ಕರ್ನಾಟಕ

ಮನೆಗೆ ಊಟಕ್ಕೆ ಕರೆಸಿ ಎಂ.ಬಿ.ಪಾಟೀಲ್​ಗೆ ತರಾಟೆ​

Pinterest LinkedIn Tumblr


ದಾವಣಗೆರೆ: ಗೃಹ ಸಚಿವ ಎಂ.ಬಿ. ಪಾಟೀಲ್​ ಅವರನ್ನು ಮನೆಗೆ ಊಟಕ್ಕೆ ಆಹ್ವಾನಿಸಿ, ನಂತರ ಮಾಧ್ಯಮದವರ ಎದುರೇ ಗೃಹಸಚಿವರನ್ನು ಶಾಮನೂರು ಶಿವಶಂಕರಪ್ಪ ಮಗ ಹಾಗೂ ಮಾಜಿ ಸಚಿವ ಎಸ್​.ಎಸ್.ಮಲ್ಲಿಕಾರ್ಜುನ್ ಕ್ಲಾಸ್​ ತೆಗೆದುಕೊಂಡ ಘಟನೆ ನಡೆದಿದೆ.

ಇಂದು ಎಂ.ಬಿ.ಪಾಟೀಲ್ ಅವರನ್ನು ಶಾಮನೂರು ಶಿವಶಂಕರಪ್ಪ ಊಟಕ್ಕೆಂದು ಮನೆಗೆ ಆಹ್ವಾನಿಸಿದ್ದರು. ಈ ವೇಳೆ ಮಾಧ್ಯಮದವರು ಮತ್ತು ಕಾರ್ಯಕರ್ತರು ಸ್ಥಳದಲ್ಲಿ ನೆರೆದಿದ್ದರು. ಈ ವೇಳೆ ಮಲ್ಲಿಕಾರ್ಜುನ ಅವರು, “ಚುನಾವಣೆಯಲ್ಲಿ ನಾವೇ ಸೋತು ಸುಣ್ಣ ಆಗಿದ್ದೀವಿ. ನೀನು ನಮ್ಮ ಅಪ್ಪನ ಬಗ್ಗೆ ಮಾತಾಡ್ತಿಯಾ. ನೀನು ಏನೋ ಈಗ ಮಿನಿಸ್ಟರ್​ ಆಗಿದಿಯಾ,” ಅಂತ ಪಾಟೀಲ್​ಗೆ ಕ್ಲಾಸ್ ತೆಗೆದುಕೊಂಡ‌ರು.

ಮಲ್ಲಿಕಾರ್ಜುನ್ ಅವರನ್ನು ಪಾಟೀಲ್​ ಅವರು ಸಮಾಧಾನ ಪಡಿಸಲು ಎಷ್ಟೇ ಯತ್ನಿಸಿದರೂ ಅವರು ಸುಮ್ಮನಾಗಲಿಲ್ಲ. ಒಂದು ಹಂತದಲ್ಲಿ ಅವರು ಮಾತು ಮತ್ತಷ್ಟು ಜೋರಾದಾಗ ನೆರೆದಿದ್ದ ಎಲ್ಲರನ್ನು ಹೊರಗೆ ಕಳುಹಿಸಲಾಯಿತು. ನಂತರ ಶಾಮನೂರು ಶಿವಶಂಕರಪ್ಪ ಮಧ್ಯ ಪ್ರವೇಶಿಸಿ ಮಲ್ಲಿಕಾರ್ಜುನ್ ಅವರನ್ನು ಸಮಾಧಾನ ಮಾಡಿದರು. ಮಲ್ಲಿಕಾರ್ಜುನ್ ಕೆಂಗಣ್ಣಿಗೆ ಗುರಿಯಾಗಿ ಎಂ.ಬಿ.ಪಾಟೀಲ್ ಸಪ್ಪೆಮೊರೆ ಹಾಕಿಕೊಂಡು ಶಾಮನೂರು ಶಿವಶಂಕರಪ್ಪ ಜೊತೆ ಊಟಕ್ಕೆ ತೆರಳಿದರು.

Comments are closed.