ಕರ್ನಾಟಕ

ರಾಜ್ಯ ಬಜೆಟ್ 2019 : ಬಡವರ ಬಂಧು ಯೋಜನೆ – ಬೀದಿಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ

Pinterest LinkedIn Tumblr

ಬೆಂಗಳೂರು: ಸಣ್ಣಮೊತ್ತದ ಸಾಲದ ಸುಳಿಗೆ ಹಲವು ಬಡವರ ಬಾಳು ಹಾಳಾದ ನಿದರ್ಶನಗಳು ನಮ್ಮ ಮುಂದಿವೆ. ಇಂತಹವರ ಕಣ್ಣೊರೆಸಲು ಸರ್ಕಾರ ರಾಜ್ಯದಲ್ಲಿ ಬಡವರ ಬಂಧು ಯೋಜನೆಯನ್ನು ಜಾರಿಗೊಳಿಸಿದೆ ಎಂದು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಇಂದು ಮಂಡಿಸಿದ ಬಜೆಟ್‍ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ 13,522 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಒಟ್ಟು 7.69 ಕೋಟಿ ಬಡ್ಡಿರಹಿತ ಸಾಲ ವಿತರಿಸಲಾಗಿದೆ. ಇದರಿಂದ ಬೀದಿ ಬದಿ ಸಣ್ಣ ವ್ಯಾಪಾರಿಗಳು ಸಾಲಗಾರರ ಶೋಷಣೆ ಮತ್ತು ದೌರ್ಜನ್ಯದಿಂದ ಮುಕ್ತರಾಗಿ ತಮ್ಮ ವ್ಯವಹಾರ ನಡೆಸಲು ಅನುಕೂಲವಾಗುತ್ತಿದೆ. ಇದೊಂದು ಮಾನವೀಯ ಮುಖವುಳ್ಳ ಪ್ರಗತಿಶೀಲ ಕಾರ್ಯಕ್ರಮ ಎಂದು ಹೇಳಿದರು.

Comments are closed.