ಕರ್ನಾಟಕ

ದೇವೇಗೌಡರು ನಾಟಿ ಬೀಜ, ಮೋದಿ ಹೈಬ್ರೀಡ್​ ಬೀಜ; ನಾಟಿ ಬೀಜ ಉಳಿಸಿ ಎಂದ ಸಿ.ಎಂ. ಇಬ್ರಾಹಿಂ

Pinterest LinkedIn Tumblr


ಮಂಡ್ಯ: ಮೋದಿ ಹಾಕೋ ಸೂಟು ಲಕ್ಷ- ಲಕ್ಷ ರೂಪಾಯಿಯದ್ದು. ನಮ್ಮ ದೇವೇಗೌಡರು ಉಡುವ ಪಂಚೆ- ಜುಬ್ಬ ಸರಳವಾದುದು. ಯಾವುದಪ್ಪಾ ಅಚ್ಚೇ ದಿನ? ನಿನ್ನ ಬಾಯಿಗೆ ಮಣ್ಣಾಕ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಏಕವಚನದಲ್ಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಳವಳ್ಳಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿರುವ ಸಿ.ಎಂ. ಇಬ್ರಾಹಿಂ, ಪೆಟ್ರೋಲ್ ಬೆಲೆ 78 ರೂ. ಆಗಿದೆ. ಇದು ಅಚ್ಚೇ ದಿನಾನ? ದೇವೇಗೌಡರು ಒರಿಜಿನಲ್ಲು, ನಾಟಿ ಬೀಜ. ನಮಗೆ ನಾಟಿಬೀಜ ಬೇಕೇ ಹೊರತು ಮೋದಿಯಂತಹ ಹೈಬ್ರೀಡ್ ಬೀಜವಲ್ಲ. ದೇವೇಗೌಡರ ತಳಿಯನ್ನು ಉಳಿಸಿ ಎಂದು ಆಗ್ರಹಿಸಿದ್ದಾರೆ.

ಉರ್ದುದಲ್ಲಿ ಮಾತನಾಡತೊಡಗಿದ ಸಿ.ಎಂ. ಇಬ್ರಾಹಿಂ, ನಾವು ಮೋದಿಗೆ ಮಾತ್ರವಲ್ಲ ಆತನ ಅಪ್ಪನಿಗೂ ಹೆದರುವುದಿಲ್ಲ. ಅಂತಹ ತಾಕತ್ತು ನಮಗಿದೆ. ಇದೇ 18ನೇ ತಾರೀಖು ಮಂಡ್ಯದಲ್ಲಿ ನೀವು ಟುಂಯ್​ ಎಂದು 1ನೇ ನಂಬರ್​ನ ಬಟನ್ ಒತ್ತಿದರೆ ದೆಹಲಿಯಲ್ಲಿ ಮೋದಿ ಕುಂಯ್​ ಅಂತಾರೆ ಎಂದು ಪ್ರಾಸಬದ್ಧವಾಗಿ ಮಾತನಾಡಿದ ಇಬ್ರಾಹಿಂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಳವಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ವರಿಷ್ಠ ಎಚ್​.ಡಿ. ದೇವೇಗೌಡರು ಕೂಡ ಪ್ರಚಾರ ನಡೆಸಿದ್ದಾರೆ. ಅತ್ತ ಸುಮಲತಾ ಪರವಾಗಿ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಕೂಡ ಬಿರುಸಿನ ಪ್ರಚಾರ ನಡೆಸಿದ್ದಾರೆ. ಜೆಡಿಎಸ್​ ನಾಯಕರು ಸುಮಲತಾ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ಮುಂದುವರಿಸಿದ್ದಾರೆ. ಚುನಾವಣೆಗೆ ಇನ್ನು ಆರೇ ದಿನಗಳು ಬಾಕಿ ಇರುವುದರಿಂದ ಚುನಾವಣಾ ಕಣ ಮತ್ತಷ್ಟು ರಂಗೇರತೊಡಗಿದೆ.

ಮೈಸೂರಿನಲ್ಲಿಯೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಸಿ.ಎಂ. ಇಬ್ರಾಹಿಂ, ಹೊಸ ಭಿಕ್ಷುಕನಿಗೆ ಭಿಕ್ಷೆ ಬೇಡುವ ಅರ್ಜೆಂಟಾಗಿದೆ ಎಂದು ಪ್ರಧಾನಿಯನ್ನು ಭಿಕ್ಷುಕನಿಗೆ ಹೋಲಿಸಿದ್ದಾರೆ. 5 ವರ್ಷಗಳಲ್ಲಿ ಪ್ರಧಾನಿ ಮೋದಿ ಏನು ಮಾಡಿದ್ರು? ಅಮೆರಿಕಾ, ಲಂಡನ್, ನ್ಯೂಯಾರ್ಕ್​ನಲ್ಲಿ ಮೋದಿ ಸುತ್ಆಡುವ ಬದಲು ಹಳ್ಳಿ-ಹಳ್ಳಿ ಸುತ್ತಬೇಕಾಗಿತ್ತು.

ಮೋದಿ ಹಾಕೋ ಬಟ್ಟೆ 10 ಲಕ್ಷ ಮೌಲ್ಯದ್ದು. ಅದೇ ಮಾಜಿ ಪ್ರಧಾನಿ ದೇವೇಗೌಡರ ಬಟ್ಟೆ 300 ರೂ.ನದ್ದು. ಪಂಚೆ 200 ರೂ, ಜುಬ್ಬಾ 100 ರೂ. ಅವರು ತಿನ್ನೋದು ಮುದ್ದೆ, ಸೊಪ್ಪಿನ ಸಾರು. ಇದು ರೈತನ ಮಗನ ನಿಜವಾದ ಜೀವನ. 10 ಲಕ್ಷ ಬಟ್ಟೆ ಹಾಕೊಂಡು ಫಾರಿನ್ ರೌಂಡ್ ಹೊಡಿಯೋದಲ್ಲ ಎಂದು ಟೀಕಿಸಿದ್ದಾರೆ.

Comments are closed.