ಕರ್ನಾಟಕ

ಯಡಿಯೂರಪ್ಪ-ಇಬ್ರಾಹಿಂ ಮಧ್ಯೆ ‘ಗಂಡಸ್ತನ’ದ ಕಿತ್ತಾಟ

Pinterest LinkedIn Tumblr


ಬೀದರ್: ಬಿಜೆಪಿಯಲ್ಲಿ ಗಂಡಸರೇ ಇಲ್ಲ ಎಂಬ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಹೇಳಿಕೆಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಕತ್ ಟಾಂಗ್ ಕೊಟ್ಟಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಯಾರ ಹತ್ತಿರ ಗಂಡಸ್ತನ ಇದೆ ಎಂಬುದು ಗೊತ್ತಾಗಲಿದೆ ಎಂದು ಟಾಂಗ್ ಕೊಟ್ಟಿದ್ದಾರೆ.

ಬೀದರ್ ನಗರದ ಗಣೇಶ ಮೈದಾನದಲ್ಲಿ ಆಯೋಜಿಸಿದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್ ಅವರು 1 ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಆಗ ಕಾಂಗ್ರೆಸ್ ನಾಯಕರಿಗೆ ಗಂಡಸ್ತನ ಯಾರ ಹತ್ರ ಇದೆ ಎನ್ನುವುದು ತಿಳಿಯಲಿದೆ ಎಂದು ತಿರುಗೇಟು ನೀಡಿದರು.

ಮಂಡ್ಯ ರಾಜಕಾರಣದಲ್ಲಿ ಸುಮಲತಾ ಅಂಬರೀಶ್ ಅವರನ್ನು ಅವಮಾನಿಸುತ್ತಿರುವ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಜಾತಿ ರಾಜಕಾರಣದ ಮಾತನಾಡಿ ಎಲ್ಲರನ್ನು ಅಪಮಾನ ಮಾಡುತ್ತಿದ್ದು,‌ ಜನ ತಿರುಗಿ ಬಿದ್ದಿದ್ದಾರೆ.

ಮಂಡ್ಯದಲ್ಲಿ ಸುಮಲತಾ ಗೆದ್ದೆ ಗೆಲ್ಲುತ್ತಾರೆ ಎಂದು ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Comments are closed.