ಕರ್ನಾಟಕ

ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ತಂತ್ರದಿಂದ ರಮೇಶ್ ಜಾರಕಿಹೊಳಿ ಅತಂತ್ರ..!

Pinterest LinkedIn Tumblr


ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಲೆನೋವಾಗಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ತಲೆನೋವಾಗಿದ್ದರು. ಆದರೇ ರಮೇಶ ಜಾರಕಿಹೊಳಿ ಪರ್ಯಾಯವಾಗಿ ಮತ್ತೊಬ್ಬ ಸಹೋದರನನ್ನು ಸೆಳೆಯುವ ಮೂಲಕ ಶಾಕ್ ನೀಡಿದ್ದಾರೆ ಸಚಿವ ಸತೀಶ ಜಾರಕಿಹೊಳಿ. ಹೌದು ಇಂದು ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಜತೆಗೆ ಸಹೋದರ ಲಖನ್ ಜಾರಿಹೊಳಿ ಪಾಲ್ಗೊಂಡಿದ್ದರು. ಕಳೆದ ಒಂದು ವಾರದಿಂದ ಲಖನ್ ಜಾರಕಿಹೊಳಿ ಸೆಳೆಯಲು ಸತೀಶ್ ಪ್ಲ್ಯಾನ್ ಮಾಡಿದ್ದರು. ಇದು ಕೊನೆಗು ಯಶಸ್ವಿಯಾಗಿದ್ದು, ಇಂದು ಗೋಕಾಕ್ ನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ ಪಾಲ್ಗೊಂಡಿದ್ದರು. ಈ ಮೂಲಕ ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸದೆ ಪಕ್ಷದಿಂದ ಅಂತರ ಕಾಯ್ದುಕೊಂಡ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಬಿಗ್ ಶಾಕ್ ನೀಡಿದ್ದಾರೆ.

ಕಾರ್ಯಕರ್ತರ ಸಭೆಯ ಬಳಿಕ ಮಾಡನಾಡಿದ ಸಚಿವ ಸತೀಶ್ ಜಾರಕಿಹೊಳಿ, ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡೋ ಜವಾಬ್ದಾರಿಯನ್ನು ಲಖನ್ ಜಾರಕಿಹೊಳಿಗೆ ವಹಿಸಲಾಗಿದೆ. ಮುಂದೆ ಲಖನ್ ಜಾರಕಿಹೊಳಿಗೆ ಪಕ್ಷದಲ್ಲಿ ಅವಕಾಶ ಸಿಗಬಹುದು. ಯಮಕನಮರಡಿ ಕ್ಷೇತ್ರ ವಿಚಾರವಾಗಿ ಲಖನ್ ಜಾರಕಿಹೊಳಿ ಜತೆಗೆ ವೈಮಸ್ಸು ಉಂಟಾಗಿತ್ತು. ಅದೆಲ್ಲ ಇತ್ಯರ್ಥವಾಗಿದ್ದು, ಈ ಬಾರಿ ಕಾಂಗ್ರೆಸ್ ಪರವಾಗಿ ಲಖನ್ ಕೆಲಸ ಮಾಡ್ತಾರೆ. ಜತೆಗೆ ರಮೇಶ ಜಾರಕಿಹೊಳಿ ಮನವೊಲಿಸುವ ಯತ್ನವನ್ನು ಸಹ ಲಖನ್ ಮಾಡಲಿದ್ದಾರೆ ಎಂದರು.

ಗೋಕಾಕ್ ಕ್ಷೇತ್ರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜತೆಗೆ ಲಖನ್ ಜಾರಕಿಹೊಳಿ ಗುರುತಿಸಿಕೊಂಡಿದ್ದರು. ಲಖನ್ ಜಾರಕಿಹೊಳಿ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಅನೇಕ ಬಾರಿ ಕೇಳಿ ಬಂದಿದ್ದವು. ಆದರೇ ಲಖನ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ನಿಷ್ಠರಾಗಿದ್ದರು. ಇದೀಗ ಕಾಂಗ್ರೆಸ್​ವೊಂದಿಗೆ ರಮೇಶ್ ಜಾರಕಿಹೊಳಿ ಮುನಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಬದಲಾಗಿ ಲಖನ್ ಅವರನ್ನ ಸೆಳೆಯುವಲ್ಲಿ ಸತೀಶ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಬಳಿಕ ಮಾತನಾಡಿದ ಲಖನ್ ಜಾರಕಿಹೊಳಿ, ಪಕ್ಷದಲ್ಲಾಗಿರುವ ಗೊಂದಲದ ಹಿನ್ನೆಲೆಯಲ್ಲಿ ತಮ್ಮ ಸಹೋದರ ರಮೇಶ ಜಾರಕಿಹೊಳಿ ಪಕ್ಷದಿಂದಲೇ ದೂರು ಉಳಿದಿದ್ದಾರೆ. ಬೆಂಗಳೂರಿನಲ್ಲಿ ರಮೇಶ್ ಜಾರಕಿಹೊಳಿ ಇದ್ದಾರೆ. ಅವರ ಮನವೊಲಿಸುವ ಯತ್ನ ಮಾಡುತ್ತೇವೆ. ಗೋಕಾಕ್​ನಲ್ಲಿ ಸತೀಶ್, ರಮೇಶ್ ಹಾಗೂ ನನ್ನ ನೇತೃತ್ವದಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲ್ಲಿದೆ. ಯಮಕಮನರಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೇಳಿದ್ದು ನಿಜ. ನನಗೆ ಯಾವುದೇ ಸ್ಥಾನಮಾನದ ಭರವಸೆ ನೀಡಿಲ್ಲ. ಗೋಕಾಕ್ ಕ್ಷೇತ್ರದಲ್ಲಿ ನಾನೇ ಶಾಸಕರಿದ್ದರಿಂತೆ ಎಂದು ಲಖನ್ ಜಾರಕಿಹೊಳಿ ಹೇಳಿದ್ದಾರೆ.

ಅಂತೂ, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಇನ್ನು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮನ್ನು ಬೆಂಬಲಿಸಲಿದ್ದಾರೆ ಎಂದು ಆಸೆಗಣ್ಣಿನಿಂದ ಕಾದು ಕುಳಿತಿದ್ದ ಬಿಜೆಪಿಗೆ ನಿರಾಶೆಯಾಗಿರೋದು ಸತ್ಯ. ಆದರೆ, ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಅವರು ಕಾಂಗ್ರೆಸ್​ಗೆ ಎಷ್ಟುಲಾಭ ತಂದು ಕೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

Comments are closed.