ಕರ್ನಾಟಕ

ಹೆಣ್ಣು ಮಕ್ಕಳನ್ನು ಹೊರಹಾಕಿ ಮತ್ತೊಂದು ಮದುವೆಯಾದ ವೈದ್ಯ ತಂದೆ!

Pinterest LinkedIn Tumblr


ಬೆಳಗಾವಿ: ಮಕ್ಕಳಾಗಲಿ ಎಂದು ಅದೆಷ್ಟೊ ದಂಪತಿಗಳು ದೇವರಿಗೆ ಹರಕೆ ಹೊರುತ್ತಾರೆ ಜತೆಗೆ ಆಸ್ಪತ್ರೆಗೆ ಸಾವಿರಾರು ರೂಪಾಯಿ ಹಾಕುತ್ತಾರೆ. ಆದರೇ ಅನೇಕರು ಗಂಡು ಮಗುವೇ ಬೇಕು. ಮಗನೆ ಮುಂದೆ ನಮ್ಮಗೆ ಆಸರೆ ಎಂಬ ಮೂಢ ನಂಬಿಕೆಯೂ ಇನ್ನೂ ಜೀವಂತವಾಗಿದೆ. ಹೀಗೆ ಬೆಳೆದ ಗಂಡು ಮಕ್ಕಳಿಲ್ಲ ಎಂಬ ಹಪಾಹಪಿಗೆ ಇರೋ ಹೆಣ್ಣು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದ ಪಾಪಿ ಅಪ್ಪನೊಬ್ಬ ಬೆಳಗಾವಿಯಲ್ಲಿ ಇದ್ದಾನೆ. ಈ ಪಾಪಿ ವ್ಯಕ್ತಿಯ ಹೆಸರು ಬಾಳಗೌಡ ಪಾಟೀಲ್. ಈತ ಬೆಳಗಾವಿ ತಾಲೂಕಿನ ಕಾಕಕಿ ಗ್ರಾಮದ ನಿವಾಸಿ.

ಈತ ಕೆಲ ತಿಂಗಳ ಹಿಂದಷ್ಟೇ ತನ್ನ ಮದುವೆಯ 25ನೇ ವರ್ಷದ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಮಾಡಿಕೊಂಡಿದ್ದನು. ಈಗ ಬಾಳಗೌಡ ಪಾಟೀಲ್ ಬೆಳೆದು ನಿಂತಿರೋ ಇಬ್ಬರು ಹೆಣ್ಣು ಮಕ್ಕಳಿಗೆ ಕೊಡಬಾರದ ಕಷ್ಟ ಕೊಟ್ಟು ಮನೆಯಿಂದ ಹೊರ ಹಾಕಿದ್ದಾನೆ. ಅಷ್ಟಕೂ ಈ ಬಾಳಗೌಡ ಹೀಗೆ ಮಾಡಲು ತನಗೆ ಗಂಡುಮಕ್ಕಳು ಆಗಿಲ್ಲ ಅನೋದೇ ಕಾರಣವಾಗಿದೆ.

25 ವರ್ಷಗಳ ಹಿಂದೆ ಬಾಳಗೌಡ ಪಾಟೀಲ್ ಅಕ್ಕಮಹಾದೇವಿ ಎಂಬುವರನ್ನು ಮದುವೆಯಾಗಿದ್ದನು. ಈ ದಂಪತಿಗೆ ಮೂರು ಜನ ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಜನಿಸಿದ್ದನು. ಆದರೆ ಮಗ ಚಿಕ್ಕ ವಯಸ್ಸಿನಲ್ಲಿಯೇ ಮೃತಪಟ್ಟಿದ್ದಾನೆ. ಆಗಿನಿಂದಲೂ ಮತ್ತೊಂದು ಗಂಡು ಮಗು ಬೇಕು ಎಂದು ಪತ್ನಿಗೆ ಕೊಡಬಾರದ ಕಾಟ ಕೊಟ್ಟಿದ್ದಾನೆ. ಹೆಣ್ಣು ಮಗಳ ಮದುವೆ, ವಿದ್ಯಾಭ್ಯಾಸ ಯಾವುದಕ್ಕೂ ಈತ ಹಣ ಕೊಡುತ್ತಿರಲಿಲ್ಲ. ಅಕ್ಕಮಹಾದೇವಿ ವೃತ್ತಿಯಲ್ಲಿ ನರ್ಸ್ ಆಗಿದ್ದು ಅದರ ಹಣದಲ್ಲಿಯೇ ಇಬ್ಬರು ಮಕ್ಕಳ ವಿದ್ಯಾಭ್ಯಾಸ ಹಾಗೂ ಓರ್ವ ಮಗಳ ಮದುವೆ ಮಾಡಿದ್ರು. ಆದರೆ, 6 ತಿಂಗಳ ಹಿಂದೆ ಅಕ್ಕಮಹಾದೇವಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದೀಗ ಇಬ್ಬರು ಹೆಣ್ಣು ಮಕ್ಕಳು ಅನಾಥರಾಗಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್​ನಲ್ಲಿದ್ದ ಹಾಸ್ಟೆಲ್ ಫೀ ಕಟ್ಟಿಲ್ಲ. ಹಾಸ್ಟೆಲ್ ಬಿಟ್ಟು ಮನೆಗೆ ಬಂದ್ರೆ ಅಪ್ಪ ಈ ಮನೆಯ ಬೀಗ ಹಾಕಿಕೊಂಡು ಹೋಗಿದ್ದಾನೆ. ಈ ಅಮಾಯಕ ಹೆಣ್ಣು ಮಕ್ಕಳು ತಮ್ಮ ಅಪ್ಪನಿಗೆ ಫೋನ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಇದರಿಂದ ನೊಂದ ಇಬ್ಬರು ಅಪ್ಪನ ವಿರುದ್ಧ ಕಾಕತಿ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ.

ಇನ್ನು, ಬಾಳಗೌಡ ಪಾಟೀಲ್ ವೃತ್ತಿಯಲ್ಲಿ ವೈದ್ಯ ಎಂದು ಹೇಳಿಕೊಳ್ಳುತ್ತಾನೆ. ಆದರೆ, ಯಾವುದೇ ಪದವಿ ಪಡೆದಿಲ್ಲ. ಇನ್ನು, ಈತ ತನ್ನ ಮನೆಯ ಮುಂದೆ ‘ಎಸ್​ಪಿ ರಣಧೀರ’ ಫಿಲ್ಮ್ ಮಾಡೋದಾಗಿ ದೊಡ್ಡ ಬ್ಯಾನರ್ ಹಾಕಿಸಿದ್ದಾರೆ. ಆದರೆ, ತನ್ನ ಹೆತ್ತ ಮಕ್ಕಳ ಪಾಲಿಗೆ ಮಾತ್ರ ವಿಲನ್ ಆಗಿದ್ದು, ಇದೀಗ ಇಬ್ಬರು ಮಕ್ಕಳು ಬೀದಿ ಪಾಲಾಗಿದ್ದಾರೆ. ಈ ಇಬ್ಬರ ನೆರವಿಗೆ ಗ್ರಾಮಸ್ಥರು ಆಗಮಿಸಿದ್ದು, ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.

ಇಬ್ಬರು ಹೆಣ್ಣು ಮಕ್ಕಳನ್ನು ಮನೆಯಿಂದ ಹೊರ ಹಾಕಿದ ಬಾಳಗೌಡ ಪಾಟೀಲ್ ಈ ವಯಸ್ಸಿನಲ್ಲಿ ಮತ್ತೊಂದು ಮದುವೆಯಾಗಿದ್ದಾನೆ. ತನ್ನ ಎರಡನೇ ಪತ್ನಿಯ ಜತೆಗೆ ಬೆಳಗಾವಿಯಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದಾನೆ. ಹೆಣ್ಣುಮಕ್ಕಳು ಪೋನ್ ಮಾಡಿದ್ರು ರಿಸಿವ್ ಮಾಡಲ್ಲ, ಅವರ ಕೈಗೆ ಸಿಗುತ್ತಿಲ್ಲ. ಅನಿವಾರ್ಯವಾಗಿ ಅಪ್ಪನ ವಿರುದ್ಧ ಇದೀಗ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ ಮಕ್ಕಳು. ಕಾನೂನಿನ ಮೂಲಕವೇ ಇವರಿಗೆ ನ್ಯಾಯ ಸಿಗಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

Comments are closed.