ಕರ್ನಾಟಕ

ಯುಕ್ಷಗಾನದ ಹಿರಿಯ ಕೊಂಡಿ ಜಲವಳ್ಳಿ ವೆಂಕಟೇಶರಾವ್ ನಿಧನ

Pinterest LinkedIn Tumblr


ಶಿರಸಿ: ವಯೋಸಹಜ ಅನಾರೋಗ್ಯ ತುತ್ತಾಗಿದ್ದ ಹಿರಿಯ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್[86] ವಿಧಿವಶರಾಗಿದ್ದಾರೆ. ಬಡಗುತಿಟ್ಟು ಯಕ್ಷಗಾನದ ಮೇರುಕಲಾವಿದ ಅಭಿನವ ಶನೀಶ್ವರ ಖ್ಯಾತಿಯ ಜಲವಳ್ಳಿಯ ವೆಂಕಟೇಶ ರಾವ್ ಅಗಲಿಕೆ ಯಕ್ಷಲೋಕಕ್ಕೆ ಬರಿಸಲಾರದ ನಷ್ಟ ಮಾಡಿದೆ.

ವೆಂಕಟೇಶ ರಾವ್‌ರನ್ನು ಶಿರಸಿಯ ಟಿ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 6:24ಕ್ಕೆ ಅವರು ಇಹಲೋಕ ತ್ಯಜಿಸಿದ್ದಾರೆ. ಹೊನ್ನಾವರ ತಾಲೂಕಿನ ಜಲವಳ್ಳಿಯಲ್ಲಿ ಜನಿಸಿದ್ದ ಅವರು, ತೆಂಕುತಿಟ್ಟು ಮತ್ತು ಬಡಗುತಿಟ್ಟು ಶೈಲಿಯಲ್ಲಿ ಪರಿಣತಿ ಸಾಧಿಸಿದ್ದರು. ಜಲವಳ್ಳಿಯಲ್ಲಿ ಬುಧವಾರ ಬೆಳಗ್ಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಪುತ್ರ ವಿದ್ಯಾಧರರಾವ್ ತಿಳಿಸಿದ್ದಾರೆ.

ರಾಜ್ಯೋತ್ಸವ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ವೆಂಕಟೇಶರಾವ್ ಶನಿ ಪಾತ್ರಕ್ಕೆ ಹೊಸ ಅರ್ಥ ತಂದುಕೊಟ್ಟಿದ್ದರು. 16ನೆಯ ವಯಸ್ಸಿನಲ್ಲಿ ವೆಂಕಟೇಶ ರಾವ್ ಯಕ್ಷಲೋಕ ಪ್ರವೇಶಿಸಿ ಅಲ್ಲಿಂದ ದೊಡ್ಡ ಹೆಮ್ಮರವಾಗಿ ಬೆಳೆದಿದ್ದರು.

ಸುಮಾರು 64 ವರ್ಷ ಯಕ್ಷಲೋಕದಲ್ಲಿ ಸೇವೆ ಸಲ್ಲಿಸಿದ್ದ ಜಲವಳ್ಳಿ ವೆಂಕಟೇಶ ರಾವ್, ಗುಂಡಬಾಳ ಮೇಳದಲ್ಲಿ 20 ವರ್ಷ ಮತ್ತು ಸಾಲಿಗ್ರಾಮ ಮೇಳದಲ್ಲಿ 24 ವರ್ಷ, ಇತರ ಕೆಲವು ಮೇಳಗಳಲ್ಲಿಯೂ ಕಲಾವಿದರಾಗಿ ಜನರ ಮನ ಗೆದ್ದಿದ್ದರು.

ದಿವಗಂಗ ಕಾಳಿಂಗ ನಾವಡರ ಪ್ರೀತಿ ಪಾತ್ರ ಕಲಾವಿದರಾಗಿದ್ದ ವೆಂಕಟೇಶ ರಾವ್ , ದಿವಂಗತ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರೊಂದಿಗೆ ಜೋಡಿಯಾಗಿ ಕಾಣಿಸಿಕೊಂಡಿದನ್ನು ಇಂದಿಗೂ ಯಕ್ಷ ಪ್ರೇಮಿಗಳು ಮೆಲಕು ಹಾಕುತ್ತಾರೆ.

Comments are closed.