ಕರ್ನಾಟಕ

ಕಾಂಗ್ರೆಸ್​​ ಸೇರಿದರೆ ‘ಪ್ರಕಾಶ್​​​ ರೈ’ಗೆ ಬೆಂಬಲ: ದಿನೇಶ್​​ ಗುಂಡೂರಾವ್​​!

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್​​ ಬೆಂಬಲದ ನಿರೀಕ್ಷೆಯಲ್ಲಿದ್ದ ನಟ ಪ್ರಕಾಶ್​​ ರೈ ಕನಸಿಗೆ ತಣ್ಣೀರು ಎರಚಿದಂತಾಗಿದೆ. ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಎಂದು ಕೋರಿದ್ದ ಬಹುಭಾಷ ನಟನಿಗೆ ರಾಜ್ಯ ಕಾಂಗ್ರೆಸ್​​ ನಿರಾಸೆ ಮೂಡಿಸಿದೆ. ಪರೋಕ್ಷವಾಗಿ ಬೆಂಬಲಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ನನ್ನ ಜತೆಗೂ ಪ್ರಕಾಶ್​​ ರೈ ಚರ್ಚಿಸಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ. ಹೀಗಾಗಿ ಪರೋಕ್ಷ ಬೆಂಬಲ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಕಾಂಗ್ರೆಸ್​ ಸೇರಿದರೇ ಪ್ರಕಾಶ್​​ ರೈ ಅವರಿಗೆ ಬೆಂಬಲ ನೀಡಬಹುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್​​​ ತಿಳಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾಗರರ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್​​ ಅವರು, ಪ್ರಕಾಶ್​​​ ರೈ ವಿಚಾರವನ್ನು ಈಗಾಗಲೇ ಸಭೆಯಲ್ಲಿ ಚರ್ಚಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನನ್ನ ಜತೆಗೆ ಬೆಂಬಲ ನೀಡಿ ಎಂದು ರೈ ಮನವಿ ಮಾಡಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ. ಆದ್ದರಿಂದ ಅವರು ಕಾಂಗ್ರೆಸ್​​ ಸೇರಿದರೆ ಬೆಂಬಲ ನೀಡಬಹುದು ಎಂದು ಭರವಸೆ ನೀಡಿದ್ದಾರೆ. ಇತ್ತ ಬೆಂಗಳೂರು ಸೆಂಟ್ರಲ್​​​ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ರೈ ಅವರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂಬ ಸಣ್ಣ ನಿರೀಕ್ಷೆಯಿತ್ತು. ಆದರೀಗ ಎಲ್ಲವೂ ಹುಸಿಯಾಗಿದೆ. ಆದರಿಂದ ರೈ ತಮ್ಮ ಸ್ವಂತ ಬಲದಿಂದಲೇ ಹೋರಾಡಬೇಕಿದೆ.

ಇನ್ನು ಪ್ರಸ್ತುತ ಬೆಂಗಳೂರು ಸೆಂಟ್ರಲ್ ಕ್ಷೇತ್ರವು ಬಿಜೆಪಿಯ ವಶದಲ್ಲಿದೆ. ಇಲ್ಲಿನ ಹಾಲಿ ಸಂಸದ ಪಿ.ಸಿ.ಮೋಹನ್ ಎರಡು ಬಾರಿ ಗೆದ್ದಿದ್ದು, ಹ್ಯಾಟ್ರಿಕ್​​ ಗೆಲುವಿನ ನಿರೀಕ್ಷೆಯಲ್ಲಿದ್ಧಾರೆ. ಈಗಾಗಲೇ ಚುನಾವಣೆ ಪ್ರಚಾರ ಆರಂಬಿಸಿರುವ ಪ್ರಕಾಶ್​​ ರೈ ಅವರು, ಯೋಚಿಸಿ ವೋಟ್​​ ಮಾಡುವಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎನ್ನಲಾಗಿದೆ.

ಸದಾ ಜಸ್ಟ್​​ ಆಸ್ಕಿಂಗ್ ಅಭಿಯಾನದ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸುವ ಬಹುಭಾಷ ನಟ ಪ್ರಕಾಶ್​​ ರೈ ಅವರು ಈ ಹಿಂದೆಯೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ತಮ್ಮ ಆಪ್ತರಿಗೆ ಹೊಸ ವರ್ಷದ ಶುಭಾಶಯ ಕೋರಿದ ಪ್ರಕಾಶ್​​ ರೈ, ಪಕ್ಷೇತರ ಅಭ್ಯರ್ಥಿಯಾಗಿ ಬೆಂಗಳೂರು ಸೆಂಟ್ರಲ್​​ನಿಂದ ಸ್ಪರ್ಧೆಗೆ ಇಳಿಯಲು ನಿರ್ಧರಿಸುವುದಾಗಿ ಹೇಳಿದ್ದರು. ಜತೆಗೆ ನನ್ನ ಮೇಲೆ ಹೆಚ್ಚು ಜವಾಬ್ದಾರಿಗಳಿವೆ. ಸಂಸತ್​​ನಲ್ಲಿ ಜನರ ಪರವಾಗಿ ಧ್ವನಿಯೆತ್ತಲು ಬೆಂಬಲಿಸಿ ಎಂದು ಕೇಳಿಕೊಂಡಿದ್ದರು.

ನನ್ನ ಸ್ಪರ್ಧೆ ಬಗ್ಗೆ ನಿರ್ಧಾರ ಮಾಡಲಾಗಿದೆ. ಈ ಕುರಿತು ಈಗಾಗಲೇ ನಮ್ಮ ಆಪ್ತರ ಬಳಿ ಚರ್ಚಿಸಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ನಿಲ್ಲಲು ಎಲ್ಲಾ ರೀತಿಯ ತಯಾರಿ ನಡೆಸಲಾಗುತ್ತಿದೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಹಾಗೆಯೇ ಇನ್ನುಂದೆ ಸಂಸತ್​ನಲ್ಲಿಯೂ ಜಸ್ಟ್​​ ಆಸ್ಕಿಂಗ್​​ ಅಭಿಯಾನ ಶುರುವಾಗಲಿದೆ ಎಂದು ಟ್ವೀಟ್ ಮೂಲಕ ಆಪ್ತರಿಗೆ ಸಿಹಿಸುದ್ದಿ ನೀಡಿದ್ದರು. ಬಳಿಕ ತೆಲಂಗಾಣ ಟಿಆರ್​​ಎಸ್​​, ಸಿಎಂ ಕೇಜ್ರಿವಾಲ್​​ ಆಪ್​​ ಪಕ್ಷ ಸೇರಿದಂತೆ ಕಮಲ್​​ ಹಾಸನ್​ ಅವರು ಕೂಡ ಬೆಂಬಲ ನೀಡುವುದಾಗಿ ಹೇಳಿದರು.

Comments are closed.