ಕರ್ನಾಟಕ

ಕರ್ಚೀಫು ಸೈಲೆಂಟಾಗಿ ಸೈಡಿಗಿದ್ರೆ ಸರಿ ಇಲ್ಲಾಂದ್ರೆ ಜನ ಯೂಸ್ ಮಾಡಿ ಬಿಸಾಕ್ತಾರೆ; ಶಿವರಾಮೇಗೌಡರಿಗೆ ಯಶ್ ಆವಾಜ್..!

Pinterest LinkedIn Tumblr


ಮಂಡ್ಯ: “ಕರ್ಚೀಫು ಸೈಲೆಂಟಾಗಿ ಸೈಡಿಗಿದ್ರೆ ಸರಿ ಇಲ್ಲಾಂದ್ರೆ ಜನ ಯೂಸ್ ಮಾಡಿ ಬಿಸಾಕ್ತಾರೆ” ಎಂದು ಜೆಡಿಎಸ್ ಸಂಸದ ಎಲ್.ಆರ್. ಶಿವರಾಮೇಗೌಡರ ವಿರುದ್ಧ ನಟ ಯಶ್ ಗುಡುಗಿದ್ದಾರೆ.

ಶುಕ್ರವಾರ ನಾಗಮಂಗಳದ ಜಂಟಿ ಸಮಾವೇಶದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವಾತಂತ್ರ್ಯ ಅಭ್ಯರ್ಥಿ ಸುಮಲತಾ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದ ಶಿವರಾಮೇಗೌಡ “ಸುಮಲತಾ ಅಂಬರೀಶ್ ಜಯಲಲಿತಾರನ್ನೂ ಮೀರಿಸುವ ಮಾಯಾಂಗನೆ ರೀತಿ ಹೋರಾಟ ಮಾಡುತ್ತಿದ್ದಾರೆ. ವಿನಾಕಾರಣ ನಮ್ಮ ಮೇಲೆ ಆರೋಪ ಮಾಡಿ ನೀಚ ರಾಜಕಾರಣ ಮಾಡುತ್ತಿದ್ದಾರೆ” ಎಂದು ಅಸಭ್ಯವಾಗಿ ಟೀಕಿಸಿದ್ದರು.

ಶಿವರಾಮೇಗೌಡ ಅವರ ‘ಮಾಯಾಂಗನೆ’ ಎಂಬ ಅಪ್ರಬುದ್ಧ ಟೀಕೆಯ ವಿರುದ್ಧ ತಿರುಗಿ ಬಿದ್ದಿರುವ ರಾಕಿಂಗ್ ಸ್ಟಾರ್, ಸಂಸದರು ನಮ್ಮ ನಾಲಿಗೆ ಮೇಲೆ ಹಿಡಿತ ಹೊಂದಿದ್ದರೆ ಸರಿ ಎಂದು ಇದೀಗ ಬಹಿರಂಗವಾಗಿ ಆವಾಜ್ ಹಾಕುವ ಮೂಲಕ ಮಂಡ್ಯ ಚುನಾವಣೆ ಮತ್ತಷ್ಟು ಕಾವು ಪಡೆಯುತ್ತಿದೆ.

ಚಿಕ್ಕೋನಳ್ಳಿಯಲ್ಲಿ ಸುಮಲತಾ ಪರ ಪ್ರಚಾರದ ವೇಳೆ ಮಾತನಾಡಿರುವ ಯಶ್, “ಪತಿ ಇಲ್ಲ ಅಂದ್ರೆ ಹೆಂಗಸರು ಮನೆಯೊಳಗೇ ಕುಳಿತಿರಬೇಕಾ? ಮನೆಯ ಹೊರಗೆ ಬರಲೇಬಾರದಾ? ಇವತ್ತು ಒಬ್ಬ ಹೆಣ್ಣು, ಒಂದು ರಾಜ್ಯ ಸರಕಾರವನ್ನೇ ಎದುರು ಹಾಕಿಕೊಂಡಿದ್ದಾರೆ” ಎಂದು ಮೈತ್ರಿ ಪಕ್ಷಗಳನ್ನು ಟೀಕಿಸಿದ್ದಾರೆ.

ಅಲ್ಲದೆ, “ ಬಸ್​ನಲ್ಲಿ ಸೀಟಿಗೆ ಕರ್ಚೀಫ್ ಹಾಕುವಂತೆ ಎಂಪಿ ಸೀಟಿಗೆ ಶಿವರಾಮೇಗೌಡರನ್ನು ಮುಖ್ಯಮಂತ್ರಿಗಳು ಕರ್ಚೀಫ್ ತರ ಬಳಸಿದ್ದಾರೆ. ಹೀಗಾಗಿ ಶಿವರಾಮೇಗೌಡ ಕರ್ಚೀಫ್ ರೀತಿ ಸೈಲೆಂಟಾಗಿ ಸುಮ್ಮನಿದ್ರೆ ಸರಿ. ಇಲ್ಲಾಂದ್ರೆ ನಿಮ್ಮ ದುರಹಂಕಾರಕ್ಕೆ ಜನರೇ ಬುದ್ಧಿ ಕಲಿಸ್ತಾರೆ” ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.

Comments are closed.