ಕರ್ನಾಟಕ

ಲೋಕಸಭಾ ಚುನಾವಣೆ: ರಾಜ್ಯ ಬಿಜೆಪಿ ನಾಯಕರ ಜತೆ ಅಮಿತ್​​ ಶಾ ಸಭೆ

Pinterest LinkedIn Tumblr


ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದಂತೆಯೇ ದೇಶಾದ್ಯಂತ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಚುನಾವಣೆ ತಯಾರಿ ಹಿನ್ನೆಲೆಯಲ್ಲಿಯೇ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಬೆಂಗಳೂರಿಗೆ ಆಗಮಿಸಿದ್ದು, ರಾಜ್ಯ ಬಿಜೆಪಿ ನಾಯಕರ ಜತೆಗೆ ಮಹತ್ವದ ಸಭೆ ನಡೆಸಿದ್ದಾರೆ. ಯಲಹಂಕದ ಹೋಟೆಲ್ ರಾಯಲ್ ಆರ್ಕಿಡ್​ನಲ್ಲಿ ನಡೆದ ಈ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಲೋಕಸಭಾ ಸಂಚಾಲಕರು, ಸಂಸದರು, ಶಾಸಕರು, ಪದಾಧಿಕಾರಿಗಳು ಭಾಗಿಯಾಗಿದ್ದರು ಎನ್ನಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ನೇತೃತ್ವದಲ್ಲಿಯೇ ಇಂದು ಮಹತ್ವದ ಸಭೆ ನಡೆಸಲಾಗಿದೆ. ಮೊದಲು ಶಾಸಕರು ಮತ್ತು ವಿಧಾನಸಭಾ ಪರಿಷತ್​​ ಸದಸ್ಯರ ಜತೆಗೆ ಸಭೆ ನಡೆಸಿದ ಅಮಿತ್​​ ಶಾ ಅವರು, ಹಲವು ಮಹತ್ವದ ಮಾತುಕತೆ ನಡೆಸಿದ್ಧಾರೆ. ಬಳಿಕ ಹಾಗೆಯೇ ಸಂಸದ ಮತ್ತು ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಇವರು, ಲೋಕಸಭೆ ಚುನಾವಣೆ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.

ಇನ್ನು ಕೊನೆಯಲ್ಲಿ ಬಿಜೆಪಿ ಕೋರ್​​​ ಕಮಿಟಿ ಸಭೆ ನಡೆಸಲಾಗಿದೆ. ಇಲ್ಲಿ “ಮೇರಾ ಪರಿವಾರ್​​, ಮೇರಾ ಬಿಜೆಪಿ”(ನನ್ನ ಮನೆ, ನನ್ನ ಬಿಜೆಪಿ) ಎಂಬ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಗಿದೆ. ಈ ಕಾರ್ಯಕ್ರಮದ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಧ್ವಜ ಹಾರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಇಲ್ಲಿಯವರೆಗೂ ರಾಜ್ಯದಲ್ಲಿ ಬಿಜೆಪಿ ಆಯೋಜಿಸಿದ್ದ ಎಲ್ಲಾ ಕಾರ್ಯಕ್ರಮಗಳ ಕುರಿತು ಅಮಿತ್​ ಶಾ ಅವರು ಮಾಹಿತಿ ಸಂಗ್ರಹಿಸಿದ್ದಾರೆ.

ಇನ್ನು ಒಂದಷ್ಟು ಮುಖಂಡರ ಸಭೆ ನಡೆಸಬೇಕಾಗಿತ್ತು. ಸಮಯದ ಅಭಾವದಿಂದ ಎಲ್ಲರನ್ನು ಸೇರಿಸಿ ಕೊನೆಯದಾಗಿ ಸಭೆ ನಡೆಸಿದರು. ಇಲ್ಲಿನ ವೇದಿಕೆ ಮೇಲೆಯೇ ಆರ್. ಅಶೋಕ್ ವಿಚಾರದಲ್ಲಿ ಬಿ.ಎಸ್ ಯಡಿಯೂರಪ್ಪ ಹಾಗೂ ಸಂತೋಷ್ ನಡುವೆ ಭಿನ್ನಾಭಿಪ್ರಾಯ ಸಂಭವಿಸಿತ್ತು. ಹೀಗಾಗಿ ಬಿಎಸ್​​ ಯಡಿಯೂರಪ್ಪ ಅವರಿಂದ ಸಂತೋಷ್ ಅಂತರ ಕಾಯ್ದುಕೊಂಡಿದ್ದಾರೆ ಎನ್ನುತ್ತಿವೆ ಮೂಲಗಳು.

‘ಮಹಾಘಟಬಂಧನ್’ ಒಂದು ವೇಳೆ ಅಧಿಕಾರಕ್ಕೆ ಬಂದರೇ ಎಂತಹ ಸರ್ಕಾರ ರಚಿಸಬಹುದು ಎಂಬುದನ್ನು ಜನರ ಮುಂದಿಡಿ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಮೈತ್ರಿ ನಾಯಕರನ್ನು ಹೋಲಿಸಿ; ಯಾರು ದೇಶಕ್ಕೆ ಅಭಿವೃದ್ಧಿ ಪರ ಸರ್ಕಾರ ಕೊಡಬಲ್ಲರು ಎಂಬುದನ್ನು ಸಾರಿ ಹೇಳಿ ಎಂದಿದ್ಧಾರೆ. ಅಲ್ಲದೇ ನಮಗೆ ಈ ಬಾರಿಯೂ ಬಹಮತ ಸಿಗುತ್ತೆ. ಶಿವಸೇನೆ, ಎಐ.ಡಿಎಂ.ಕೆ ಸೇರಿದಂತೆ ಜೆಡಿಯು ಎಲ್ಲರೂ ನಮ್ಮ ಜೊತೆಯಲ್ಲೇ ಇದ್ದಾರೆ. ಇಡೀ ದೇಶದಲ್ಲಿ ಬಿಜೆಪಿಪರ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಕಾರ್ಯಕರ್ತರು ಇದಿನಿಂದಲೇ ಪೂರ್ಣ ಸಮಯ ಚುನಾವಣೆಗಾಗಿ ಮೀಸಲಿಡಬೇಕು ಎಂದು ಅಮಿತ್ ಶಾ ಸೂಚಿಸಿದ್ದಾರೆ.

ಮಾರ್ಚ್ 2 ರೊಳಗೆ ಎಲ್ಲಾ ಬಿಜೆಪಿ ಕಾರ್ಯಕರ್ತರು ತಮ್ಮ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸಬೇಕು. ಕನಿಷ್ಟ 40 ಲಕ್ಷ ದ್ವಜ ಹಾರಿಸಬೇಕು. ಬಿಜೆಪಿ ಕಾರ್ಯಕರ್ತರು ಕನಿಷ್ಟ 40 ಲಕ್ಷ ದೀಪ ಬೆಳೆಸಬೇಕು. ಪ್ರತಿ ಭೂತ್​​ನಲ್ಲಿಯೂ ಬಿಜೆಪಿಗೆ ಲೀಡ್ ಸಿಗಬೇಕು. ‘ಮೇರಾ ಭೂತ್ ಸಬ್ ಸೇ ಮಜಬೂತ್’ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಬೇಕು ಎಂದು ರಾಜ್ಯ ಬಿಜೆಪಿ ನಾಯಕರಿಗೆ ಎಲ್ಲಾ ರೀತಿಯ ಸಲಹೆ ಮತ್ತು ಸೂಚನೆ ನೀಡಿದ್ಧಾರೆ ಎನ್ನುತ್ತಿವೆ ಉನ್ನತ ಮೂಲಗಳು.

Comments are closed.