ಕರ್ನಾಟಕ

ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಸ್ಪರ್ಧೆ ಮಾಡುವುದು ಖಚಿತ: ಸುಮಲತಾ ಅಂಬರೀಷ್

Pinterest LinkedIn Tumblr

ಮೈಸೂರು: ಮಂಡ್ಯ ಜಿಲ್ಲೆಯ ಎಲ್ಲ ‘ಕೈ’ ನಾಯಕರು ನನಗೆ ಬೆಂಬಲ ನೀಡಿದ್ದಾರೆ,. ಹೀಗಾಗಿ ಮಂಡ್ಯ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸುಮಲತಾ ಅಂಬರೀಶ್‌ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಈಗಾಗಲೇ ಜಿಲ್ಲಾದ್ಯಂತ ಕಾಂಗ್ರೆಸ್‌ ನಾಯಕರು ಹಾಗೂ ಕಾರ‍್ಯಕರ್ತರು, ಅಂಬಿ ಅಭಿಮಾನಿಗಳನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಇನ್ನೂ ಕೆಲವು ದಿನ ಕಾಂಗ್ರೆಸ್‌ ನಿರ್ಧಾರಕ್ಕಾಗಿ ಕಾಯುತ್ತೇನೆ. ಆದರೆ, ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸ್ಪರ್ಧೆ ಖಚಿತ” ಎಂದು ಪುನರುಚ್ಚರಿಸಿದರು.

ಕೆಲ ಮಾಧ್ಯಮಗಳಲ್ಲಿ ಹಾಗಬ ಸೋಷಿಯಲ್ ಮೀಡಿಯಾಗಳು ಮತದಾರರನನ್ನು ದಿಕ್ಕು ತಪ್ಪಿಸುತ್ತಿವೆ, ಸ್ಪರ್ಧೆಯಿಂದ ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

Comments are closed.