ರಾಷ್ಟ್ರೀಯ

ಧೋನಿ ಪೆವಿಲಿಯನ್ ಉದ್ಘಾಟಿಸಲು ನಿರಾಕರಿಸಿದವರು ಯಾರು ಗೊತ್ತಾ?!

Pinterest LinkedIn Tumblr


ರಾಂಚಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಪಂದ್ಯಕ್ಕೆ ರಾಂಚಿ ಕ್ರೀಡಾಂಗಣ ಆತಿಥ್ಯವಹಿಸಿದೆ. ಎಂ.ಎಸ್.ಧೋನಿ ಹುಟ್ಟೂರು ರಾಂಚಿಯಲ್ಲಿ ಅಭಿಮಾನಿಗಳ ಸಂಭ್ರಮ ಇಮ್ಮಡಿಯಾಗಿದೆ. ಪಂದ್ಯದ ದಿನ ಕ್ರೀಡಾಂಗಣದಲ್ಲಿ ಧೋನಿ ಪೆವಿಲಿಯನ್ ಉದ್ಘಾಟನೆ ಮಾಡಲು ಧೋನಿ ನಿರಾಕರಿಸಿದ್ದಾರೆ.

ಜಾರ್ಖಂಡನ ಕ್ರಿಕೆಟ್ ಸಂಸ್ಥೆ ಕಳೆದ ವರ್ಷದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪೆವಿಲಿಯನ್ ಸ್ಟಾಂಡ್‌ಗೆ ಧೋನಿ ಪೆವಿಲಿಯನ್ ಹೆಸರಿಡು ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದೀಗ ಧೋನಿ ಪೆವಿಲಿಯನ್ ಸಜ್ಜಾಗಿದೆ. ಇನ್ನ ಆಸಿಸ್ ವಿರುದ್ಧದ 3ನೇ ಏಕದಿನದಲ್ಲಿ ಧೋನಿ ಕೈಯಿಂದಲೇ ಪೆವಿಲಿಯನ್ ಉದ್ಧಾಟಿಸಲು ನಿರ್ಧರಿಸಲಾಗಿತ್ತು. ಆದರೆ ಇದನ್ನ ಧೋನಿ ನಿರಾಕರಿಸಿದ್ದಾರೆ.

ನನ್ನ ಮನೆಯಲ್ಲಿ ಉದ್ಘಾಟನೆ ಮಾಡಲು ಏನಿದೆ? ಎಂದು ಧೋನಿ ಹೇಳಿದ್ದಾರೆ. ಇದು ಶ್ರೇಷ್ಠ ಕ್ರಿಕೆಟಿಗನ ಸರಳತೆಯನ್ನ ಸೂಚಿಸುತ್ತದೆ ಎಂದು ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ದೇಬಸಿಸ್ ಚಕ್ರಬೊರ್ತಿ ಹೇಳಿದ್ದಾರೆ.

Comments are closed.