ಕರ್ನಾಟಕ

ವಾಟ್ಸ್‌ಆ್ಯಪ್‌​​ನಲ್ಲಿ ಚುನಾವಣಾ​​ ಪ್ರಚಾರ ಮಾಡಿದರೆ ಜೈಲು​​​!

Pinterest LinkedIn Tumblr


ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ 17ನೇ ಲೋಕಸಭಾ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್​​​.18 ಮತ್ತು 23 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಖುದ್ದು ಕೇಂದ್ರ ಚುನಾವಣಾ ಆಯುಕ್ತ ಸುನೀಲ್ ಅರೋರಾ ಅವರೇ, ಇಂದು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಈಗಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ವಾಟ್ಸ್‌ಆ್ಯಪ್‌ನಲ್ಲಿ ಎಲೆಕ್ಷನ್​​ ಪ್ರಚಾರ ಮಾಡುವಂತಿಲ್ಲ ಎಂದು ಆದೇಶಿಸಿದ್ದಾರೆ.

ವಾಟ್ಸ್‌ಆ್ಯಪ್‌​​, ಫೇಸ್​​​ಬುಕ್​​ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವಂತಿಲ್ಲ. ಒಂದು ವೇಳೆ ನೀವು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಪ್ರಚಾರ ಮಾಡಿದ್ದಲ್ಲಿ, ಜೈಲು ಕಂಬಿ ಎಣಿಸೋದು ಗ್ಯಾರಂಟಿ ಎನ್ನಲಾಗಿದೆ. ಈಗಾಗಲೇ ವಾಟ್ಸ್‌ಆ್ಯಪ್‌ ಗ್ರೂಪ್​​ಗಳಲ್ಲಿ ಚುನಾವಣಾ ಪ್ರಚಾರಕ್ಕೆ ಚುನಾವಣಾ ಆಯೋಗ ನಿರ್ಬಂಧ ಹೇರಲಾಗಿದೆ.

ಚುನಾವಣೆ ಹೊಸ್ತಿಲಲ್ಲಿಯೇ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಲು ಮತ್ತು ಇತರೆ ವಿಚಾರಗಳನ್ನು ಮಾಹಿತಿ ನೀಡಲು ವಾಟ್ಸ್‌ಆ್ಯಪ್‌ ಗ್ರೂಪ್‌ ಭಾರೀ ಸಹಕಾರಿಯಾಗಲಿದೆ. ವ್ಯಾಟ್ಸ್​​ಆ್ಯಪ್​​ ಕೇವಲ ಸುಳ್ಳು ಸುದ್ದಿ ಹಬ್ಬಿಸಲು, ಕಾಲಾಹರಣಕ್ಕೆ ಸೀಮಿತ ಎನ್ನುವಷ್ಟರ ಮಟ್ಟಿಗೆ ಅಗ್ಗವಾಗಿತ್ತು. ಹೀಗಿರುವಾಗ, ಇದನ್ನು ಚುನಾವಣೆ ಪ್ರಚಾರ ಮತ್ತು ಸಂವಹನದ ಪ್ರಬಲ ಮಾಧ್ಯಮವಾಗಿ ಬಳಸಿಕೊಳ್ಳಲು ಎಲ್ಲಾ ಪಕ್ಷಗಳು ಮುಂದಾಗಿವೆ.

ಇದೀಗ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಒಂದು ವೇಳೆ ಯಾವುದೇ ಪಕ್ಷದ ಪರವಾಗಿ ಎಲೆಕ್ಷನ್​​ ಕ್ಯಾಂಪೇನ್ ಮಾಡಿದರೇ ಜೈಲು ಕಂಬಿ ಎಣಿಸಬೇಕಾಗುತ್ತದೆ. ಇದನ್ನು ಕೇಂದ್ರ ಚುನಾವಣೆ ಆಯೋಗವೇ ಸ್ಪಷ್ಟಪಡಿಸಿದೆ. ​​

Comments are closed.