ಕರ್ನಾಟಕ

ಕುಮಾರಸ್ವಾಮಿಯ ಕಾರ್ ಡೋರ್ ತೆಗೆಯುವ ಕೆಲಸಕ್ಕೂ ಸಿದ್ಧ: ಎಲ್.ಆರ್. ಶಿವರಾಮೇಗೌಡ 

Pinterest LinkedIn Tumblr


ಬೆಂಗಳೂರು: ನಾನು ಕೇವಲ ನಟ ಮಾತ್ರ. ಸಂಸದನಾಗಿ ನಟನೆ ಮಾಡಿದ್ದೇನೆ, ಇನ್ನು ಮುಂದೆ ಯಾವ ಪಾತ್ರ ಕೊಟ್ಟರೂ ಮಾಡುತ್ತೇನೆ. ಮುಂದೆ ಸಿಎಂ ಕುಮಾರಸ್ವಾಮಿ ಅವರ ಕಾರ್ ಡೋರ್ ತೆರೆದು ಮತ್ತೆ ಹಾಕುವ ಕೆಲಸಕ್ಕೂ ರೆಡಿಯಾಗಿದ್ದೇನೆ ಎಂದು ಹಾಲಿ ಸಂಸದ ಎಲ್​ ಆರ್​ ಶಿವರಾಮೇಗೌಡ ವ್ಯಂಗ್ಯವಾಡಿದ್ದಾರೆ.

ನಮ್ಮ ನಾಯಕರು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರು, ಸಿಎಂ ಕುಮಾರಸ್ವಾಮಿ ಅವರು ಹೇಳಿದಂತೆ ನಾನು ಇರುತ್ತೇನೆ. ನಾನು ಊಟಕ್ಕೆ ಹೋಟೆಲ್​ಗೆ ಬಂದಿದ್ದೆ ಯಾವುದೇ ನಾಯಕರನ್ನ ಭೇಟಿ ಮಾಡಲು ಬಂದಿಲ್ಲ. ನಾನು ಹೋಟೆಲ್ ಗೆ ಬಂದಾಗ ಮಾಜಿ ಸಚಿವ ಚೆಲುವರಾಯಸ್ವಾಮಿ, ಶಾಸಕ ಬಾಲಕೃಷ್ಣ ಸೇರಿದಂತೆ ಪ್ರಮುಖ ನಾಯಕರು ಇದ್ದರು. ಅವರ ಬಳಿ ಉಭಯ ಕುಶಲೋಪರಿ ವಿಚಾರಿಸಿದ್ದೇನೆ ಎಂದು ಶಿವರಾಮೇಗೌಡರು ತಿಳಿಸಿದರು.

ಮಾಜಿ ಸಚಿವ ಚೆಲುವರಾಯಸ್ವಾಮಿ, ಶಾಸಕ ಬಾಲಕೃಷ್ಣ, ಹಾಲಿ ಸಂಸದ ಎಲ್ ಆರ್ ಶಿವರಾಮೇಗೌಡ ಮತ್ತು ಬಿಜೆಪಿಯ ಶಾಸಕ ಅಶ್ವತ್ಥನಾರಾಯಣ ಖಾಸಗಿ ಹೊಟೇಲ್ ನಲ್ಲಿ ಭೇಟಿ, ಮಾತುಕತೆ ನಡೆಸಿದ್ದು ಭಾರೀ ಕುತೂಹಲ ಮೂಡಿಸಿದೆ.

ನಿಖಿಲ್ ಮಂಡ್ಯ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಅವರು ದೊಡ್ಡ ಅಂತರದಿಂದ ಗೆಲ್ಲಲಿದ್ದಾರೆ ಸುಮಲತಾ ಅಂಬರೀಶ್ ಬಗ್ಗೆ ನಮಗೆ ಗೊತ್ತಿಲ್ಲ ಆ ಬಗ್ಗೆ ನಾನು ಚರ್ಚೆ ಮಾಡಲ್ಲ ನಾನು ಹಾಲಿ ಎಂಪಿಯಾಗಿದ್ದೇನೆ. ಅಗತ್ಯಬಿದ್ದರೆ ಕಾಂಗ್ರೆಸ್ ನಾಯಕರ ಜೊತೆ ಸಭೆ ಮಾಡುತ್ತೇನೆ. ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನೆ ಮಾಡಿದರು.

ಬಿಜೆಪಿಯಲ್ಲೂ ನನಗೆ ಸ್ನೇಹಿತರು ಇದ್ದಾರೆ – ಚೆಲುವರಾಯಸ್ವಾಮಿ

ನಾನು ಈ ಹೋಟೆಲ್ ಗೆ ಬರೋದು ಸಾಮಾನ್ಯ. ನಾನು ಬಂದಾಗ ಬಿಜೆಪಿ ನಾಯಕರು ಇಲ್ಲಿಗೆ ಬಂದಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಯಾವುದೇ ಸಭೆ ನಾನು ಹೋಟೆಲ್ ನಲ್ಲಿ ಮಾಡಿಲ್ಲ. ಬಿಜೆಪಿಯಲ್ಲೂ ನನಗೆ ಸ್ನೇಹಿತರು ಇದ್ದಾರೆ. ನಾನು ಯಾರಿಗೂ ವೈರಿ ಆಗಲ್ಲ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ – ರಾಜೂಗೌಡ

ಇದೊಂದು ಸಹಜ ಮಾತುಕತೆ ಅಷ್ಟೇ ಜೆಡಿಎಸ್ ಸಂಸದ ಶಿವರಾಮೇ ಗೌಡರು ಬಂದಿದ್ದರು. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಮಾಜಿ ಸಚಿವ ಆರ್.‌ಅಶೋಕ್ ಹಾಗೂ ಮಾಜಿ ಸಿಎಂ ಎಸ್.ಎಂ ಕೃಷ್ಣ ಭೇಟಿಯಾಗಿ ಬಂದಿದ್ದಾರೆ ಸುಮಲತಾ ಬೆಂಬಲ ಕುರಿತಾಗಿ ಯಾವುದೇ ತೀರ್ಮಾನ ಇಲ್ಲ. ತ್ರಿಕೋನ ಸ್ಪರ್ಧೆ ನಡೆದರೆ ನಮ್ಮ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇದೆ ಗುಲ್ಬರ್ಗದಲ್ಲಿ ಉಮೇಶ್ ಜಾಧವ್ ಪ್ರಭಲ ಅಭ್ಯರ್ಥಿ ಅವರು ಗೆಲ್ಲೋ ವಿಶ್ವಾಸ ನಮಗಿದೆ. ಕಾನೂನು ಸಲಹೆ ಪಡೆದುಕೊಂಡು ರಾಜಿನಾಮೆ ಕೊಟ್ಟಿದ್ದಾರೆ ಸ್ಪೀಕರ್ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಬಿಜೆಪಿ ಶಾಸಕ ರಾಜೂಗೌಡ ಗೌಡ ತಿಳಿಸಿದರು.

Comments are closed.