ರಾಷ್ಟ್ರೀಯ

ಮದುವೆಯಾದ ಎರಡೇ ವಾರದಲ್ಲಿ ಬಿಟ್ಟು ಹೋದ ಪತಿ, IAS ಆದ ಪತ್ನಿ

Pinterest LinkedIn Tumblr


ಅಹಮದಾಬಾದ್: ಆಕೆ ಸಾವಿರಾರು ಹೊಂಗನಸುಗಳನ್ನು ಹೊತ್ತು ಹಸೆ ಮಣೆ ತುಳಿದಿದ್ದಳು. ಆದರೆ ವಿಧಿಯ ಇಚ್ಛೆ ಬೇರೆಯೇ ಇತ್ತು. ಮದುವೆಯಾದ ಎರಡೇ ವಾರದಲ್ಲಿ ಪತಿ ಆಕೆಯನ್ನು ಬಿಟ್ಟು ಹೋಗಿದ್ದ. ಮತ್ತಾತ ಮರಳಲೇ ಇಲ್ಲ.

ಹೊಸ ಬದುಕು ಆರಂಭವಾಗುವಷ್ಟರಲ್ಲಿ ಅಂತ್ಯ ಕಂಡಿತ್ತು. ಕೆಲ ದಿನ ಆಕೆಗೂ ಅನ್ನಿಸಿತು ನನ್ನ ಬದುಕು ಮುಗಿದು ಹೋಯಿತೆಂದು. ಆದರೆ ಕೆಲವೇ ಕೆಲವು ದಿನಗಳಲ್ಲಿ ಆಕೆ ಎದ್ದು ನಿಂತಿದ್ದಳು. ಮನಸಲ್ಲೇ ಅವಳು ಹೇಳಿಕೊಂಡಿದ್ದು ಇಷ್ಟನ್ನು- ಮದುವೆಯೇ ಮನುಷ್ಯನನ್ನು ಪರಿಪೂರ್ಣಗೊಳಿಸುತ್ತದೆ ಎಂಬುದು ಸುಳ್ಳು. ಸ್ರ್ತೀಯ ಗುರುತು ಆತನ ಪತಿ ಅಲ್ಲ, ಆಕೆ ತನ್ನ ಅಸ್ತಿತ್ವವನ್ನು ತಾನೇ ಸೃಷ್ಟಿಸಿಕೊಳ್ಳುತ್ತಾಳೆ.

ಅಂದು ಎದ್ದು ನಿಂತ ಆಕೆ ಮತ್ತೆ ಹಿಂತಿರುಗಿ ನೋಡಲಿಲ್ಲ. ಮತ್ತೀಗ ಆಕೆ IAS ಅಧಿಕಾರಿಯಾಗಿದ್ದಾಳೆ.

ಹೌದು, ಇದು 2012ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿದ್ದ ಗುಜರಾತಿನ ಏಕಮಾತ್ರ ಮಹಿಳೆ ಎನಿಸಿದ್ದ ಕೋಮಲ್ ಗಣಾತ್ರ ಅವರ ಕಥೆ. ಅವರ ಬದುಕಿನ ಸಂಘರ್ಷ ನಮ್ಮ ನಿಮ್ಮ ಬಗುಕಿನಂತೆಯೇ ಇದೆ. ಆನಿವಾಸಿ ಭಾರತೀಯನಾಗಿದ್ದ ಆಕೆಯ ಪತಿ ಮದುವೆಯಾದ 2 ವಾರಗಳಲ್ಲಿಯೇ ಆಕೆಯನ್ನು ತ್ಯಜಿಸಿದ್ದ. ಆತ ನ್ಯೂಜಿಲ್ಯಾಂಡ್‌ನಲ್ಲಿ ಉದ್ಯಮಿಯಾಗಿದ್ದು ಆತನನ್ನು ಹುಡುಕಿಕೊಂಡು ಆಕೆ ಅಲ್ಲಿಗೂ ಹೋದಳು. ಆದರೆ ಪ್ರಯೋಜನವಾಗಲಿಲ್ಲ. ನೂರಾರು ಸಮಸ್ಯೆಗಳೆಲ್ಲವನ್ನು ಎದುರಿಸಿ ಆಕೆ ನ್ಯೂಜಿಲ್ಯಾಂಡ್‌ನಿಂದ ಭಾರತಕ್ಕೆ ವಾಪಸ್ಸಾಗಲು ಸಫಲಳಾದಳು.

ಬಳಿಕ ಆಕೆ ಸರಕಾರಿ ಶಿಕ್ಷಕಿ ಕೆಲಸ ಗಿಟ್ಟಿಸಿಕೊಂಡರು ಮತ್ತು UPSC ಗಾಗಿ ತಯಾರಿ ಆರಂಭಿಸಿದರು. ಅಂತರ್ಜಾಲ ಅಷ್ಟೇ ಅಲ್ಲ ಸುದ್ದಿ ಪತ್ರಿಕೆ ಸಹ ಬರದ ಹಿಂದುಳಿದ ಗ್ರಾಮದಲ್ಲಿ ಅವರ ಪರೀಕ್ಷಾ ತಯಾರಿ ನಡೆದಿತ್ತು. ಕಠಿಣ ಅಭ್ಯಾಸ ನಡೆಸಿ ಮೂರನೇ ಪ್ರಯತ್ನದಲ್ಲಿ IAS ಪಾಸು ಮಾಡಿದ ಅವರು ಮತ್ತೀಗ IRS ಅಧಿಕಾರಿಯಾಗಿದ್ದಾರೆ.

ನೀವು ಕೂಡ IAS ತಯಾರಿ ನಡೆಸಿದ್ದರೆ ನೀವು ಕೋಮಲ್ ಅವರ ಕಥೆಯನ್ನು ಕೇಳಲೇಬೇಕು. ಅವರ ಈ ವೀಡಿಯೋ ನಿಮಗೆ ನಿಜಕ್ಕೂ ಸಹಾಯಕವಾಗಲ್ಲದು.

Comments are closed.