ಕರ್ನಾಟಕ

ಮಾ.24ಕ್ಕೆ ರೈತ ಪಕ್ಷ ಬೆಂಬಲದ ಅಧಿಕೃತ ಘೋಷಣೆ: ಸುಮಲತಾಗೆ ಮತ್ತಷ್ಟು ಬಲ

Pinterest LinkedIn Tumblr


ಮಂಡ್ಯ: ಮಂಡ್ಯ ಲೋಕಸಭಾ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಸ್ಟಾರ್ ನಟರ ಬೆಂಬಲ ಮಾತ್ರವಲ್ಲದೇ ರೈತರ ಪಕ್ಷದ ಬೆಂಬಲ ಸಿಕ್ಕಿದೆ. ಈ ಮೂಲಕ ಸುಮಲತಾ ಅಂಬರೀಶ್ ಅವರಿಗೆ ಮಂಡ್ಯದಲ್ಲಿ ಮತ್ತಷ್ಟು ಬಲ ಬಂದಂತಾಗಿದೆ.

ಇಂದು [ಶುಕ್ರವಾರ] ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿರುವ ನಿವಾಸಕ್ಕೆ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ನಿವಾಸಕ್ಕೆ ಸುಮಲತಾ ಭೇಟಿ ನೀಡಿದರು. ಚುನಾವಣೆಯಲ್ಲಿ ಬೆಂಬಲಿಸುವಂತೆ ಪುಟ್ಟಣ್ಣಯ್ಯ ಪತ್ನಿ ಸುನೀತಾ ಪುಟ್ಟಣ್ಣಯ್ಯ ಅವರಲ್ಲಿ ಸುಮಲತಾ ಅಂಬರೀಶ್ ಮನವಿ ಮಾಡಿದರು.

ಮಾತುಕತೆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಸುನೀತಾ ಪುಟ್ಟಣ್ಣಯ್ಯ, ‘ ಸುಮಲತಾ ಅವರಿಗೆ ಬೆಂಬಲ ಕೊಡಲು ಮನಸ್ಸು ಮಾಡಿದ್ದೇವೆ. ಈ ಬಗ್ಗೆ ಮಾರ್ಚ್ 24ರಂದು ಸ್ವರಾಜ್ ಇಂಡಿಯಾ ಪಕ್ಷದ ಸಭೆ ನಡೆಸಿ ಬೆಂಬಲ ಕೊಡುವ ಬಗ್ಗೆ ಅಧಿಕೃತ ನಿರ್ಧಾರ ಪ್ರಕಟಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸ್ವರಾಜ್ ಇಂಡಿಯಾ ಪಕ್ಷ, ಸುಮಲತಾ ಅವರಿಗೆ ಬೆಂಬಲ ನೀಡುವುದು ಮೇಲ್ನೋಟಕ್ಕೆ ಖಚಿತವಾಗಿದ್ದು, ಈ ಬಗ್ಗೆ ಮಾ.24ಕ್ಕೆ ಅಧಿಕೃತವಾಗಿ ತಿಳಿಯಲಿದೆ. ಒಟ್ಟಿನಲ್ಲಿ ಅಂಬಿ ಫ್ಯಾನ್ಸ್ ಜತೆಗೆ ಸ್ಟಾರ್ ನಟರ ಬೆಂಬಲದಿಂದ ಸುಮಲತಾ ಅಂಬರೀಶ್ ಬಲ ಬಂದಿದೆ. ಇದೀಗ ಸ್ವರಾಜ್ ಇಂಡಿಯಾ ಪಕ್ಷ ಬೆಂಬಲ ನೀಡಲು ಮುಂದಾಗಿದ್ದು, ಸುಮಲತಾ ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ.

Comments are closed.