ಕರ್ನಾಟಕ

ಸುಮಲತಾ ಜೊತೆ ಕ್ಷಮೆ ಕೇಳಲಿ, ಇಲ್ಲವೇ ಜೆಡಿಎಸ್ ಪಕ್ಷದ ಚಿಹ್ನೆಯನ್ನು ಬದಲಿಸಿ: ಈಶ್ವರಪ್ಪ

Pinterest LinkedIn Tumblr

ಮೈಸೂರು: ನಟಿ ಸುಮಲತಾ ಅಂಬರೀಶ್ ಅವರ ವಿರುದ್ಧ ಅವಹೇಳನಕಾರಿ ಮಾತನಾಡಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಕ್ಷಮೆ ಕೇಳಬೇಕು ಇಲ್ಲವೇ ಜೆಡಿಎಸ್ ಪಕ್ಷದ ಚಿಹ್ನೆಯನ್ನು ಬದಲಿಸಿ ಯಾವುದಾದರೂ ಪ್ರಾಣಿಯ ಚಿಹ್ನೆಯನ್ನು ಇಟ್ಟುಕೊಳ್ಳಬೇಕೆಂದು ರಾಜ್ಯ ಬಿಜೆಪಿ ನಾಯಕ, ಶಾಸಕ ಕೆ.ಎಸ್.ಈಶ್ವರಪ್ಪ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಈಶ್ವರಪ್ಪ ಜೆಡಿಎಸ್‌ನವರು ತೆನೆ ಹೊತ್ತ ಮಹಿಳೆ ಚಿಹ್ನೆ ಹೊಂದಿದ್ದಾರೆ. ಆದರೆ ಅವರು ಮಹಿಳೆಯರ ಬಗ್ಗೆ ಅಗೌರವದಿಂದ ಮಾತಾಡುತ್ತಿದ್ದಾರೆ. ಸಹೋದರಿ ಸುಮಲತಾ ಅವರ ಬಗ್ಗೆ ತುಚ್ಛವಾಗಿ ಮಾತನಾಡುತ್ತಿದ್ದಾರೆ. ರೇವಣ್ಣ ಇದುವರೆಗೂ ಕ್ಷಮೆ ಕೇಳಿಲ್ಲ. ಅವರ ಬದಲಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್, ಸಿಎಂ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಕ್ಷಮೆ ಕೇಳಿದ್ದಾರೆ. ರೇವಣ್ಣ ಅವರಿಂದ ಈ ಕೂಡಲೇ ಕ್ಷಮೆ ಕೇಳಿಸಬೇಕೆಂದು ಒತ್ತಾಯಿಸಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ರೇವಣ್ಣ ಬಳಿ ಕ್ಷಮೆ ಕೋರಿಸಬೇಕು ಎಂದು ಒತ್ತಾಯಿಸಿದ್ದಾರೆ.

Comments are closed.