ಕರ್ನಾಟಕ

ರಾಜ್ಯ ಬಜೆಟ್ 2019 : ” ಹೈಲೆಟ್ಸ್‍ಗಳು”

Pinterest LinkedIn Tumblr

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮೈತ್ರಿ ಸರ್ಕಾರದ ಬಜೆಟ್ ಅನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಿದ್ದು, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮಂಡನೆಯಾಗಿರುವ ಈ ಬಜೆಟ್ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿತ್ತು.

ಕುಮಾರಸ್ವಾಮಿಯವರು ಬಜೆಟ್ ಮಂಡನೆ ಮಾಡಲು ಆರಂಭಿಸುತ್ತಿದ್ದಂತೆಯೇ ನಿರೀಕ್ಷೆಯಂತೆ ಬಿಜೆಪಿ ಶಾಸಕರುಗಳು ಈ ಸರ್ಕಾರಕ್ಕೆ ಬಹುಮತವಿಲ್ಲವೆಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದು, ಇದರ ಮಧ್ಯೆಯೂ ಕುಮಾರಸ್ವಾಮಿ ತಮ್ಮ ಬಜೆಟ್ ಮಂಡಿಸಿದ್ದಾರೆ. ಬಜೆಟ್ ನ ಪ್ರಮುಖ ಅಂಶಗಳು ಈ ರೀತಿ ಇವೆ.

2019-20 ನೇ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮೈತ್ರಿಕೂಟ ಸರ್ಕಾರದ ಸಾಧನೆಗಳನ್ನು ಪ್ರಸ್ತಾಪಿಸಿದ್ದು, ನಾಡಿನ ಪ್ರತಿಯೊಬ್ಬ ಜನತೆಯು ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಿಸುವ ಆಶಯ ವ್ಯಕ್ತಪಡಿಸಿದ್ದಾರೆ.
– ಹಲವಾರು ಯೋಜನೆಗಳನ್ನು ನೀಡಿದ ಹೆಗ್ಗಳಿಕೆ ಮೈತ್ರಿಕೂಟ ಸರ್ಕಾರಕ್ಕಿದೆ.

– ನಿರುದ್ಯೋಗಿಗಳಿಗೆ ಅವಕಾಶದ ಬಾಗಿಲು ತೆರೆಯುವುದು ನಮ್ಮ ಆಶಯ.

– ಉದ್ಯೋಗ ಸೃಷ್ಟಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿಗೆ ನಮ್ಮ ಆದ್ಯತೆ.

– ಕೊಡಗಿನಲ್ಲಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡ 846 ನಿರಾಶ್ರಿತರಿಗೆ ಮನೆ ನಿರ್ಮಾಣ ಕಾರ್ಯ.

– ಬೆಳೆ ಸಾಲ ಮನ್ನಾ ಯೋಜನೆ ಯಶಸ್ವಿಯಾಗಿ ಜಾರಿ. ವಾಣಿಜ್ಯ ಬ್ಯಾಂಕ್ ಗಳಲ್ಲಿನ ಸಾಲ ಮನ್ನಾಕ್ಕೂ ಕ್ರಮ.

– ರೈತರಿಗೆ ನೇರವಾಗಿ ಸಾಲ ಮನ್ನಾ ಹಣ ಬಿಡುಗಡೆ ಮಾಡಲು ಯೋಜನೆ.

– ಬೀದಿ ಬದಿ ವ್ಯಾಪಾರಿಗಳಿಗೆ 7.68 ಕೋಟಿ ರೂಪಾಯಿ ಬಡ್ಡಿರಹಿತ ಸಾಲ.

– ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಯೋಜನೆ.

-ಎರಡನೇ ಹಂತದ ‘ನಮ್ಮ ಮೆಟ್ರೋ’ಗೆ ಚಾಲನೆ ನೀಡಲಾಗಿದೆ.

– ಬೆಂಗಳೂರು ನಗರವನ್ನು ವಿಶ್ವ ದರ್ಜೆಗೇರಿಸಲು ಕ್ರಮ.

– ಕುಡಿಯುವ ನೀರಿಗಾಗಿ ಜಲಧಾರೆ ಯೋಜನೆಗೆ ಕ್ರಮ.

– 172 ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ

– ಸಂಧ್ಯಾ ಸುರಕ್ಷಾ ಯೋಜನೆ ಮಾಸಾಶನ ಒಂದು ಸಾವಿರ ರೂ. ಗಳಿಗೆ ಏರಿಕೆ.

– ‘ಮಾತೃಶ್ರೀ’ ಯೋಜನೆ ಅಡಿ ಗರ್ಭಿಣಿ ಮಹಿಳೆಯರಿಗೆ ಆರು ತಿಂಗಳ ಕಾಲ ಒಟ್ಟು ಆರು ಸಾವಿರ ರೂ.

– ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಅನುದಾನ.

– ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ರೇಷ್ಮೆ ಬೆಳೆಗಾರರಿಗೆ ಸರ್ಕಾರದಿಂದ ಸಹಾಯ.

– ಕೃಷಿ ಹೊಂಡ ನಿರ್ಮಾಣಕ್ಕೆ 250 ಕೋಟಿ ರೂಪಾಯಿ ಅನುದಾನ.

– ಸಿರಿ ಧಾನ್ಯ ಬೆಳೆಯುವ ರೈತರಿಗೆ ‘ಸಿರಿ’ ಯೋಜನೆ ಘೋಷಣೆ.

– ರೇಷ್ಮೆ ಕೃಷಿ ಸಂಶೋಧನೆಗೆ 2 ಕೋಟಿ ರೂ. ಅನುದಾನ.

– ಚಾಮರಾಜನಗರದಲ್ಲಿರುವ ರೇಷ್ಮೆ ಕಾರ್ಖಾನೆಗೆ ಐದು ಕೋಟಿ ರೂಪಾಯಿ.

– 15 ಜಿಲ್ಲೆಗಳಲ್ಲಿ ಸುಸಜ್ಜಿತ ಪಶು ಚಿಕಿತ್ಸಾ ಕೇಂದ್ರ.

– ನಾಟಿ ಕೋಳಿ ಸಾಕಾಣಿಕೆಗೆ 5 ಕೋಟಿ ರೂಪಾಯಿ ಅನುದಾನ.

– ಹಾಲು ಉತ್ಪಾದನೆ ಪ್ರೋತ್ಸಾಹ ಧನ ಹೆಚ್ಚಳ.

– ಮಂಗನ ಕಾಯಿಲೆ ನಿಯಂತ್ರಣಕ್ಕೆ 5 ಕೋಟಿ ರೂಪಾಯಿ.

– ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2,500 ಕೋಟಿ ರೂಪಾಯಿ.

– ಮೀನುಗಾರಿಕೆ ದೋಣಿಗಳಿಗೆ ಶೇಕಡಾ 50 ರಷ್ಟು ಸಹಾಯ ಧನ.

– ರಾಜ್ಯದ ಕೆರೆ ತುಂಬಿಸುವ ಯೋಜನೆಗೆ ಒಟ್ಟು 1600 ಕೋಟಿ. ಅನುದಾನ ಮೀಸಲು.

– ಚಿಕ್ಕ ಬಳ್ಳಾಪುರ ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆ.

– ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿಯಲ್ಲಿ ಭಾಷಾ ಕೌಶಲ್ಯ ಕೇಂದ್ರ.

– ಚಿಕ್ಕಮಗಳೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ 50 ಕೋಟಿ ರೂ.

– ಎಲ್ಲ ನಗರಗಳಲ್ಲಿ ‘ಬಡವರ ಬಂಧು’ ಯೋಜನೆ ವಿಸ್ತರಣೆ.

– 10 ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕ್ರೀಡಾ ಹಾಸ್ಟೆಲ್ ನಿರ್ಮಾಣಕ್ಕೆ 15 ಕೋಟಿ ರೂ.

– ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ 2,500 ರೂ. ಸಹಾಯ ಧನ.

– ಆಶಾ ಕಾರ್ಯಕರ್ತೆಯರ ಗೌರವಧನ 500 ರೂ.ಗಳಷ್ಟು ಹೆಚ್ಚಳ.

– ಕಟ್ಟಡ ಕಾರ್ಮಿಕರಿಗಾಗಿ ‘ಶ್ರಮಿಕ ಸೌರಭ’ ಯೋಜನೆ.

– ‘ಅನ್ನ ಭಾಗ್ಯ’ ಯೋಜನೆಗೆ 3,700 ಕೋಟಿ ರೂ. ಅನುದಾನ.

– ಕಾರ್ಯನಿರತ ಹಾಗೂ ಹಿರಿಯ ಪತ್ರಕರ್ತರ ಕ್ಷೇಮ ನಿಧಿ ದತ್ತಿಗೆ ತಲಾ 2 ಕೋಟಿ ರೂ. ಅನುದಾನ.

– ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟೂರು ವೀರಾಪುರದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಸ್ಥಾಪನೆಗೆ ಕ್ರಮ. ಇದಕ್ಕಾಗಿ 25 ಕೋಟಿ ರೂ. ಅನುದಾನ.

– ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರು ಬಾಣಂದೂರು ಮಾದರಿ ಗ್ರಾಮವಾಗಿ ಅಭಿವೃದ್ಧಿಪಡಿಸಲು ಕ್ರಮ. ಜೊತೆಗೆ ಶ್ರೀಗಳ ಜೀವನ ಸಾಧನೆ ಸಾರುವ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ. ಅನುದಾನ

Comments are closed.