ಮೈಸೂರು: ನಾನು ಮತ್ತು ಸಿದ್ದರಾಮಯ್ಯ ಒಟ್ಟಿಗೆ ಸೇರಿದ್ದೇವೆ. ಇಂತಹ ಸನ್ನಿವೇಶ ಮತ್ತೆ ಬರುವುದಿಲ್ಲ. ನಿಮ್ಮಲ್ಲಿ ಕೈ ಜೋಡಿಸಿ ಕೇಳಿಕೊಳ್ಳುತ್ತಿದ್ದೇನೆ, ಈ ಬಾರಿ ಚುನಾವಣೆಯಲ್ಲಿ ಮೈತ್ರಿ ಪಕ್ಷ ಕನಿಷ್ಠ 20 ಸೀಟನ್ನಾದರೂ ಗೆಲ್ಲಬೇಕು. ಅದಕ್ಕೆ ಸಹಕರಿಸಿ ಎಂದು ಮಾಜಿ ಪ್ರಧಾನಿ ದೇವೇಗೌಡ ಕೆ.ಆರ್.ನಗರ ಮೈತ್ರಿ ಸಮಾವೇಶದಲ್ಲಿ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ಅವರು, ಇದೊಂದು ಅಗ್ನಿಪರೀಕ್ಷೆ, ಈಗ ರಾಜಕೀಯ ಸನ್ನಿವೇಶ ಬದಲಾಗಿದೆ. ನಾನು, ಸಿದ್ದರಾಮಯ್ಯ ಸ್ಪಲ್ಪಕಾಲ ಬೇರೆ ಇದ್ದೆವು. ಈಗ ಒಟ್ಟಿಗೆ ಸೇರಿದ್ದೇವೆ. ಒಟ್ಟಿಗೆ ಪ್ರಚಾರ ಮಾಡುತ್ತಿದ್ದೇವೆ. ಇಂತಹ ಸನ್ನಿವೇಶ ಮತ್ತೆ ಬರುವುದಿಲ್ಲ. ನಿಮ್ಮಲ್ಲಿ ಕೈ ಜೋಡಿಸಿ ಕೇಳಿಕೊಳ್ಳುತ್ತಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಕನಿಷ್ಠ 20 ಸೀಟು ಗೆಲ್ಲಬೇಕು. ಆಗ ಮಾತ್ರ ನಾನು ಮತ್ತು ಸಿದ್ದರಾಮಯ್ಯ ಜತೆಯಾಗಿದ್ದಕ್ಕೂ ಸಾರ್ಥಕವಾಗುತ್ತದೆ. ನಮ್ಮಿಬ್ಬರ ವ್ಯಕ್ತಿತ್ವ ಉಳಿಯುತ್ತೆ. ನಮ್ಮ ನಮ್ಮಲ್ಲಿ ವೈಯುಕ್ತಿಕ ಈರ್ಷೆಗಳು ಬೇಡ ಎಂದು ಮೈತ್ರಿ ಪಕ್ಷದ ಕಾರ್ಯಕರ್ತರಿಗೆ ತಿಳಿ ಹೇಳಿದರು.
ಇನ್ನೊಂಡೆದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದರು ಕಾಂಗ್ರೆಸ್ ರೆಬೆಲ್ ನಾಯಕರು ಮಾತ್ರ ಮೈತ್ರಿ ಸಮಾವೇಶದತ್ತ ಮುಖ ಮಾಡಿರಲಿಲ್ಲ. ಮಂಡ್ಯದ ಕಾಂಗ್ರೆಸ್‍ನ ರೆಬೆಲ್ ನಾಯಕರು ಸಾಮೂಹಿಕವಾಗಿ ಗೈರಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪ್ರಚಾರದಲ್ಲಿ ಬ್ಯುಸಿ ಇರುವ ಕಾರಣಕ್ಕೆ ಮಂಡ್ಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಮೈಸೂರು ಅಭ್ಯರ್ಥಿ ಸಿ.ಹೆಚ್.ವಿಜಯ್‍ಶಂಕರ್, ಚಾಮರಾಜನಗರದ ಅಭ್ಯರ್ಥಿ ಧೃವನಾರಾಯಣ್, ಹಾಸನ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಸಮಾವೇಶದಲ್ಲಿ ಭಾಗಿಯಾಗಿರಲಿಲ್ಲ. ಆದ್ರೆ ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡ ಮಾತ್ರ ಹಾಜರಾಗಿದ್ದರು.
Comments are closed.