ಕರ್ನಾಟಕ

ತೇಜಸ್ವೀನಿ ಅನಂತ್ ಕುಮಾರ್ ಬದಲು ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಲು ಏನು ಕಾರಣಗಳು ಗೊತ್ತಾ?

Pinterest LinkedIn Tumblr


ಬೆಂಗಳೂರು: ಲೋಕಸಭಾ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿ ಹೆಸರನ್ನು ಬಿಜೆಪಿ ಪಕ್ಷ ನಿನ್ನೆ ರಾತ್ರಿ ಘೋಷಿಸಿದೆ. ಆರ್​ಎಸ್​ ಎಸ್​​ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಪಕ್ಷ ಟಿಕೆಟ್​ ನೀಡಿದೆ.

ಈ ಬಾರಿ ಕುಟುಂಬ ರಾಜಕಾರಣಕ್ಕೆ ತಿಲಾಂಜಲಿ ಹಾಡಲು ಹೈಕಮಾಂಡ್​ ಮಾಡಿದ ಬದಲಾವಣೆಯ ಸಲುವಾಗಿ ಯುವ ನಾಯಕ ತೇಜಸ್ವಿ ಸೂರ್ಯ ಅವರನ್ನು ಕಣಕ್ಕಿಳಿಸಲಿದೆ. ಬಿಜೆಪಿ ಪಕ್ಷವು ಯುವ ನಾಯಕನಿಗೆ ಅವಕಾಶ ನೀಡುವ ಮೂಲಕ ಗೆಲುವು ಸಾಧಿಸುವ ಮಾಸ್ಟರ್​ ಪ್ಲ್ಯಾನ್​​ ಒಂದನ್ನು ಮಾಡಿಕೊಂಡಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಪ್ರತಿಸ್ಪರ್ಧಿಯಾಗಿ ಅಖಾಡಕ್ಕೆ ಇಳಿಯುವ ಬಿ.ಕೆ. ಹರಿಪ್ರಸಾದ್​ ವಿರುದ್ಧ ತೇಜಸ್ವಿ ಸೂರ್ಯ ಸ್ಫರ್ಧಿಸಲಿದ್ದಾರೆ.

ತೇಜಸ್ವಿ ಸೂರ್ಯ ಕೆಲವು ವರ್ಷಗಳಿಂದ ಆರ್​ಎಸ್​ ಎಸ್​ನ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಳೆದ ಲೋಕಸಭಾ ಚುನಾವಣೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಸಾಮಾಜಿಕ ಜಾಲತಾಣ ಲೀಡ್​ ಮಾಡಿದ್ದರು. ಹೀಗಾಗಿ, ಬಿಜೆಪಿ ಹೈಕಮಾಂಡ್​ನಲ್ಲೂ ಗಮನ ಸೆಳೆದಿದ್ದರು.

ಬಿಜೆಪಿ ಪಕ್ಷದ ಸಂಘಟನಾ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದ ತೇಜಸ್ವಿ ಸೂರ್ಯ ಪಕ್ಷದ ಯುವ ಬ್ರಿಗೇಡ್​ನಲ್ಲೂ ಕೆಲಸ ಮಾಡಿದ್ದಾರೆ. ದೇಶ, ದೇಶ ಪ್ರೇಮ ಮತ್ತು ಹಿಂದುತ್ವದ ಪ್ರತಿಪಾದಕನಾದ ತೇಜಸ್ವಿ ಪ್ರಖರ ವಾಗ್ಮಿಯಾಗಿ ಗುರುತಿಸಿಕೊಂಡಿದ್ದಾರೆ. ಮಾತಿನ ಚಾತುರ್ಯ ಹೊಂದಿರುವ ತೇಜಸ್ವಿ ನಾಯಕತ್ವದ ಗುಣ ಹೊಂದಿದ್ದಾರೆ. ಬಿಜೆಪಿ ಪಕ್ಷವನ್ನು ವಕ್ತಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ತೇಜಸ್ವಿ ಅನೇಕ ಯುವಕರನ್ನು ಒಗ್ಗೂಡಿಸಿಕೊಂಡಿದ್ದಾರೆ.

27 ವರ್ಷದ ತೇಜಸ್ವಿ ಸೂರ್ಯ ಅವರ ಕಾರ್ಯಕ್ಷಮತೆ ನೋಡಿ ಬಿಜೆಪಿ ಪಕ್ಷವು ದಕ್ಷಿಣ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಮುಂದಾಗಿದೆ. ಯುವ ಮಹತ್ವಾಕಾಂಕ್ಷಿ ತೇಜಸ್ವಿ ಸೂರ್ಯ ಶಾಸಕ ರವಿಸುಬ್ರಮಣ್ಯ ಅವರ ಸೋದರ ಸಂಬಂಧಿಯಾಗಿದ್ದಾರೆ.

Comments are closed.