ರಾಷ್ಟ್ರೀಯ

ಕಾಶ್ಮೀರದಲ್ಲಿ ಎನ್​ಕೌಂಟರ್: ಮೂವರು ಜೈಷ್ ಉಗ್ರರ ಹತ್ಯೆ; ಇಬ್ಬರು ಯೋಧರ ಬಲಿದಾನ

Pinterest LinkedIn Tumblr


ನವದೆಹಲಿ: ಪುಲ್ವಾಮ ಉಗ್ರ ದಾಳಿ ಘಟನೆ ಬಳಿಕ ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಭದ್ರತಾ ಪಡೆಗಳು ಇವತ್ತು ಮಧ್ಯಾಹ್ನ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮೂವರು ಉಗ್ರಗಾಮಿಗಳನ್ನು ಹತ್ಯೆಗೈದಿದ್ದಾರೆ. ಕುಲಗಮ್​ನಲ್ಲಿ ನಡೆದ ಈ ಎನ್​ಕೌಂಟರ್​ನಲ್ಲಿ ಒಬ್ಬ ಪೊಲೀಸ್ ಪೊಲೀಸ್ ಅಧಿಕಾರಿ ಹಾಗೂ ಒಬ್ಬ ಯೋಧ ಕೂಡ ಬಲಿಯಾಗಿದ್ದಾರೆ. ಇತರ ಇಬ್ಬರು ಭದ್ರತಾ ಸಿಬ್ಬಂದಿ ಹಾಗೂ ಮೂವರು ಸ್ಥಳೀಯ ನಾಗರಿಕರೂ ಗಾಯಗೊಂಡಿದ್ದಾರೆ.

ಕುಲಗಾಮ್​ನಲ್ಲಿ ಉಗ್ರಗಾಮಿಗಳು ನೆಲೆಯೂರಿದ್ದಾರೆಂಬ ಮಾಹಿತಿ ಆಧರಿಸಿ ಸಿಆರ್​ಪಿಎಫ್ ಮತ್ತು ವಿಶೇಷ ಕಾರ್ಯಾಚರಣೆ ಪಡೆ(ಎಸ್​ಓಜಿ) ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಟುರಿಗಾಮ್ ಗ್ರಾಮದಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ಎಸಗಿದ್ದಾರೆ. ಆಗ ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸಿದ್ದಾರೆ. ಈ ಗುಂಡಿನ ಕಾಳಗದಲ್ಲಿ 3 ಜೈಷ್ ಉಗ್ರರು ಸೇರಿ ಐವರು ಸಾವನ್ನಪ್ಪಿದ್ದಾರೆ.

ಜಮ್ಮುವಿನ ದೋಡಾ ಜಿಲ್ಲೆಯ 2011ರ ಬ್ಯಾಚ್​ನ ಐಪಿಎಸ್ ಅಧಿಕಾರಿ ಅಮನ್ ಠಾಕೂರ್ ಅವರು ತಲೆಗೆ ಗುಂಡು ತಗುಲಿ ಬಲಿದಾನ ಆಯಿತು. ಜೈಷ್ ಉಗ್ರಗಾಮಿಗಳ ನಿಗ್ರಹ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದ ಅಧಿಕಾರಿಗಳಲ್ಲಿ ಠಾಕೂರ್ ಕೂಡ ಒಬ್ಬರು. ಕುಲಗಮ್​ನ ಡಿವೈಎಸ್​ಪಿಯಾಗಿ ಇವರು ತೋರಿದ ಎದೆಗಾರಿಕೆಯನ್ನು ಪರಿಗಣಿಸಿ ಇತ್ತೀಚೆಗಷ್ಟೇ ಡಿಜಿಪಿ ಅವರು ಸನ್ಮಾನ ಮಾಡಿದ್ದರು. ಇನ್ನು, ಇವತ್ತು ನಡೆದ ಎನ್​ಕೌಂಟರ್​ನಲ್ಲಿ ಸಾವನ್ನಪ್ಪಿದ ಇನ್ನೊಬ್ಬ ಯೋಧರನ್ನು ಸಿಆರ್​ಪಿಎಫ್​ನ ರಣವೀರ್ ಸೋಮವೇರ್ ಎಂದು ಗುರುತಿಸಲಾಗಿದೆ.

ಫೆ. 14ರಂದು ಪುಲ್ವಾಮದಲ್ಲಿ ಉಗ್ರನ ಆತ್ಮಾಹುತಿ ದಾಳಿ ಘಟನೆ ನಡೆದ ನಂತರ ಕಾಶ್ಮೀರದಲ್ಲಿ ನಡೆದ 2ನೇ ಪ್ರಮುಖ ಎನ್​ಕೌಂಟರ್ ಇದಾಗಿದೆ. ಕೆಲ ದಿನಗಳ ಹಿಂದೆ ದಕ್ಷಿಣ ಕಾಶ್ಮೀರದಲ್ಲೇ ನಡೆದ ಎನ್​ಕೌಂಟರ್​ನಲ್ಲಿ ಮೂವರು ಜೈಷ್ ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿದ್ದವು. ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಜೈಷ್ ಸಂಘಟನೆಯ ಪ್ರಮುಖ ಕಮಾಂಡರ್ ಎನ್ನಲಾದ ಇಬ್ಬರು ಉಗ್ರರಿಗೂ ಮುಕ್ತಿ ಕೊಡಲಾಗಿತ್ತು.

Comments are closed.