥಾಪಕ ಮಂಡಳಿಯತ್ತ ವ್ಯಾಪಕ ಆಕ್ರೋಶಗಳು ಮುಗಿಲೆದ್ದಿದೆ. ಬ್ಯಾಟಿಂಗ್‌ನಲ್ಲಿ ಅಲ್ಪ ಮಟ್ಟದ ಫಾರ್ಮ್ ಮರಳಿ ಪಡೆದರೂ ಕೆಟ್ಟ ಬೌಲಿಂಗ್ ಹಾಗೂ ಫೀಲ್ಡಿಂಗ್‌ನಿಂದ ಮಗದೊಮ್ಮೆ ಸೋಲಿಗೆ ಶರಣಾಗಿದೆ.

ಈ ನಡುವೆ ನಾಯಕ ವಿರಾಟ್ ಕೊಹ್ಲಿ ಮಿಗಿಲಾಗಿ ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಪಂದ್ಯವನ್ನು ನಿಯಂತ್ರಿಸುತ್ತಿರುವುದು ಕಂಡುಬಂದಿತ್ತು. ನಿರ್ಣಾಯಕ 19ನೇ ಓವರ್ ಪವನ್ ನೇಗಿಗೆ ನೀಡಲು ನೆಹ್ರಾ ಅವರೇ ಸಲಹೆ ಮಾಡುತ್ತಿದ್ದರು.

ನೆಹ್ರಾ ಸಲಹೆಯನ್ನು ಚಾಚು ತಪ್ಪದೇ ಕೊಹ್ಲಿ ಅನುಸರಿಸಿರುವುದೇ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ವ್ಯಾಪಕ ಟ್ರೋಲ್‌ಗಳು ಹರಿದಾಡುತ್ತಿದೆ.

19ನೇ ಓವರ್ ಬಲಗೈ ವೇಗಿ ನವದೀಪ್ ಸೈನಿಗೆ ನೀಡಲು ಕೊಹ್ಲಿ ಮುಂದಾಗಿದ್ದರು. ಈ ಹಂತದಲ್ಲಿ ಸ್ಪಿನ್ನರ್‌ಗೆ ನೀಡಲು ನೆಹ್ರಾ ಸೂಚಿಸಿದ್ದರು. ಪರಿಣಾಮ ಪವನ್ ನೇಗಿ ದಾಳಿಯಲ್ಲಿ 22 ರನ್ ಚಚ್ಚಿದ ಹಾರ್ದಿಕ್ ಪಾಂಡ್ಯ ಇನ್ನೊಂದು ಓವರ್ ಬಾಕಿ ಉಳಿದಿರುವಂತೆಯೇ ಗೆಲುವು ಒದಗಿಸಿಕೊಟ್ಟಿದ್ದರು.

Comments are closed.