ಕರ್ನಾಟಕ

ಸುಮಲತಾ -ಸಚಿವ ಡಿ.ಸಿ.ತಮ್ಮಣ್ಣ ಮಧ್ಯೆ ಜಟಾಪಟಿ ! ತಮ್ಮಣ್ಣ ಟೀಕೆಗೆ ತಿರುಗೇಟು ನೀಡಿದ ಸುಮಲತಾ ಹೇಳಿದ್ದೇನು…?

Pinterest LinkedIn Tumblr

ಮಂಡ್ಯ: ಅಂಬರೀಷ್ ಸಚಿವರಾಗಿದ್ದಾಗ ಸುಮಲತಾ ಎಷ್ಟು ಜನರನ್ನು ಮಾತನಾಡಿಸಿದ್ದಾರೆ, ಎಷ್ಟು ಜನರಿಗೆ ಒಂದು ಗ್ಲಾಸ್ ನೀರು ಕೊಟ್ಟಿದ್ದಾರೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಕಿಡಿ ಕಾರಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಜನಗಳ ಬಗ್ಗೆ ಸುಮಲತಾ ಎಷ್ಟು ಕಾಳಜಿ ವಹಿಸಿದ್ದಾರೆ ಎಂದು ಪ್ರಶ್ನಿಸಿರುವ ತಮ್ಮಣ್ಣ, ಅಂಬರೀಷ್ ಹೆಸರು ಹೇಳಿಕೊಂಡು ಏನೋ ಮಾಡುತ್ತೀನೆ ಎಂದು ಹೊರಟಿದ್ದಾರೆ. ಈ ಹಿಂದೆಯೂ ಒಬ್ಬ ಹೆಣ್ಣು ಮಗಳು ಬಂದು ಹೋದಳು ಎಂದು ರಮ್ಯಾ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ ತಮ್ಮಣ್ಣ ಬಣ್ಣ ಬಣ್ಣದ ಮಾತುಗಳನ್ನು ಹೇಳುವ ಜನರನ್ನು ನಂಬಬೇಡಿ, ಅವರನ್ನು ನಂಬಿ ಆಯ್ಕೋ ಮಾಡಿದರೇ ಸರ್ವನಾಶ, ಹೀಗಾಗಿ ರೈತನ ಮಗ ನಿಖಿಲ್ ಅವರನ್ನು ಈ ಬಾರಿ ಗೆಲ್ಲಿಸಿ, ಅವರಿಗೆ ಸಮಾಜದ ಹಿತದ ಬಗ್ಗೆ ಚಿಂತಿಯಿದೆ ಮಂಡ್ಯ ಜನರಲ್ಲಿ ಮನವಿ ಮಾಡಿದ್ದಾರೆ.

ಇನ್ನೂ ಡಿ.ಸಿ ತಮ್ಮಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುಮಲತಾ ಅಂಬರೀಷ್, ನನ್ನ ಬಗ್ಗೆ ಮಾತನಾಡುವಾಗ ದೊಡ್ಡವರಾಗಿರುವ ಅವರು ಸ್ವಲ್ಪ ಯೊಚನೆ ಮಾಡಿ ಮಾತನಾಡಬೇಕು, ಇವರು ನೀಡುವ ಹೇಳಿಕೆಗಳಿಂದ ಜನರು ಇನ್ನೂ ಹೆಚ್ಚು ನನ್ನ ಪರ ನಿಲ್ಲುತ್ತಾರೆ, ಅಂಬರೀಷ್ ಏನು ಮಾಡಿದ್ದಾರೆ ಎಂಬ ಪ್ರಶ್ನೆಗೆ ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ ನೀಡುತ್ತೇನೆ. ಎಲ್ಲದಕ್ಕೂ ನನ್ನ ಬಳಿ ಉತ್ತರವಿದೆ ಎಂದು ಹೇಳಿದ್ದಾರೆ.

ಈ ಸಮಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ, ಅವರು ವಯಸ್ಸಿನಲ್ಲಿ, ಅನುಭವದಲ್ಲಿ ಹಿರಿಯರು, ನನಗೆ ಸಂಬಂಧಗಳು ಮುಖ್ಯ, ಅವರು ನನಗೆ ನೇರವಾಗಿ ಬಂದು ಹೇಳಿದ್ದರೇ ನನಗೆ ಗೌರವವಿರುತ್ತಿತ್ತು, ಮಾಧ್ಯಮಗಳ ಮುಂದೆ ಈ ರೀತಿ ಹೇಳಿಕೆ ನೀಡಬಾರದು, ಅವರ ವಿರುದ್ಧ ಟೀಕೆ ಮಾಡಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

ನನ್ನ ಪತಿಯ ಸಹಕಾರ ಪಡೆದು, ಅವರ ವಿರುದ್ಧವೇ ಮಾತನಾಡುವವರ ಬಗ್ಗೆ ಮಂಡ್ಯ ಜನವೇ ತಕ್ಕ ಉತ್ತರ ನೀಡುತ್ತಾರೆ. ನಾನು ಕಾಂಗ್ರೆಸ್ ಟಿಕೆಟ್ ಕೇಳಿದ್ದೇನೆ, ಬೇರೆ ಯಾರ ಮುಂದೆಯೂ ಬೇಡಿಕೆ ಇಟ್ಟಿಲ್ಲ, ಮಂಡ್ಯ ಜಿಲ್ಲೆಯ ಪ್ರತಿ ಮನೆಗೆ ತೆರಳಿ ಅಲ್ಲಿನ ಜನರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ, ನಾನು ಹೋದ ಕಡೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ, ಆದರೆ ನಾನು ಅಂತಿಮ ಕ್ಷಣದವರೆಗೂ ಕಾದು ನೋಡುತ್ತೇನೆ ಎಂದು ಸುಮಲತಾ ಹೇಳಿದ್ದಾರೆ.

Comments are closed.