ರಾಷ್ಟ್ರೀಯ

ರಾಹುಲ್-ದೇವೇಗೌಡರ ಸಭೆ: ಜೆಡಿಎಸ್ ಗೆ 10 ಸೀಟಿಗೆ ಪಟ್ಟು

Pinterest LinkedIn Tumblr


ನವದೆಹಲಿ: ಲೋಕಸಭಾ ಚುನಾವಣಾ ಸೀಟು ಹಂಚಿಕೆ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ನಡುವೆ ಒಂದು ಸುತ್ತಿನ ಮಾತುಕತೆ ಮುಕ್ತಾಯಗೊಂಡಿದೆ.

‘ಪೊಲಿಟಿಕಲ್’ ಬೈಟ್: ಮಗಳ ಭವಿಷ್ಯಕ್ಕಿಂತ ಸಾರ್ವಜನಿಕರ ಭವಿಷ್ಯಕ್ಕೆ ಬೆಲೆ ಕೊಡ್ತೇನೆ

ಸುಮಾರು ಒಂದು‌ ಮುಕ್ಕಾಲು ಗಂಟೆ ಮಾತುಕತೆ ನಡೆಸಿದ್ದಾರೆ. ‘ನಾವು 10 ಸ್ಥಾನ ಕೇಳಿದ್ದೇವೆ. ಮುಂದಿನ ಮಾತುಕತೆಯನ್ನು ನಮ್ಮ‌ ಪಕ್ಷದ‌ ಪ್ರಧಾನ ಕಾರ್ಯದರ್ಶಿ ಡ್ಯಾನೀಶ್ ಆಲಿ ಮತ್ತು ಕಾಂಗ್ರೆಸ್ ನ ರಾಜ್ಯ‌ ಉಸ್ತುವಾರಿ ಪ್ರಧಾನ‌ ಕಾರ್ಯದರ್ಶಿ ಕೆ‌ ಸಿ ವೇಣು ಗೋಪಾಲ್ ನಡೆಸಲಿದ್ದಾರೆ ‘ ಎಂದು ದೇವೇಗೌಡರು ಹೇಳಿದ್ದಾರೆ.

ಮಂಡ್ಯದಲ್ಲಿ ಸದ್ಯ ಹೈವೋಲ್ಟೇಜ್ ಸ್ಪರ್ಧೆ ಏರ್ಪಟ್ಟಿದೆ. ಸುಮಲತಾ-ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಕಗ್ಗಂಟಾಗಿ ಉಳಿದಿದೆ. ಹಾಲಿ ಸಂಸದರ ಕ್ಷೇತ್ರಗಳನ್ನು ಬಿಟ್ಟುಕೊಡಲಾಗುವುದಿಲ್ಲ ಎಂಬ ಕಾಂಗ್ರೆಸ್ ನಾಯಕರ ಬಿಗಿ ಪಟ್ಟಿನಿಂದಾಗಿ ಸೀಟು ಹಂಚಿಕೆ ಕಗ್ಗಂಟಾಗಿ ಉಳಿದಿದೆ. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ- ದೇವೇಗೌಡರ ಭೇಟಿ ಮಹತ್ವ ಪಡೆದಿದೆ.

Comments are closed.