ರಾಷ್ಟ್ರೀಯ

ಹೋಟೆಲ್ ನಲ್ಲಿ ಸಿಕ್ಕಿಬಿದ್ದ ಪತಿ – ಕಿಟಕಿಯಿಂದ ಹೊರಜಿಗಿದ ಪ್ರೇಯಸಿ

Pinterest LinkedIn Tumblr


ಇಂದೋರ್: ಪತಿ ತನ್ನ ಪ್ರೇಯಸಿ ಜೊತೆಯಲ್ಲಿ ಹೋಟೆಲ್ ರೂಮಿನಲ್ಲಿ ಇದ್ದಾಗ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಪ್ರಿಯಕರನ ಪತ್ನಿಯನ್ನು ನೋಡಿದ ಪ್ರೇಯಸಿ ಎರಡನೇ ಮಹಡಿಯಿಂದ ಜಿಗಿದು ಗಂಭೀರವಾಗಿ ಗಾಯಗೊಂಡ ಘಟನೆ ಮಧ್ಯಪ್ರದೇಶದ ಇಂದೋರ್ ನ ಲಸುಡಿಯಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಹಿಳೆಯೊಬ್ಬಳು ತನ್ನ ವಿವಾಹಿತ ಪ್ರೇಮಿ ರೂಪೇಶ್ ಜೊತೆ ಇಂದೋರ್ ನ ಜೆಎಂಸಿ ಹೋಟೆಲ್‍ಗೆ ಹೋಗಿದ್ದಳು. ಈ ವೇಳೆ ರೂಪೇಶ್‍ನ ಪತ್ನಿ ಪ್ರಿಯಾ ಕೂಡ ಅವನನ್ನು ಹಿಂಬಾಲಿಸಿ ಅದೇ ಹೋಟೆಲ್‍ನ 208 ರೂಂ ನಂಬರ್ ಗೆ ತಲುಪಿದ್ದಾಳೆ.

ಈ ವೇಳೆ ಮಹಿಳೆ ರೂಪೇಶ್‍ನ ಪತ್ನಿಯನ್ನು ನೋಡಿ ಭಯದಿಂದ ಎರಡನೇ ಮಹಡಿಯ ಕಿಟಕಿಯಿಂದ ಹೊರಗೆ ಜಿಗಿದಿದ್ದಾಳೆ. ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ.

ರೂಪೇಶ್ ಹಾಗೂ ಮಹಿಳೆ ಇಬ್ಬರು ವಿವಾಹಿತರಾಗಿದ್ದು, ಫೇಕ್ ಐಡಿ ಕಾರ್ಡ್ ತೋರಿಸಿ ಹೋಟೆಲಿನಲ್ಲಿ ರೂಂ ಬುಕ್ ಮಾಡಿದ್ದಾರೆ. ಸದ್ಯ ಪೊಲೀಸರು ರೂಪೇಶ್‍ನನ್ನು ಬಂಧಿಸಿದ್ದಾರೆ. ಅಲ್ಲದೆ ಹೋಟೆಲ್ ಮಾಲೀಕ ನಿರ್ಲಕ್ಷ್ಯ ವಹಿಸಿದಕ್ಕೆ ಆತನ ವಿರುದ್ಧ ಕೂಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೂಪೇಶ್ ಪತ್ನಿ ಪ್ರಿಯಾ ತನ್ನ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ್ದಳು. ರೂಪೇಶ್‍ನನ್ನು ರೆಡ್ ಹ್ಯಾಂಡಾಗಿ ಹಿಡಿಯಲು ಪ್ರಿಯಾ ಆತನನ್ನು ಹಿಂಬಾಲಿಸಿ ಹೋಟೆಲ್ ತಲುಪಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಸಂತೋಷ್ ದುದಿ ತಿಳಿಸಿದ್ದಾರೆ.

Comments are closed.