ಕರ್ನಾಟಕ

ಪ್ರಿಯಾಂಕ ಬೆನ್ನಲ್ಲೇ ರಾಬರ್ಟ್ ವಾದ್ರಾ ರಾಜಕೀಯ ಪ್ರವೇಶ?

Pinterest LinkedIn Tumblr


ಬೆಂಗಳೂರು: ಇತ್ತೀಚೆಗೆ ಪ್ರಿಯಾಂಕ ಗಾಂಧಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. ಈ ಬೆನ್ನಲ್ಲೇ ಜನರ ಸೇವೆಗೆ ನಾನು ಮುಕ್ತ ಎಂದಿರುವ ರಾಬರ್ಟ್​​​ ವಾದ್ರಾ ತಾವು ರಾಜಕೀಯ ಪ್ರವೇಶ ಮಾಡುವ ಸುಳಿವು ನೀಡಿದ್ದಾರೆ ಎನ್ನಲಾಗಿದೆ. ಜನರ ಸೇವೆಗೆ ನಾನು ಇನ್ನಷ್ಟು ಮುಕ್ತನಾಗಿದ್ದೇನೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಸೋನಿಯಾ ಗಾಂಧಿ ಅಳಿಯ ವಾದ್ರಾ ರಾಜಕೀಯ ಪ್ರವೇಶ ಪಕ್ಕಾ ಎನ್ನಲಾಗಿದೆ.

​​​ಪ್ರಿಯಾಂಕ ಗಾಂಧಿ ಬೆನ್ನಲ್ಲೇ ವಾದ್ರಾ ರಾಜಕೀಯ ಪ್ರವೇಶದ ಸುಳಿವು ನೀಡಿದ್ದಾರೆ. ದೇಶದ ಜನತೆಗೆ ಸೇವೆ ಮಾಡಬೇಕೆಂದು ಬಯಸಿದ್ದೇವೆ. ಪ್ರಮುಖವಾಗಿ ಉತ್ತರಪ್ರದೇಶದಲ್ಲಿ ಜನರ ಸಮಸ್ಯೆಗಳನ್ನ ಆಲಿಸಿ ಪರಿಹಾರ ನೀಡಲು ನಿರ್ಧರಿಸಿದ್ದೇನೆ. ಇದಕ್ಕೆ ನಾನು ಸದಾ ಬದ್ದವಾಗಿದ್ದೇನೆ. ನನ್ನಲ್ಲಿ ಸಾಧ್ಯವಾದಷ್ಟು ಸೇವೆ ಮಾಡಬೇಕೆಂದಿದ್ದೇನೆ ಎಂದು ತಮ್ಮ ಫೇಸ್ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ ರಾಬಾರ್ಟ್​​ ವಾದ್ರಾ.

ದೇಶದ ಜನತೆ ತೋರಿದ ಪ್ರೀತಿಗೆ ನಾನು ಧನ್ಯ. ನಿಮ್ಮ ಮೇಲೆ ನನಗೆ ಮತ್ತಷ್ಟು ಗೌರವ ಹೆಚ್ಚಿದೆ. ಹಲವು ವರ್ಷಗಳಿಂದ ನಾನು ಗಳಿಸಿರುವ ಸಾಮರ್ಥ್ಯ ಮತ್ತು ಅನುಭವ ವ್ಯರ್ಥವಾಗಬಾರದು. ಇದನ್ನು ಒಳ್ಳೆಯ ಕೆಲಸಗಳಿಗಾಗಿ ಬಳಸಬೇಕೆಂದು ನಿರ್ಧರಿಸಿದ್ದೇನೆ. ನನ್ನ ಮೇಲಿನ ಆರೋಪದಿಂದ ಮುಕ್ತಿ ಹೊಂದಿದ ಬಳಿಕ ಸಕ್ರಿಯವಾಗಿ ಜನರ ಸೇವೆ ಮಾಡಲಿದ್ದೇನೆ ಎಂದು ಪೋಸ್ಟ್​​ ಮಾಡಿದ್ಧಾರೆ.

ರಾಬಾರ್ಟ್​​ ವಾದ್ರಾ ಪ್ರಿಯಾಂಕ ಗಾಂಧಿಯವರ ಗಂಡ. ಈಗಾಗಲೇ ವಾದ್ರಾ ಅವರ ಮೇಲೆ ಲಂಡನ್‌ನಲ್ಲಿ 1.9 ಮಿಲಿಯನ್ ಪೌಂಡ್ ಮೌಲ್ಯದ ಆಸ್ತಿಯ ಖರೀದಿ ವೇಳೆ ಅಕ್ರಮ ಹಣ ವಹಿವಾಟು ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪ್ರತ್ಯೇಕ ಅಕ್ರಮ ಹಣ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರೀ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.

Comments are closed.