ಕರ್ನಾಟಕ

ಲೋಕಸಭೆ ಚುನಾವಣೆ ನಿಗದಿಯಾದರೆ ರಾಜ್ಯದ ಈ ಸಂಸದನ ಸಿಡಿ ಹೊರಕ್ಕೆ!

Pinterest LinkedIn Tumblr


ಕೋಲಾರ: ಮುಳಬಾಗಿಲುನಲ್ಲಿ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಬಾಂಬ್ ಸಿಡಿಸಿದ್ದಾರೆ. ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾದರೆ ,ಸಂಸದ ಕೆ. ಎಚ್.ಮುನಿಯಪ್ಪ ರಹಸ್ಯ ಸಿಡಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಆವಣಿ ಜಾತ್ರೆ ಯಲ್ಲಿ ಭಾಗವಹಿಸಿದ್ದ ಮಂಜುನಾಥ್ ಮುನಿಯಪ್ಪ ಅವರ ಮೇಲೆ ವಾಗ್ದಾಳಿ ಮಾಡಿದರು. ಮುನಿಯಪ್ಪರ ಮತ್ತೊಂದು ಮುಖವಾಡ ಕ್ಷೇತ್ರದ ಜನರ ಮುಂದೆ ಬಯಲು ಮಾಡುತ್ತೇನೆ. ನಾನು ಒಬ್ಬರಿಗೆ ತೊಂದರೆ ಕೊಡುವುದಿಲ್ಲ, ಆದ್ರೆ ಮುನಿಯಪ್ಪ ಯಾವ ರೀತಿ ತೊಂದರೆ ನೀಡಿದ್ದಾರೆ ಎನ್ನುವುದು ಜನರಿಗೆ ಗೊತ್ತು. ಲೋಕಸಭಾ ಚುನಾವಣೆಯಲ್ಲಿ ಮುನಿಯಪ್ಪ ವಿರುದ್ಧ ಕೆಲಸ ಮಾಡುವೆ ಎಂದು ಹೇಳಿದರು.

ತಮ್ಮ ಜಾತಿ ಪ್ರಮಾಣ ಪತ್ರ ದೋಷ ವಿಚಾರ ಸುಪ್ರೀಂ ಕೋರ್ಟ್ ನಲ್ಲಿ ಇದೆ. ಇನ್ನೂ ಸ್ಟೇ ಸಿಗುವುದು ವಿಳಂಬ, ಸ್ಟೇ ಸಿಕ್ಕರೇ ಕ್ಷೇತ್ರದ ಮುಖಂಡರ ಜೊತೆ ಮಾತನಾಡಿ ಸ್ಪರ್ಧೆ ಮಾಡುತ್ತೇನೆ. ಸದ್ಯಕ್ಕೆ ಆ‌ ಆಲೋಚನೆ ಇಲ್ಲ, ಯಾರು ಉತ್ತಮ ಗುಣವಂತರು ಅವರಗೆ ಬೆಂಬಲ ನೀಡುತ್ತೇನೆ ಎಂದರು.

Comments are closed.