ಕರ್ನಾಟಕ

ಯೋಧರ ತ್ಯಾಗ ವ್ಯರ್ಥವಾಗಲಿಕ್ಕೆ ಬಿಡುವುದಿಲ್ಲ; ನಿರ್ಮಲಾ ಸೀತಾರಾಮನ್​​!

Pinterest LinkedIn Tumblr


ಬೆಂಗಳೂರು: ಇತ್ತೀಚೆಗೆ ಜಮ್ಮು-ಕಾಶ್ಮೀರದ ಪುಲ್ವಾಮ ಉಗ್ರರ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮ ಯೋಧರ ತ್ಯಾಗ ಬಲಿದಾನ ವ್ಯರ್ಥವಾಗಲಿಕ್ಕೆ ಬಿಡೋದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​​ ಭರವಸೆ ನೀಡಿದ್ದಾರೆ. ನಗರದಲ್ಲಿ ಆಯೋಜಿಸಲಾಗಿದ್ದ ‘ಥಿಂಕರ್ ಫೋರಂ’ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು, ದೇಶಕ್ಕಾಗಿ ಹೋರಾಡಲು ನಮ್ಮ ಕೇಂದ್ರ ಸರ್ಕಾರ ಸನ್ನದ್ದವಾಗಿದೆ ಎಂದು ಹೇಳಿದರು.

ಪುಲ್ವಾಮಾ ದುರಂತ ಆಗೋಗಿದೆ. ಒಂದು ಭರವಸೆ ನೀಡುತ್ತೇನೆ, ಯಾವುದೇ ಕಾರಣಕ್ಕೂ ಭಾರತ ವೀರ ಯೋಧರ ತ್ಯಾಗ ಬಲಿದಾನ ವ್ಯರ್ಥವಾಗಲಿಕ್ಕೆ ಬಿಡೋದಿಲ್ಲ. ಅಮರನಾಥ ಯಾತ್ರೆ ಮಾಡುವುದರಿಂದಾಗಿ ಪಾಕಿಸ್ತಾನಕ್ಕೆ ಭಾರೀ ಪ್ರಮಾಣದಲ್ಲಿ ದುಡ್ಡು ಹೋಗುತ್ತಿದೆ. ಕಾಶ್ಮೀರ ಹೊರತುಪಡಿಸಿ ಬೇರೆಲ್ಲೂ ಬಾಂಬ್ ಸ್ಪೋಟ ಆಗಿಲ್ಲ. ಎಲ್ಲಿಯೂ ಭಯೋತ್ಪಾದನಾ ಚಟುವಟಿಕೆ ನಡೆದಿಲ್ಲ. ಹೀಗೆಂದ ಮಾತ್ರಕ್ಕೆ ಜಮ್ಮು-ಕಾಶ್ಮೀರವನ್ನು ಬಿಡಲಿಕ್ಕೆ ಆಗುವುದಿಲ್ಲ. ಅದು ನಮ್ಮ ದೇಶದ ಅವಿಭಾಜ್ಯ ಅಂಗ ಎಂದರು.

ಇನ್ನು ರಫೇಲ್‌ ತರಹದ ಒಂದೂ ವಿಮಾನವನ್ನು ಹಿಂದಿನ ಯುಪಿಎ ಸರ್ಕಾರ ತರಲಿಲ್ಲ. ಅಲ್ಲದೇ ಕಾಸ್ಟಿಂಗ್​ ಬಗ್ಗೆಯೂ ಹೆಚ್ಚು ಮಾತನಾಡೋದಿಲ್ಲ. ಇದೇ ಸೆಪ್ಟೆಂಬರ್ 17 ರಂದು ಮೊದಲ ರಫೇಲ್ ವಿಮಾನ ಭಾರತಕ್ಕೆ‌ ಬರಲಿದೆ. ಈ‌ ಹಿಂದಿನ‌ ಚುನಾವಣೆ ಗೆಲ್ಲಿಸಿದ್ದು ಮುಖ್ಯವಲ್ಲ. ಮುಂಬರುವ ಚುನಾವಣೆ ಗೆಲ್ಲುವುದು ನಮಗೆ ಮುಖ್ಯವಾಗಿದೆ. ಭಾರೀ ಮತಗಳ ಅಂತರದಿಂದಲೇ ಎದುರಾಗಳಿಗಳನ್ನು ಸೋಲಿಸಬೇಕು ಎಂದು ತಿಳಿಸಿದರು.

ಇನ್ನೂ 50 ವರ್ಷಗಳ ಕಾಲ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುತ್ತೆ. ಈ ಚುನಾವಣೆ ಗೆಲ್ಲಬೇಕಿರುವುದು ತುಂಬಾ ಮುಖ್ಯವಾಗಿದೆ. ಹೀಗಾಗಿ 2019 ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ. ಹಿಂದಿನ ಚುನಾವಣೆಗಿಂತಲೂ ಈ ಬಾರಿ ಹೆಚ್ಚಿನ ಸೀಟುಗಳನ್ನು ಗೆಲ್ಲಬೇಕು. ಮತ್ತೊಮ್ಮೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಅಲ್ಲದೇ ಚುನಾವಣೆ ಪ್ರಚಾರದ ಭಾಗವಾಗಿ ನಡೆದ ಸಂವಾದದಲ್ಲಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿದರು.

Comments are closed.