ಕರ್ನಾಟಕ

ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಗಣೇಶ್ ಅರೆಸ್ಟ್

Pinterest LinkedIn Tumblr

ಬೆಂಗಳೂರು: ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರನ್ನು ಕಡೆಗೂ ಪೋಲೀಸರು ಬಂಧಿಸಿದ್ದಾರೆ. ಹಲ್ಲೆ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಶಾಸಕ ಗಣೇಶ್ ಅವರನ್ನು ಬಿಡದಿ ಪೋಲೀಸರು ಬಂಧಿಸಿದ್ದಾರೆ.

ವಿಧಾನ ಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಎಂಬಿ ಪಾಟೀಲ್ ಅವರು, ಇಂದು ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಗುಜರಾತ್ ನ ಸೋಮನಾಥದಲ್ಲಿ ಕಂಪ್ಲಿ ಗಣೇಶ್ ಅವರನ್ನು ಬಂಧಿಸಲಾಗಿದೆ. ಇಂದು ರಾತ್ರಿ ಬೆಂಗಳೂರಿಗೆ ವಿಮಾನದ ಮೂಲಕ ಕರೆತಂದು ನಾಳೆ ರಾಮನಗರ ಜೆಎಂಎಫ್ ಸಿ ಕೋರ್ಟ್ ಗೆ ಮುಂದೆ ಹಾಜರುಪಡಿಸುತ್ತೇವೆ ಎಂದರು.

ಜನವರಿ 20ರಂದು ನಡೆದ ಘಟನೆಯಲ್ಲಿ ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಅವರ ಮೇಲೆ ಅದೇ ಪಕ್ಷದ ಶಾಸಕ ಗಣೇಶ್ ಹಲ್ಲೆ ನಡೆಸಿದ್ದರು ಈ ಹಲ್ಲೆಯಿಂದ ಆನಂದ್ ಸಿಂಗ್ ಅವರ ಕಣ್ಣ್, ಮುಖ, ರ್ತ್ಲೆ ಭಾಗ ಸೇರಿ ಹಲವು ಕಡೆ ಗಂಭೀರ ಗಾಯವಾಗಿದ್ದವು.

ಹಲ್ಲೆ ನಡೆಸಿದ್ದ ಗಣೇಶ್ ವಿರುದ್ಧ ಬಿಡದಿ ಠಾಣೆಯಲಿ ಎಫ್ ಐಆರ್ ದಾಖಲಾಗಿತ್ತು. ಆದರೆ ತನ್ನ ವ್ಬಂಧನ ವಿರುದ್ಧ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದ ಗಣೇಶ್ ನಿನ್ನೆ (ಮಂಗಳವಾರ) ಅರ್ಜಿಯನ್ನು ಹಿಂಪಡೆದಿದ್ದರು.

ಬಂಧಿತ ಶಾಸಕರನ್ನು ಇಂದು ಮಧ್ಯರಾತ್ರಿ ವೇಳೆ ಬೆಂಗಳೂರಿಗೆ ಕರೆತರಲಾಗುತ್ತದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

Comments are closed.