ಕರ್ನಾಟಕ

ಹುಬ್ಬಳ್ಳಿಯಲ್ಲಿ ​ ಯಡಿಯೂರಪ್ಪ- ಸಿದ್ದರಾಮಯ್ಯ ಆಕಸ್ಮಿಕ ಭೇಟಿ; ಮುಂದೇನಾಯ್ತು?

Pinterest LinkedIn Tumblr


ಬೆಂಗಳೂರು: ರಾಜಕೀಯವಾಗಿ ಎದುರಾಳಿ ಪಕ್ಷದ ಮುಖ್ಯಸ್ಥರಾಗಿರುವ ಬಿಎಸ್​ ಯಡಿಯೂರಪ್ಪ- ಸಿದ್ದರಾಮಯ್ಯ ಮುಖಾಮುಖಿಯಾಗಿದ್ದಾರೆ. ಸದಾ ಆರೋಪ- ಪ್ರತ್ಯಾರೋಪಗಳ ಮೂಲಕ ವಾಗ್ದಾಳಿ ನಡೆಸುವ ನಾಯಕರು ಎದುರಾದಾಗಿದ್ದಾರೆ.

ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಇಂದು ಬೆಳಗಾವಿ ಪ್ರವಾಸದಲ್ಲಿದ್ದಾರೆ. ಇದಕ್ಕಾಗಿ ಸಚಿವ ಕೃಷ್ಣಭೈರೇಗೌಡ ಅವರ ಉಪಹಾರ ಕೂಟದಲ್ಲಿ ಕೂಡ ಭಾಗಿಯಾಗಿಲ್ಲ. ಇಂದು ಮುಂಜಾನೆಯೇ ಬೆಳಗಾವಿ ಪ್ರವಾಸ ಕೈ ಗೊಂಡ ಅವರಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾರೆ.

ಇತ್ತ ರಾಜ್ಯಾದ್ಯಾಂತ ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಕೂಡ ಅದೇ ವಿಮಾನದಲ್ಲಿ ಹುಬ್ಬಳ್ಳಿಗೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಬ್ಬರು ನಾಯಕರು ಪರಸ್ಪರ ಭೇಟಿಯಾದ ಕೂಡಲೇ ಕಂಡು ಮಾತನಾಡಿಸಿದ್ದಾರೆ. ಉಭಯ ಕುಶಲೋಪರಿ ವಿಚಾರಿಸಿದ್ದಾರೆ.

ಆಕಸ್ಮಿಕ ಭೇಟಿ ವೇಳೆ ತಮ್ಮ ರಾಜಕೀಯ ದ್ವೇಷವನ್ನು ಮರೆತು ಇಬ್ಬರು ನಾಯಕರು ಕೈಕುಲುಕಿ ಆತ್ಮೀಯವಾಗಿ ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ.

ರಾಜಕೀಯ ಜೀವನದ ಹೊರತಾಗಿ ಯಡಿಯೂರಪ್ಪನವರು ಮತ್ತು ನಾನು ಒಳ್ಳೆಯ ಗೆಳೆಯರು. ಇಲ್ಲಿ ಅಧಿಕಾರ, ಅಂತಸ್ತು ಯಾವುದೂ ಶಾಶ್ವತವಲ್ಲ, ಕೊನೆಗೊಂದು ದಿನ‌ ಗೆಲ್ಲುವುದು ನಮ್ಮ ನಡುವಿನ ಮಾನವೀಯ ಸಂಬಂಧಗಳು ಮಾತ್ರ.

ಇದಕ್ಕೂ ಕೆಲವೇ ನಿಮಿಷಗಳ ಮುನ್ನ ಮಾತನಾಡಿದ ಸಿದ್ದರಾಮಯ್ಯ, ಬಿಎಸ್​ ಯಡಿಯೂರಪ್ಪ ಆಡಿಯೋ ಪ್ರಕರಣದಲ್ಲಿ ಎಸ್​ಐಟಿ ನೇಮಕವಾಗಬೇಕೆಂದು ನಾನು ಪಟ್ಟು ಹಿಡಿದಿಲ್ಲ. ಅದು ಸಿಎಂ ನಿರ್ಧಾರ. ಮುಖ್ಯಮಂತ್ರಿಗಳು ಈ ಪ್ರಕರಣದ ಕುರಿತು ತೀರ್ಮಾನ ಕೈಗೊಂಡಿದ್ದಾರೆ ಎಂದಿದ್ದಾರೆ.

ದೇವದುರ್ಗದಲ್ಲಿ ಶರಣಗೌಡ ಅವರಿಗೆ ಆಪರೇಷನ್​ ಕಮಲ ನಡೆಸಲು ಬಿಎಸ್​ ಯಡಿಯೂರಪ್ಪ ಆಡಿಯೋ ಪ್ರಕರಣವನ್ನು ಎಸ್​ಐಟಿಗೆ ವಹಿಸಬೇಕು ಎಂದು ಸಿದ್ದರಾಮಯ್ಯ ಅವರೇ ಹಠ ಹಿಡಿದಿದ್ದಾರೆ ಈ ಮೂಲಕ ರಾಜಕೀಯ ಹಗೆತನ ಸಾಧಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.

Comments are closed.