ಕರ್ನಾಟಕ

ಅಂತಿಮಗೊಂಡ ಮಂಡ್ಯದಿಂದ ನಿಖಿಲ್ ಕುಮಾರ್ ಸ್ಪರ್ಧೆ, ಸುಮಲತಾ ಮುಂದಿನ ನಡೆ?

Pinterest LinkedIn Tumblr


ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ವರಿಷ್ಠರು ನನ್ನ ಹೆಸರು ಘೋಷಿಸಿರುವುದಕ್ಕೆ ನಾನು ಆಭಾರಿ. ರಾಜಕೀಯವಾಗಿ ನನ್ನನ್ನು ನಾನು ಸಾಬೀತುಪಡಿಸಿಕೊಳ್ಳುತ್ತೇನೆ ಎಂದು ನಟ ನಿಖಿಲ್ ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ನನ್ನ ಹೆಸರನ್ನು ಘೋಷಿಸಿರುವುದಕ್ಕೆ ನನಗೆ ಸಂತಸವಾಗಿದೆ. ನಾನು ಮಂಡ್ಯದಲ್ಲೇ ಮನೆ ಮಾಡುತ್ತೇನೆ. ಕಚೇರಿಯನ್ನೂ ತೆರೆಯುತ್ತೇನೆ. ಕಾದು ನೋಡಿ. ಮಂಡ್ಯದಲ್ಲಿ ಇಂದಿನಿಂದ ನನ್ನ ಸೇವೆ ಆರಂಭವಾಗಲಿದೆ. ನಮ್ಮ ಪಕ್ಷದ ವರಿಷ್ಠರು ನನ್ನ ಹೆಸರು ಘೋಷಣೆ ಮಾಡಿದ್ದಕ್ಕೆ ಆಬಾರಿಯಾಗಿದ್ದೀನಿ ಎಂದರು.
ಸುಮಲತಾ ಅಂಬರೀಶ್ ಅವರ ಸ್ಪರ್ಧೆ ಬಗ್ಗೆ ನಾನು ಏನೂ ಹೇಳಲ್ಲ. ಚುನಾವಣೆಗೆ ಸ್ಪರ್ಧಿಸೋ ಬಗ್ಗೆ ಅವರು ಸ್ವತಂತ್ರರು. ಅಂಬರೀಶಣ್ಣನ ಬಗ್ಗೆ ನನಗೆ ಗೌರವವಿದೆ. ಅಭಿ ನನ್ನ ತಮ್ಮ ಇದ್ದ ಹಾಗೆ, ಅಂಬಿ ಅಂಕಲ್ ತಂದೆ ಇದ್ದಾಗೆ. ಅವರ ಜತೆಯೂ ಮಾತಾಡ್ತೀನಿ ಎಂದು ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಘೋಷಣೆ ಮಾಡಿರುವುದಕ್ಕೆ ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಕಾಂಗ್ರೆಸ್ ಸುಮಲತಾರನ್ನು ಕಣಕ್ಕಿಳಿಸಲು ಯೋಜಿಸಿತ್ತು. ಆದರೆ ಮಂಡ್ಯವನ್ನು ಜೆಡಿಎಸ್ ಬಿಟ್ಟುಕೊಡದ ಕಾರಣ ಸುಮಲತಾ ಅವರು ಮುಂದಿನ ನಡೆ ಏನು ಎಂಬುದು ಇದೀಗ ಕುತೂಹಲ ಕೆರಳಿಸಿದೆ.

Comments are closed.