ರಾಷ್ಟ್ರೀಯ

ಪಾಕ್ ಸೇನಾ ಮೆಸ್‌ನಲ್ಲಿ ಅಭಿನಂದನ್ ಕುಡಿದ ಟೀ ಬಿಲ್‌ನಲ್ಲಿ ಏನಿತ್ತು ಗೊತ್ತಾ?

Pinterest LinkedIn Tumblr


ಪಾಕಿಸ್ತಾನದ ಬಲಿಷ್ಠ ಯುದ್ಧ ವಿಮಾನ ಎಫ್-16 ಅನ್ನು ಹೊಡೆದುರುಳಿಸಿದ ವೇಳೆ ತಾವು ಚಲಾಯಿಸುತ್ತಿದ್ದ ಮಿಗ್-21 ಸ್ಫೋಟಗೊಂಡಿದ್ದರ ಪರಿಣಾಮ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಿದ್ದಿದ್ದರು.

ಈ ವೇಳೆ ಪಾಕ್ ಸೇನೆ ಅವರನ್ನು ಬಂಧಿಸಿತ್ತು.
ಅಭಿನಂದನ್ ರನ್ನು ಬಂಧಿಸಿದ ಪಾಕ್ ಸೇನೆ ಅವರನ್ನು ಪಾಕಿಸ್ತಾನದ ಸೇನಾ ಕ್ಯಾಂಪ್ ನಲ್ಲಿ ಇಟ್ಟಿತ್ತು. ಸೇನೆಯ ಮೆಸ್ ನಲ್ಲಿ ಸೈನಿಕರು, ಅಧಿಕಾರಿಗಳು ಊಟ, ತಿಂದಿ ಮಾಡಿಕೊಂಡು ಹೋಗುತ್ತಾರೆ. ಅಂತೆ ಫೆಬ್ರವರಿ 27ರಂದು ಅಭಿನಂದನ್ ಅವರಿಗೆ ಮೆಸ್ ನಲ್ಲಿ ಟೀ ಕೊಡಲಾಯಿತು. ನಂತರ ಅವರ ಕೊಟ್ಟ ಟೀ ಬಿಲ್ ನಲ್ಲಿ MIG-21 ಎಂದು ಬರೆಯಲಾಗಿತ್ತು. ಈ ಫೋಟೋ ಇದೀಗ ವೈರಲ್ ಆಗಿದೆ.

ಪಾಕಿಸ್ತಾನ ಸೇನೆ ಎಷ್ಟೇ ಕಿರುಕುಳ ಕೊಟ್ಟರು ನಮ್ಮ ದೇಶದ ಗುಟ್ಟನ್ನು ಬಿಟ್ಟುಕೊಡದೆ ತನ್ನ ಕರ್ತವ್ಯವನ್ನು ಮಾಡಿದ್ದಾರೆ. ಇಂತಹ ದೇಶಾಭಿಮಾನಿಗೆ ದೇಶದ ಜನತೆ ಚಿರಋಣಿಯಾಗಿರಬೇಕು.

ಪಾಕಿಸ್ತಾನ ಸೇನೆಯ ಬಂಧನದಲ್ಲಿದ್ದ ಅಭಿನಂದನ್ ಅವರನ್ನು ಬಿಡುಗಡೆ ಮಾಡಿಸುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಿಟ್ಟ ನಡೆ ಪ್ರದರ್ಶಿಸಿತ್ತು. ಪರಿಣಾಮ ಯಾವುದೇ ಷರತ್ತನ್ನು ಮುಂದಿಡದೆ ಪಾಕಿಸ್ತಾನ ಮಾರ್ಚ್ 1ರಂದು ರಾತ್ರಿ 9 ಗಂಟೆಗೆ ಭಾರತಕ್ಕೆ ಹಸ್ತಾಂತರಿಸಿತ್ತು.

Comments are closed.