ಕರ್ನಾಟಕ

ಪ್ರಿಯಾಂಕಾ ಗಾಂಧಿ ವಿರುದ್ಧ ಕಿಡಿಕಾರಿದ್ದ ಸ್ಮೃತಿ ಇರಾನಿಗೆ ರಮ್ಯಾ ಕೊಟ್ಟ ಟಾಂಗ್ ನೋಡಿ…!

Pinterest LinkedIn Tumblr

ಬೆಂಗಳೂರು: ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಮ್ಮ ಕೊರಳಿನಲ್ಲಿದ್ದ ಹೂವಿನ ಹಾರವನ್ನು ತೆಗೆದು ದಿವಂಗತ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರತಿಮೆಗೆ ಹಾಕಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಇದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಿಯಾಂಕಾ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದ್ದು ಮಾಜಿ ಪ್ರಧಾನಿಗೆ ಮಾಡಿದ ಅವಮಾನ ಎಂದು ಹೇಳಿದ್ದರು. ಅಲ್ಲದೆ ಪ್ರಿಯಾಂಕಾ ವಾದ್ರಾರ ವಿಡಿಯೋವನ್ನು ಟ್ವೀಟ್ ಮಾಡಿ ಕಿಡಿಕಾರಿದ್ದರು.

ಸ್ಮೃತಿ ಇರಾನಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಂಸದೆ, ನಟಿ ರಮ್ಯಾ ಅವರು ಸ್ಮೃತಿ ಇರಾನಿ ಮಹಿಳೆಯರು ಮಾಡುವ ಕೆಲಸದಲ್ಲಿ ಕೆಟ್ಟದ್ದನ್ನೇ ಹುಡುಕುತ್ತಾರೆ. ಮಹಿಳೆ ಮುಟ್ಟಿದ ಹಾರವನ್ನು ಪ್ರತಿಮೆಗೆ ಹಾಕಿದಾಕ್ಷಣ ಅದು ಮೈಲಿಗೆಯಾಗುವುದಿಲ್ಲ. ನಮ್ಮ ದೇಹವೇ ದೇಗುಲ ಎಂದು ಹಿಂದೂ ಧರ್ಮ ಹೇಳುತ್ತದೆ. ದೇವರು ಎಲ್ಲಾ ಕಡೆ ಇದ್ದಾನೆ. ಪ್ರಿಯಾಂಕಾ ಮಾಡಿದರಲ್ಲಿ ಅವಮಾನ ಮಾಡುವಂತದ್ದು ಏನಿದೆ? ನೀವೂ ಕೂಡಾ ಮಹಿಳೆ ಎಂದು ರಮ್ಯಾ ಹೇಳಿದ್ದಾರೆ.

Comments are closed.