ಬೆಂಗಳೂರು: ಬಿಜೆಪಿ ವೆಬ್‍ಸೈಟ್ ನಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗದ್ದಕ್ಕೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿ ಲೇವಡಿ ಮಾಡಿದ್ದಾರೆ.
ಬಹುಶಃ ವಿಜೇತರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಬಹುದು ಎಂದು ಬರೆದು ರಮ್ಯಾ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ವೆಬ್‍ಸೈಟಿನಲ್ಲಿ,”ನಾವು ಶೀಘ್ರವೇ ವಾಪಸ್ ಬರುತ್ತೇವೆ” ಎಂದು ಸಂದೇಶ ಪೇಜ್ ಲಿಂಕ್ ಓಪನ್ ಮಾಡಿದಾಗ ಕಾಣಸಿಗುತ್ತಿದೆ. ಈ ವಿಚಾರವನ್ನೇ ಮುಂದಿಟ್ಟುಕೊಂಡು ರಮ್ಯಾ ಬಿಜೆಪಿ ವೆಬ್‍ಸೈಟನ್ನು ಲೇವಡಿ ಮಾಡಿದ್ದಾರೆ.
ಮಾರ್ಚ್ 5 ರಂದು ಬಿಜೆಪಿ ವೆಬ್‍ಸೈಟ್ ಹ್ಯಾಕ್ ಆಗಿತ್ತು. ಹ್ಯಾಕ್ ಆದ ವಿಚಾರವನ್ನು ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಪ್ರಸ್ತಾಪಿಸಿ ಕಾಲೆಳೆದಿದ್ದಾರೆ.
ಭಾಯಿ ಔರ್ ಬೆಹನೋ.. ಈಗ ಬಿಜೆಪಿ ವೆಬ್ ಸೈಟನ್ನು ಒಂದು ಬಾರಿ ನೋಡಿ ಎಂದು ಹೇಳಿ ಕಾಲೆಳೆದಿದ್ದರು. ಕೂಡಲೇ ಪ್ರತಿಕ್ರಿಯಿಸಿದ ಬಿಜೆಪಿ, ಕೆಲವೇ ಕ್ಷಣಗಳಲ್ಲಿ ಬಿಜೆಪಿ ವೆಬ್ ಸೈಟ್ ಸರಿಹೋಗಲಿದೆ ಎಂದು ಸ್ಪಷ್ಟಪಡಿಸಿತ್ತು.
Comments are closed.