ರಾಷ್ಟ್ರೀಯ

ಶಾಸಕನಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಸಂಸದ

Pinterest LinkedIn Tumblr


ನವದೆಹಲಿ: ಉತ್ತರಪ್ರದೇಶದಲ್ಲಿ ತಮ್ಮ ಪಕ್ಷದ ಕಾರ್ತಕರ್ತರ ಎದುರೇ ಬಿಜೆಪಿ ನಾಯಕರು ಬಡಿದಾಡಿಕೊಂಡಿದ್ದಾರೆ. ಸಂತ ಕಬೀರ್ ನಗರದ ರಸ್ತೆಯೊಂದರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾಮಫಲಕದಲ್ಲಿ ತನ್ನ ಹೆಸರು ಹಾಕಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಸಂಸದ ಶರದ್ ತ್ರಿಪಾಠಿ ಬಿಜೆಪಿ ಶಾಸಕ ರಾಕೇಶ್​​ ಭಾಘೇಲ್​​ ಎಂಬುವರ ಮೇಲೆ ಹಲ್ಲೆ ನಡೆಸಿದ್ಧಾರೆ. ಇಬ್ಬರ ಮಾತಿನ ಚಕಾಮಕಿ ನಡೆದಿದ್ದು, ಶರದ್​​ ತ್ರಿಪಾಠಿ ದಿಢೀರ್​​ ತನ್ನ ಕಾಲಿಗೆ ಹಾಕಿದ್ದ ಬೂಟು ತೆಗೆದು ಹಿಗ್ಗಾಮುಗ್ಗಾ ಹೊಡೆದಿದ್ದಾರೆ.

ಪಕ್ಷದ ಮುಖಂಡರ ಎದುರೇ ಇಬ್ಬರು ಬಿಜೆಪಿ ನಾಯಕರು ಕೈಕೈ ಮಿಲಾಯಿಸಿದ್ಧಾರೆ. ಮೊದಲಿಗೆ ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ಸಂಸದ ಶರದ್​​ ತ್ರಿಪಾಠಿ, ರಾಕೇಶ್​​ ಭಾಘೇಲ್​​ ಮೇಲೆ ಹಲ್ಲೆ ನಡೆಸಿದ್ದಾರೆ. ಕಾಲಿನಲ್ಲಿದ್ದ ಬೂಟು ಹೊರ ತೆಗೆದು ಹಿಗ್ಗಾಮುಗ್ಗಾ ಬಾರಿಸಿದ್ಧಾರೆ. ಇದರಿಂದ ಆಕ್ರೋಶಗೊಂಡ ರಾಕೇಶ್​​​ ಕೂಡ ಸಂಸದ ತ್ರಿಪಾಠಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇನ್ನು ಅಲ್ಲಿಯೇ ಸಭೆಯಲ್ಲಿದ್ದ ಸ್ಥಳೀಯ ಬಿಜೆಪಿ ನಾಯಕರು ಇಬ್ಬರು ನಾಯಕರನ್ನು ಬಿಡಿಸಲು ಮುಂದಾಗಿದ್ಧಾರೆ. ಮಧ್ಯಪ್ರವೇಶಿಸಿದ ಪೊಲೀಸ್​​ ವರಿಷ್ಠಾಧಿಕಾರಿಯೊಬ್ಬರು ಬಿಜೆಪಿ ಶಾಸಕರನ್ನು ತಡೆದು ಗಲಾಟೆ ನಿಲ್ಲಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ನಾಯಕರು ಇಬ್ಬರು ಪರಸ್ಪರ ಬಡಿದಾಡಿಕೊಂಡ ವಿಡಿಯೋ ಮೊಬೈಲ್​​ ಕ್ಯಾಮರದಲ್ಲಿ ಸೆರೆಯಾಗಿದೆ. ಇದೀಗ ಕಿತ್ತಾಟದ ವಿಡಿಯೋ ವೈರಲ್​​ ಆಗಿದ್ದು, ಬಿಜೆಪಿ ನಾಯಕರು ಸಾರ್ವಜನಿಕವಾಗಿ ಅಪಹಾಸ್ಯಕ್ಕೀಡಾಗಿದ್ದಾರೆ.

Comments are closed.