ಕರ್ನಾಟಕ

ದೇವೇಗೌಡರು ಹೆಗಲಮೇಲೆ ಕೈ ಇಟ್ಟರೆ 7 ವರ್ಷ ಭವಿಷ್ಯನೇ ಇಲ್ಲ

Pinterest LinkedIn Tumblr


ತುಮಕೂರು: ತುಮಕೂರು ಬಿಜೆಪಿ ಅಭ್ಯರ್ಥಿ ಬಸವರಾಜು ಸಚಿವ ಶ್ರೀನಿವಾಸು ಅವರ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಸಚಿವ ಶ್ರೀನಿವಾಸುಗೆ ತಿರುಗೇಟು‌ ನೀಡಿದ ಜಿಎಸ್ ಬಸವರಾಜು, ಪಾಲಿಟಿಕ್ಸ್ ಗೆ ಶ್ರೀನಿವಾಸ್ ಅನ್ಫಿಟಬಲ್, ಯಾರೋ‌ ಮಾಡಿದ್ ಕೆಲಸವನ್ನ ನಾನೆ ಮಾಡ್ದೆ ಅಂತಾನೆ, ಹೆಚ್ಎಎಲ್ ನ ನಾನೇ ತಂದೆ ಅಂತಾನೆ. ನಾನು ಕೆಲಸ ಮಾಡಿದ್ದೀನಿ ಅನ್ನೋದು ಸುಳ್ಳಾ‌? ಎಂದು ಪ್ರಶ್ನೆ ಮಾಡಿದರು.

ಪರಮೇಶ್ವರ್ ಡಿಸ್ಟಿಕ್ ಮಿನಿಸ್ಟರ್ ಆಗಿರೋದು ವೇಸ್ಟ್. ತುಮಕೂರಲ್ಲಿ ಅವನಿಗೆ ಎಬಿಸಿಡಿ ಊರುಗಳೇ ಗೊತ್ತಿಲ್ಲ. ಹೇಮಾವತಿ, ನೇತ್ರಾವತಿ ಈ ಎರಡು ನದಿಗಳೇ ನಮಗೆ ಜೀವನದಿ, ನೀರಿನ ಕಾನ್ಸೆಪ್ಟ್ ಗೊತ್ತಿದ್ಯಾ ಪರಮೇಶ್ವರ್ ಗೆ ಎಂದು ವಾಗ್ದಾಳಿ ಮಾಡಿದರು.

ನಾನು ಎಂಜಿನಿಯರ್ ಅಲ್ದೇ ಇದ್ರೂ ನೀರಾವರಿ ತಜ್ಞ ಪರಮಶಿವಯ್ಯರ ಬಳಿ ಸಾಕಷ್ಟು ಮಾಹಿತಿ ಪಡೆದುಕೊಂಡಿದ್ದೇನೆ. ಪರಮೇಶ್ವರ್ ಗೆ ನೀರಾವರಿ ಎಬಿಸಿಡಿಯೇ ಗೊತ್ತಿಲ್ಲ. ಟಿಎಂಸಿ ಅಂದ್ರೇನು ಎಫ್ ಐಆರ್ ಎಲ್ ಅಂದ್ರೇನು ಅಂತ ತಿಳ್ಕೊಳ್ಳಿ. ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೆನಾಲ್ ಗಳು ಹೋಗಿವೆ ಅಂತ ಹೇಳ್ಸಿ ನಾನು ಹೇಳ್ತೀನಿ ಅವ್ನು ಹೇಳಲಿ. ದೇವೇಗೌಡ್ರು ಪ್ರಾಣ ಹೋದ್ರು ತುಮಕೂರಿನವರಿಗೆ ಹೇಮಾವತಿ ನೀರು ಕೊಡಲ್ಲ ಅಂತ ಹೇಳಿದ್ರು ಅಂತಾವರನ್ನ ತಂದು ತುಮಕೂರಲ್ಲಿ ನಿಲ್ಲಿಸಿದ್ದಾರೆ ನಾಚಿಕೆ ಆಗಲ್ವಾ ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ಮಾಡಿದರು.

ಒಬ್ಬ ಡಿಸಿಎಂ ಆಗಿ ಈ ಬಾರಿ ನೀರು ಬಿಟ್ಟಿದ್ದಾರ? ತುಮಕೂರಿಗೆ ಕಡಬ ಕೆರೆಗೆ ನೀರಿಲ್ಲ. ಲಿಫ್ಟ್ ಇರಿಗೇಷನ್ ಗೆ ನೀರಿಲ್ಲ. ಡಿಸಿಎಂ ಆಗಿ ಎಲ್ಲಾ ರೀತಿಯ ಎಂಜಾಯ್ ಮೆಂಟ್ ಮಾಡ್ತಾನೆ ಅದೇರೀತಿ ಇವರಿಗೆ ಜಿಲ್ಲೆಯ ಬಗ್ಗೆ ಚಕಾರ ಎತ್ತೋಕೆ ಶಕ್ತಿ ಇಲ್ವಾ? ಎಂದು ಪ್ರಶ್ನೆ ಮಾಡಿದರು.

ಸಚಿವ ಶ್ರೀನಿವಾಸ ಹುಟ್ಟಿದ ಕಲ್ಚರ್ರೇ ಅಂಥಾದ್ದು. ಶ್ರೀನಿವಾಸ್ ಗೆ ಹೆಂಡ ಸಾರಾಯಿ ಮಾರೋ ಅಂಗಡಿ ಕೊಡಿಸಿದವ್ರು ಯಾರು ಅಂತ ಕೇಳಿ. ಶ್ರೀನಿವಾಸ್ ಅವರ ಅಪ್ಪನನ್ನ ಕೇಳಿ ಸಂಸಾರಕ್ಕೆ ಕೊಡುಗೆ ಏನು ಅಂತ ಇವನಿಗೇನು ಗೊತ್ತು ಎಂದು ಏಕವಚನದಲ್ಲೇ ವಾಗ್ದಾಳಿ ಮಾಡಿದರು.

ನಾನು ಯಾವ ಜಮೀನನ್ನೂ ಪುಕ್ಟಟ್ಟೆ ತಗೊಂಡಿಲ್ಲ ಆಗಿನ ಕಾಲಕ್ಕೆ ಎಕರೆಗೆ 25 ಸಾವಿರ ಕೊಟ್ಟು ಕೊಂಡುಕೊಂಡಿದ್ದೇನೆ. ಒಬ್ಬ ಮಂತ್ರಿಯಾಗಿ ಗುಬ್ಬಿ ಕೆರೆಗೆ ನೀರುಬಿಡಿಸೋಕೆ ಯೋಗ್ಯತೆ ಇಲ್ಲ. ದೇವೇಗೌಡರು ಹಿರಿಯರು ನನಗಿಂತ ಹತ್ತುವರ್ಷ ದೊಡ್ಡವರು. ಆನೆ ನಡೆದ ದಾರಿ ಅವರ್ದು, ನಾವು ನಡೆದ ದಾರಿ ನಮ್ದು ಎಂದರು.

ದೇವೇಗೌಡರ ಕುಟುಂಬ ವೈ.ಕೆ ರಾಮಯ್ಯ, ಸೇರಿದಂತೆ ಹಲವಾರು ಜನ್ರನ್ನ ತುಳಿದಿದ್ದಾರೆ. ಅವರ ಜಿಲ್ಲೆಯಲ್ಲಿ ಮರ್ಡರ್ ಗಳಾಗಿವೆ. ಯಾರ ಕುಮ್ಮಕ್ಕೂ ಇಲ್ದೇ ಮರ್ಡರ್ ಆಗಲ್ಲ.. ಒಟ್ನಲ್ಲಿ ಅವರ ಜನಾಂಗದಲ್ಲಿ ಯಾರನ್ನೂ ಮೇಲಕ್ಕೆ ಬೆಳೆಯಲು ಬಿಟ್ಟಿಲ್ಲ. ದೇವೇಗೌಡ್ರು ಹೆಗಲಮೇಲೆ ಕೈ ಇಟ್ರೂ ಅಂದ್ರೆ ಏಳು ವರ್ಷ ಭವಿಷ್ಯನೇ ಇರೊಲ್ಲ ಬಹಳ ಕಷ್ಟ ಹುಷಾರಿಗಿರ್ಬೇಕಾಗುತ್ತೆ ಎಂದರು.

Comments are closed.