ಕರ್ನಾಟಕ

ಮತ ಹಾಕಿ ಬಂದವರಿಗೆ ಉಚಿತ ಪಾನಕ, ಬೆಣ್ಣೆ ದೋಸೆ, ಕಾಫಿ/ಟೀ!

Pinterest LinkedIn Tumblr


ಬೆಂಗಳೂರು: ಮತದಾನ ಉತ್ತೇಜನಕ್ಕಾಗಿ ಬೆಂಗಳೂರಿನ ಹೋಟೆಲ್ ಮಾಲೀಕರೊಬ್ಬರು ವಿಶೇಷ ಆಫರ್ ನೀಡುತ್ತಿದ್ದಾರೆ. ಮತ ಹಾಕಿ ಬಂದವರಿಗೆ ಉಚಿತವಾಗಿ ಪಾನಕ, ಬೆಣ್ಣೆ ದೋಸೆ, ಕಾಫಿ/ಟೀ ನೀಡಲು ಮುಂದಾಗಿದ್ದಾರೆ.

ನಗರದ ಆರ್ ಬಿಐ ಬ್ಯಾಂಕ್ ಹತ್ತಿರ ಇರುವ ನಿಸರ್ಗ ಹೋಟೆಲ್ ವಿಶೇಷ ಆಫರ್ ನೀಡಿದೆ. ಮತದಾನ ಉತ್ತೇಜನಕ್ಕಾಗಿ ವಿಧಾನಸಭಾ ಚುನಾವಣೆ ವೇಳೆ ಉಚಿತವಾಗಿ ಕಾಫಿ/ಟೀ ನೀಡಿದ್ದರು. ಕಳೆದ ಬಾರಿಯ ಉತ್ಸಾಹ ಕಂಡು ಈ ಬಾರಿ ಮತದಾನ ಮಾಡಿ ಬಂದು ಮತ ಹಾಕಿ ಗುರುತು ತೋರಿಸಿದ್ರೆ ಸಾಕು ಬಿಸಿ ಬಿಸಿ ಬೆಣ್ಣೆ ದೋಸೆ ಸವಿಯಬಹುದು. ಅಷ್ಟೇ ಅಲ್ಲದೇ ಮತ ಹಾಕಿ ಬೆಳೆಗ್ಗೆ ಬಂದರೆ ಕಾಫಿ ಮಧ್ಯಾಹ್ನ ವೇಳೆಗೆ ತಂಪು ಪಾನಕವನ್ನು ಸಹ ಕುಡಿಯಬಹುದು ಎಂದು ಹೋಟೆಲ್ ಮಾಲೀಕ ಕೃಷ್ಣ ರಾಜ್ ಹೇಳುತ್ತಾರೆ.

ಈ ಉಚಿತ ಆಫರ್ ಕೇವಲ 18 ನೇ ತಾರೀಖು ಮಾತ್ರ ಇರಲಿದ್ದು, ಅಂದು ಮತದಾನದ ಸಮಯದವರೆಗು ಈ ಉಚಿತ ಆಫರ್ ನೀಡಲಾಗುತ್ತದೆ. ಈ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಸಾರ್ವಜನಿಕರು ಒಬ್ಬ ಉತ್ತಮ ರಾಜಕಾರಣಿಯ ಆಯ್ಕೆ ನಮ್ಮೆಲ್ಲರದ್ದು ಹಾಗಾಗಿ ಪ್ರತಿಯೊಬ್ಬರು ಮತದಾನ ಮಾಡಿ ಎಂದು ಹೇಳುತ್ತಾರೆ.

Comments are closed.