ಕರ್ನಾಟಕ

30 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಸುಧಾಮೂರ್ತಿ

Pinterest LinkedIn Tumblr


ರಾಮನಗರ: ಇನ್ಫೋಸಿಸ್ ಪ್ರತಿಷ್ಠಾನ ಹಾಗೂ ರಾಮನಗರ ಜಿಲ್ಲಾಡಳಿತದ ವತಿಯಿಂದ ಕನಕಪುರದಲ್ಲಿ ಬುಧವಾರ ಸುಸಜ್ಜಿತ ಹೆರಿಗೆ ಹಾಗೂ ಮಕ್ಕಳ ಆಸ್ಪತ್ರೆಯ ನಿರ್ಮಾಣದ ಕಾಮಗಾರಿಗೆ ಇನ್ಫೋಸಿಸ್ ಫೌಂಡೇಸನ್‍ನ ಅಧ್ಯಕ್ಷೆ ಸುಧಾಮೂರ್ತಿ ಅವರು ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

ಕನಕಪುರದಲ್ಲಿನ ಹಳೆಯ ಹೆರಿಗೆ ಆಸ್ಪತ್ರೆ ಜಾಗದಲ್ಲಿ 30 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದೆ. ಕಟ್ಟಡದ ಸಂಪೂರ್ಣ ಜವಬ್ದಾರಿಯನ್ನ ಇನ್ಫೋಸಿಸ್ ಫೌಂಡೇಶನ್ ವಹಿಸಿಕೊಂಡಿದೆ. ಬುಧವಾರ ನಡೆದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಧಾಮೂರ್ತಿಯವರು ಕಟ್ಟಡದ ಸಂಪೂರ್ಣ ಜವಬ್ದಾರಿ ನಮ್ಮದೇ ಅದನ್ನು ಕಟ್ಟಿಸಿಕೊಡುವುದಾಗಿ ತಿಳಿಸಿದ್ದಾರೆ.

122 ಹಾಸಿಗೆಯುಳ್ಳ ಆಸ್ಪತ್ರೆಯನ್ನ ಕಟ್ಟಿಸಲಾಗುವುದು. ಅಲ್ಲದೇ ಆಸ್ಪತ್ರೆಗೆ ಅಗತ್ಯವಾದ ಪೂರಕ ವಾತಾವರಣ ಒದಗಿಸುವುದಾಗಿ ತಿಳಿಸಿದ್ದಾರೆ. ಇನ್ನೂ ಭಾರತ-ಪಾಕಿಸ್ತಾನ ಯುದ್ದದ ಭೀತಿ ವಿಚಾರವಾಗಿ ಮಾತನಾಡಿದ ಅವರು, ಯುದ್ಧದ ವಿಚಾರದಲ್ಲಿ ದೇಶದ ಬಗ್ಗೆ ಮನಸ್ಸಿಗೆ ಬೇಜಾರಾಗುತ್ತದೆ. ಯುದ್ಧ ಅಂದರೆ ಸಾಮಾನ್ಯವಲ್ಲ. ಹಾಗೇ ಬಿಟ್ಟರೆ ದಿನೇ ದಿನೇ ಮೈ ಮೇಲೆ ದಾಳಿ ಮಾಡಿದರೆ ಅದನ್ನ ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ನಮ್ಮಂತ ಸಾಮಾನ್ಯ ಜನರಿಗೆ ಬಹಳ ಕಷ್ಟ ಎಂದು ತಿಳಿಸಿದ್ದಾರೆ.

Comments are closed.