ಕರ್ನಾಟಕ

ದೇವೇಗೌಡ-ಕುಮಾರಸ್ವಾಮಿ ಸುಳ್ಳು ಹೇಳದಿದ್ದರೆ ಜೆಡಿಎಸ್​​​ 37 ಸೀಟು ಗೆಲ್ಲುತ್ತಿರಲಿಲ್ಲ: ಯಡಿಯೂರಪ್ಪ!

Pinterest LinkedIn Tumblr


ಬೀದರ್​​​: ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈಗಾಗಲೇ ರಾಜ್ಯಾದ್ಯಂತ ಕಾಂಗ್ರೆಸ್​​-ಜೆಡಿಎಸ್​​ ಮತ್ತು ಬಿಜೆಪಿ ನಾಯಕರು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಮತದಾರರನ್ನು ಸೆಳೆಯಲು ಅಭಿವೃದ್ದಿ ವಿಚಾರಗಳನ್ನು ಮಾತನಾಡಬೇಕಿದ್ದ ಈ ಮೂರು ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದು ಗಮನಾರ್ಹ. ಇತ್ತ ಮೈತ್ರಿ ನಾಯಕರು ಬಿಜೆಪಿ ವಿರುದ್ಧ ಕೆಂಡಕಾರುತ್ತಿದ್ದರೇ, ಅತ್ತ ಕೇಸರಿ ಪಡೆ ದೋಸ್ತಿ ಪಕ್ಷಗಳ ವಿರುದ್ಧ ಟೀಕಾ ಪ್ರಹಾರ ಮುಂದುವರಿಸಿದೆ.

ಈ ಮಧ್ಯೆ ಇಂದು ಕೂಡ ಜೆಡಿಎಸ್​​ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​​ ಯಡಿಯೂರಪ್ಪ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ. ‘ಅಪ್ಪ-ಮಗ ಸುಳ್ಳು ಹೇಳದಿದ್ದರೆ 37 ಸೀಟನ್ನು ಗೆಲ್ಲುತ್ತಿರಲಿಲ್ಲ. ಡೈರಿ ಆರೋಪ ಸಾಬೀತಾದರೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಈ ಬಗ್ಗೆ ರಾಹುಲ್ ಗಾಂಧಿ ಅಪಪ್ರಚಾರ ಮಾಡುತ್ತಿದ್ಧಾರೆ. ಇನ್ನೊಂದೆಡೆ ಜೆಡಿಎಸ್​​ ವರಿಷ್ಠರು ನಮ್ಮ ವಿರುದ್ಧ ಉರುಳಿಲ್ಲದ ಆರೋಪ ಎಸಗುತ್ತಿದ್ಧಾರೆ. ಒಂದು ವೇಳೆ ನಾವು ಬೀದರ್​​​ ಲೋಕಸಭೆ ಕ್ಷೇತ್ರ ಗೆದ್ದರೇ, ಇಂದಿನ ಮೈತ್ರಿ ಸರ್ಕಾರ ಕೇವಲ 24 ಗಂಟೆಗಳಲ್ಲಿ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ದೇವೆಗೌಡರು, ನಾನು ಮತ್ತು ಸಿದ್ದರಾಮಯ್ಯ ಒಟ್ಟಿಗೆ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇವೆ. ಈ ಮೂಲಕ ಬಿಜೆಪಿ ಬಲ ಕುಗ್ಗಿಸಲು ಹೋರಾಟ ಮಾಲಿದ್ದೇವೆ ಎಂದಿದ್ದರು. ತಮ್ಮ ಇಡೀ ಭಾಷಣದುದ್ದಕ್ಕೂ ಪ್ರಧಾನಿ ಮೋದಿ ವಿರುದ್ಧ ಬಹಿರಂಗವಾಗಿಯೇ ಗೌಡರು ಹರಿಹಾಯ್ದಿದ್ದರು. ಮೋದಿ 5 ವರ್ಷ ದೇಶ ಆಡಳಿತ ನಡೆಸಿದರೇ, ವಾಜಪೇಯಿ 6 ವರ್ಷ ಆಡಳಿತ ನಡೆಸಿದ್ದಾರೆ. ಆದರೆ, ಮೋದಿ ಅವರಂತೆ ಕೆಟ್ಟದಾಗಿ ಎಂದು ಕೂಡ ವಾಜಪೇಯಿ ನಡೆದುಕೊಂಡಿಲ್ಲ ಎಂದು ಕುಟುಕಿದರು.

ಇನ್ನು ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ. ವಿಶೇಷವಾಗಿ ಬೆಂಗಳೂರಿನಲ್ಲಿ ಬಿಜೆಪಿ ಒಂದೇ ಒಂದು ಸೀಟು ಗೆಲ್ಲಲು ಬಿಡುವುದಿಲ್ಲ. ಅದಕ್ಕಾಗಿಯೇ ಕಾಂಗ್ರೆಸ್​-ಜೆಡಿಎಸ್ ಒಟ್ಟಿಗೆ ಕೆಲಸ ಮಾಡುತ್ತಿದೆ ಎಂದರು.

ಜತೆಗೆ ನಾನೇ ಎಂದು ಮೆರೆಯುತ್ತಿದ್ದ ಮೋದಿ ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಮೂರು ರಾಜ್ಯಗಳಲ್ಲಿ ಸೋತರು. ಮೂರು ರಾಜ್ಯಗಳು ಕೈ ತಪ್ಪಿದ ನಂತರದಲ್ಲಿ ಐಟಿ ಮತ್ತು ಇಡಿ ದಾಳಿ ಮೂಲಕ ಸಣ್ಣ ಪಕ್ಷಗಳನ್ನು ಮುಗಿಸಲು ಹೊರಟಿದ್ದಾರೆ. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್​​ನ ಎಲ್ಲಾ ಮೈತ್ರಿ ಅಭ್ಯರ್ಥಿಗಳು ಬಿಜೆಪಿ ಅಭ್ಯರ್ಥಿಗಳನ್ನು ಮಣಿಸಿ ಗೆಲ್ಲಬೇಕೆಂಬುದೇ ನಮ್ಮ ಗುರಿ ಎಂದು ತಿಳಿಸಿದರು.

Comments are closed.