ಮೈಸೂರು: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸರಕಾರ ಉಳಿಯಬೇಕಾದರೆ ಮೈತ್ರಿಕೂಟದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕು -ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಿತ್ರಪಕ್ಷಗಳ ಕಾರ್ಯಕರ್ತರಿಗೆ ನೀಡಿದ ಗುರಿ.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಸಚಿವ ಜಿ.ಟಿ. ದೇವೇಗೌಡ ಜತೆಗಿನ ಮುನಿಸು ಮರೆತು ಜಂಟಿ ಪ್ರಚಾರ ನಡೆಸಿದ ಸಿದ್ದರಾಮಯ್ಯ ಈ “ಗುರಿ’ ನೀಡಿದರು. ಈ ಮಾತು ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್ ಅವರನ್ನು ಗೆಲ್ಲಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ರೂಪದಲ್ಲಿದ್ದ ಜತೆಗೆ, ಭಿನ್ನಾಭಿಪ್ರಾಯ ಮರೆತು ಸಹಕರಿಸಿ ಎಂದು ಜೆಡಿಸ್ ಕಾರ್ಯಕರ್ತರಿಗೆ ನೀಡಿದ “ಎಚ್ಚರಿಕೆ’ಯ ದನಿಯೂ ಆಗಿತ್ತು.
“ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗಟ್ಟಿನಿಂದ ದುಡಿಯಬೇಕು. ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೇರಬಾರದು ಎಂದು ರಚಿಸಲಾಗಿರುವ ಮೈತ್ರಿಕೂಟ ಐದು ವರ್ಷ ಪೂರ್ತಿಗೊಳಿಸಬೇಕಾದರೆ, ಹೆಚ್ಚಿನ ಸಂಖ್ಯೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲಬೇಕು. ಮೈತ್ರಿ ಕೂಟದ ಅಭ್ಯರ್ಥಿಗಳು ಸೋತರೆ ಸರಕಾರ ಇರಲು ಹೇಗೆ ಸಾಧ್ಯ ಎಂದು ಹೇಳಿದರು. ಟಿ.ಟಿ. ದೇವೇಗೌಡ ಕೂಡ ಇದನ್ನು ಬೆಂಬಲಿಸಿದರು.
Comments are closed.