ಕರ್ನಾಟಕ

ಪ್ರಚಾರದ ವೇಳೆ ಎರಡು ಬಾರಿ ಕೈ ಕೊಟ್ಟ ಕುಮಾರಸ್ವಾಮಿ ಕಾರು; ಎಚ್​ಡಿಕೆಗೆ ಶುರುವಾದ ಸೋಲಿನ ಭಯ?

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರು ಘಳಿಗೆ, ಭವಿಷ್ಯ, ದೇವರನ್ನು ಹೆಚ್ಚಾಗಿ ನಂಬುತ್ತಾರೆ. ಅದೃಷ್ಟ ಸಂಖ್ಯೆ ಬಗ್ಗೆಯೂ ಅಪಾರ ನಂಬಿಕೆ ಹೊಂದಿದ್ದಾರೆ ಎಚ್​ಡಿಕೆ. ಇದೇ ರೀತಿ ಅವರ ಬಳಿ ಇರುವ ರೇಂಜ್​ ರೋವರ್​ ಕಾರು ಅದೃಷ್ಟದ ಸಂಕೇತ ಎಂದೇ ನಂಬಿದ್ದರು. ಆದರೆ, ಈಗ ಈ ಕಾರು ಚುನಾವಣೆ ಸಮಯದಲ್ಲಿ ಎರಡು ಬಾರಿ ಕೈಕೊಟ್ಟಿರುವುದು ಅವರನ್ನು ಚಿಂತೆಗೀಡು ಮಾಡಿದೆಯಂತೆ.

2013 ಎಪ್ರಿಲ್ 3ರಂದು ರೇಂಜ್ ರೋವರ್ ಕಾರನ್ನು ಕುಮಾರಸ್ವಾಮಿ ಖರೀದಿಸಿದ್ದರು. ರಾಮನಗರದ ಆರ್​ಟಿಒ ಕಚೇರಿಯಲ್ಲಿ ಈ ಕಾರನ್ನು ನೋಂದಣಿ ಮಾಡಲಾಗಿತ್ತು. 2018ರ ಎಪ್ರಿಲ್ ತಿಂಗಳವರೆಗೆ ನಿಖಿಲ್ ಕುಮಾರಸ್ವಾಮಿ ಈ ಕಾರನ್ನು ಬಳಕೆ ಮಾಡುತ್ತಿದ್ದರು. ಚುನಾವಣೆ ಬಳಿಕ ತಮ್ಮ ಫಾರ್ಚುನರ್ ಕಾರ್ ಬಳಕೆ ಮಾಡುವ ಬದಲು 6633 ಸಂಖ್ಯೆಯ ರೇಂಜ್​ ರೋವರ್​ ಕಾರನ್ನು ಕುಮಾರಸ್ವಾಮಿ ಬಳಸಲು ಆರಂಭಿಸಿದ್ದರು.

ದಶಕಗಳಿಂದ ಇಲ್ಲದ ಅಧಿಕಾರ ಈ ಕಾರು ತಂದುಕೊಟ್ಟಿದೆ ಎನ್ನುವ ಬಲವಾದ ನಂಬಿಕೆ ಕುಮಾರಸ್ವಾಮಿ ಅವರದ್ದು. ಸರ್ಕಾರಿ ಕಾರ್ ಬಳಸದೆ ಇದೇ ಕಾರನ್ನು ಅವರು ಬಳಸುತ್ತಿದ್ದರು. ಆದರೆ, ಈಗ ರೇಂಜ್​ ರೋವರ್​ ಕೈಕೊಟ್ಟಿದೆ. ನಿಖಿಲ್ ನಾಮಪತ್ರ ಸಲ್ಲಿಕೆ ದಿನವೂ ಈ ಕಾರು ಕೆಟ್ಟು ನಿಂತಿತ್ತು. ಕುಮಾರಸ್ವಾಮಿ ಮಂಡ್ಯದಲ್ಲಿ ನಿನ್ನೆ ಪ್ರಚಾರ ನಡೆಸಿದ್ದರು. ನಿನ್ನೆಯೂ ಕಾರು ಕೈ ಕೊಟ್ಟಿದೆ. ಇದರಿಂದ ಕುಮಾರಸ್ವಾಮಿ ಚಿಂತೆಗೀಡಾಗಿದ್ದಾರಂತೆ.

14 ವರ್ಷಗಳಲ್ಲಿ ಕುಮಾರಸ್ವಾಮಿ 5 ಕಾರನ್ನು ಬಳಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಆದಾಗ ಅಂಬಾಸಿಡರ್ ಹಾಗೂ ಕರೋಲಾ ಕಾರನ್ನು ಬಳಕೆ ಮಾಡಿದ್ದರು. ಅದಲ್ಲದೆ 8181 ಸಂಖ್ಯೆಯ ಎಂಡೋವರ್ ಹಾಗೂ 9945 ಸಂಖ್ಯೆಯ ಇನ್ನೊಂದು ಫಾರ್ಚುನರ್ ಕಾರನ್ನು ಅವರು ಬಳಸಿದ್ದರು.

Comments are closed.