ಕರ್ನಾಟಕ

ನಾನು ಮಂಡ್ಯಕ್ಕೆ ಸ್ವಾರ್ಥಕ್ಕಾಗಿ ಬಂದಿಲ್ಲ, ನಿಮ್ಮ ಗುಲಾಮನಾಗಿ ದುಡಿಯಲು ಬಂದಿದ್ದೇನೆ: ನಿಖಿಲ್‌ ಕುಮಾರಸ್ವಾಮಿ

Pinterest LinkedIn Tumblr


ಮಂಡ್ಯ: ನಾನು ಮಂಡ್ಯಕ್ಕೆ ಸ್ವಾರ್ಥಕ್ಕಾಗಿ ಬಂದಿಲ್ಲ, ನಿಮ್ಮ ಗುಲಾಮನಾಗಿ ದುಡಿಯಲು ಬಂದಿದ್ದೇನೆ ಎಂದು ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

ಗುರುವಾರ ಮಂಡ್ಯದಲ್ಲಿ ನಡೆದ ಜೆಡಿಎಸ್‌ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ನಿಖಿಲ್‌, ಈ ಜಿಲ್ಲೆಯ ಜನ ನನ್ನ ತಂದೆ ಮುಖ್ಯಮಂತ್ರಿಯಾಗಲು ಕಾರಣಕರ್ತರಾಗಿದ್ದೀರಿ. ಇಲ್ಲಿ ಏಳಕ್ಕೆ ಏಳೂ ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದೀರಿ, ಹಾಗೆಯೇ ನನ್ನನ್ನೂ ನೀವು ಗೆಲ್ಲಿಸಿ ಕೊಡಬೇಕು ಎಂದು ಮನವಿ ಮಾಡಿದರು.

ನನ್ನ ತಂದೆ ಯಾವಾಗಲೂ ಹೇಳುತ್ತಾರೆ ಎಳೂ ಜನ್ಮ ಎತ್ತಿ ಬಂದರೂ ನಿಮ್ಮ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದು. ನಾನು ಸ್ವಾರ್ಥಕ್ಕಾಗಿ ಮಂಡ್ಯಕ್ಕೆ ಬಂದಿಲ್ಲ. ಚಿತ್ರರಂಗದಲ್ಲಿ ತಕ್ಕ ಮಟ್ಟಿನ ಯಶಸ್ಸು ಪಡೆದಿದ್ದೆ. ನಾನು ಯಾವಾಗಲೂ ಯೋಚನೆ ಮಾಡುತ್ತೇನೆ, ಇಂತಹ ಕುಟುಂಬದಲ್ಲಿ ಭಗವಂತ ನನ್ನನ್ನು ಹುಟ್ಟಿಸಿದ್ದಾನೆ ಯಾಕೆ ಎಂದು, ಅದು ನಿಮ್ಮಂತವರ ಸೇವೆ ಮಾಡುವ ಸಲುವಾಗಿ, ನನಗೆ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದರು.

ಗೋ ಬ್ಯಾಕ್‌ ನಿಖಿಲ್‌ ಎನ್ನುತ್ತಿದ್ದಾರೆ. ನಾನು ಕೊನೆಯ ಉಸಿರು ಇರುವವರೆಗೆ ನಿಮ್ಮ ಗುಲಾಮ ನಾಗಿ ಸೇವೆ ಮಾಡುತ್ತೇನೆ.ಕೆಲವರು ಗೋ ಬ್ಯಾಕ್‌ ನಿಖಿಲ್‌ ಎನ್ನುತ್ತಿದ್ದಾರೆ. ನಾನು ಹಿಂದಕ್ಕೆ ಹೋಗಬೇಕಾ?ನಿಮ್ಮೊಂದಿಗೆ ಮುಂದಕ್ಕೆ ಸಾಗಬೇಕಾ ಎಂದು ಪ್ರಶ್ನಿಸಿದರು.

Comments are closed.