ಕರ್ನಾಟಕ

ಪಶ್ಚಿಮ ಬಂಗಾಲದಲ್ಲಿ ನಕ್ಸಲ್ ದಾಳಿಗೆ ಬೆಳಗಾವಿ ಯೋಧ ಹುತಾತ್ಮ

Pinterest LinkedIn Tumblr


ಬೆಳಗಾವಿ: ಪಶ್ಚಿಮ ಬಂಗಾಳದಲ್ಲಿ ನಕ್ಸಲ ವಿರುದ್ಧ ಕಾರ್ಯಾಚರಣೆಯ ವೇಳೆ ನಕ್ಸಲರ ಗುಂಡು ತಾಗಿ ಗಂಭೀರವಾಗಿ ಗಾಯಗೊಂಡಿದ್ದ ಜಿಲ್ಲೆಯ ಬಿಎಸ್‍ಎಫ್ ಯೋಧ ಹುತಾತ್ಮರಾಗಿದ್ದಾರೆ.

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿ ನಾವಗ ಗ್ರಾಮದ ನಿವಾಸಿ ರಾಹುಲ್ ವಸಂತ ಶಿಂಧೆ (29) ಹುತಾತ್ಮರಾದ ಯೋಧ. ರಾಹುಲ್ ಅವರ ಪಾರ್ಥಿವ ಶರೀರವನ್ನು ಸೋಮವಾರ ಹುಟ್ಟೂರಿಗೆ ತರಲಾಗುತ್ತದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ನಾಳೆಯೇ ಅಂತ್ಯಕ್ರಿಯೆ ನೆರವೇರಲಿಸಲು ಸಿದ್ಧತೆ ನಡೆದಿದೆ.

ರಾಹುಲ್ ಅವರು ನಾಲ್ಕು ವರ್ಷಗಳ ಹಿಂದೆಯಷ್ಟೇ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್‍ಎಫ್)ಗೆ ಸೇರಿಕೊಂಡಿದ್ದರು. ರಾಹುಲ್ ಅವರು ಇತ್ತೀಚೆಗಷ್ಟೇ ಹುಡುಗಿಯನ್ನು ನೋಡಿ ಮದುವೆಗೆ ಒಪ್ಪಿಕೊಂಡಿದ್ದರು. ಹೀಗಾಗಿ ನಿಶ್ಚಿತಾರ್ಥ ಮುಗಿಸಿಕೊಂಡು ಬಂದು ಮತ್ತೆ ಕೆಲಸಕ್ಕೆ ಹಾಜರಾಗಿದ್ದರು. ಮನೆಯವರು ಮುಂದಿನ ತಿಂಗಳು ಮದುವೆ ನಿಶ್ಚಯ ಕೂಡ ಮಾಡಿದ್ದರು. ಆದರೆ ನಕ್ಸಲರ ಅಟ್ಟಹಾಸಕ್ಕೆ ರಾಹುಲ್ ಅವರು ಹುತಾತ್ಮರಾಗಿದ್ದಾರೆ.

ಹುತಾತ್ಮ ರಾಹುಲ್ ಅವರ ಹಿರಿಯ ಸಹೋದರ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Comments are closed.