ಕರ್ನಾಟಕ

ನಿಖಿಲ್ ಎಲ್ಲಿದ್ದೀಯಪ್ಪ ಸಿನೆಮಾದಲ್ಲಿ ಅಭಿನಯಿಸಲು ನಾನು ಸಿದ್ಧ: ನಟಿ ತಾರಾ

Pinterest LinkedIn Tumblr


ಬೆಳಗಾವಿ: ನಿಖಿಲ್ ಎಲ್ಲಿದ್ದೀಯಪ್ಪ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಹಲವರು ಟಿಕ್ ಟಾಕ್ ವಿಡಿಯೋ ಮೂಲಕ ನಾಟಕ, ವಾಟ್ಸ್ ಆ್ಯಪ್ ಮೂಲಕ ವಿಡಿಯೋಗಳನ್ನು ಮಾಡಿ ಹರಿಬಿಟ್ಟಿದ್ದರು. ಇದೀಗ ಇದೇ ಹೆಸರಲ್ಲಿ ಚಿತ್ರ ಮಾಡಿದರೆ ಅದರಲ್ಲಿ ನಾನು ನಟಿಸಲು ರೆಡಿ ಎಂದು ನಟಿ, ಬಿಜೆಪಿ ಮಾಜಿ ಎಂಎಲ್ಸಿ ತಾರಾ ಹೇಳಿದ್ದಾರೆ.

ಚಿತ್ರದಲ್ಲಿ ಪಾತ್ರ ಚೆನ್ನಾಗಿದ್ದರೆ ಕಥೆ ಇಷ್ಟವಾದರೇ ಖಂಡಿತವಾಗಿಯೂ ನಾನು ಅಭಿನಯಿಸುತ್ತೇನೆ. ಒಳ್ಳೆಯ ನಿರ್ದೇಶಕ, ಕಥೆ ಮತ್ತು ಸಂಭಾವ್ಯ ಸಿಕ್ಕರೆ ಚಿತ್ರದಲ್ಲಿ ನಟಿಸುತ್ತೇನೆ ಎಂದರು.

ನಿಖಿಲ್ ಎಲ್ಲಿದ್ದೀಯಪ್ಪ ಟೈಟಲ್ ನಲ್ಲಿ ಸಿನಿಮಾ ಮಾಡಲು ಹಲವರು ಪ್ಲಾನ್ ಮಾಡಿದ್ದು ಅಲ್ಲದೆ ಚಿತ್ರದ ಶೀರ್ಷಿಕೆಗಾಗಿ 7 ರಿಂದ 8 ಮಂದಿ ಟೈಟಲ್ ಕೊಡುವಂತೆ ಫಿಲಂ ಚೇಂಬರ್ ಗೆ ಮನವಿ ಮಾಡಿದ್ದರು. ಆದರೆ ಇದೆಲ್ಲಾ ರಾಜಕೀಯಕ್ಕೆ ಸಂಬಂಧಿಸುವುದರಿಂದ ವಾಣಿಜ್ಯ ಮಂಡಳಿ ಯಾರಿಗೂ ಟೈಟಲ್ ನೀಡಲು ನಿರಾಕರಿಸಿತ್ತು.

ಇನ್ನು ಚಿತ್ರ ನಟರ ಕುರಿತಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ತಾರಾ ಅವರು, ಸಿಎಂ ಮಗ ಸೋಲುವ ಭಯದಲ್ಲಿ ಈ ರೀತಿ ಮಾತಾಡುತ್ತಿದ್ದಾರೆ. ಯಾರೇ ಆಗಲಿ ವೈಯಕ್ತಿಕ ತೇಜೋವಧೆ ಮಾಡಬಾರದು ಎಂದು ನಟಿ ಹೇಳಿದ್ದಾರೆ.

Comments are closed.