ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಇಂದು ಜೆ.ಪಿ.ಭವನದಲ್ಲಿ ಲೋಕಸಭಾ ಚುನಾವಣೆ ಮತ್ತು ಸೀಟು ಹಂಚಿಕೆ ಕುರಿತು ಪಕ್ಷದ ಸಭೆ ನಡೆಯಿತು.
ಸಭೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕುರಿತು ಮಾತುಕತೆ ನಡೆಯಿತು. ಈ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಸಭೆಯ ನಂತರ ಮಾತನಾಡಿದ ಎಚ್.ಡಿ.ದೇವೇಗೌಡ ಅವರು, ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ವಿಚಾರವಾಗಿ ಇನ್ನು ಅಂತಿಮವಾಗಿಲ್ಲ. ಮೈಸೂರು ಅಂತಾರೆ, ತುಮಕೂರು ಅಂತಾರೆ. ಆದರೆ ಇನ್ನು ಯಾವುದನ್ನು ಫೈನಲ್ ಮಾಡಿಲ್ಲ. ಅದಕ್ಕೆ ಇನ್ನು ಸಮಯ ಇದೆ ಎಂದು ಹೇಳಿದರು.
ಸೀಟು ಹಂಚಿಕೆ ಬಗ್ಗೆ ಈಗಾಗಲೇ ಮಾತನಾಡಿದ್ದೇನೆ. ನಮ್ಮ ಪಕ್ಷದಿಂದ ನಾನು ಭಾಗಿಯಾಗಿದ್ದೆ. ಇವತ್ತು ದೆಹಲಿಯಲ್ಲಿ ಕಾಂಗ್ರೆಸ್ ಸಭೆ ನಡೆದಿದೆ. ಇಲ್ಲಿನ ಸ್ಥಳೀಯ ನಾಯಕರು ಹೋಗಿದ್ದಾರೆ. ಒಂದೆರಡು ದಿನದಲ್ಲಿ ಸೀಟು ಹಂಚಿಕೆ ವಿಚಾರ ಬಗೆಹರಿಸಲಾಗುತ್ತದೆ. ಕೆಲವು ಪದಾಧಿಕಾರಿಗಳ ಬದಲಾವಣೆಗೆ ಇಂದಿನ ಸಭೆಯಲ್ಲಿ ಚರ್ಚೆ ಮಾಡಲಾಯ್ತು ಎಂದು ಜೆಡಿಎಸ್ ವರಿಷ್ಠ ತಿಳಿಸಿದರು.
Comments are closed.