ಕರ್ನಾಟಕ

2019-20ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ನಾಲ್ಕು ಹೊಸ ತಾಲ್ಲೂಕುಗಳ ರಚನೆ

Pinterest LinkedIn Tumblr

ಬೆಂಗಳೂರು, ಫೆಬ್ರವರಿ 08: ಕುಮಾರಸ್ವಾಮಿ ಅವರು ಮಂಡಿಸಿರುವ 2019-20ನೇ ಸಾಲಿನ ಬಜೆಟ್‌ನಲ್ಲಿ ನಾಲ್ಕು ಹೊಸ ತಾಲ್ಲೂಕುಗಳ ರಚನೆ ಮಾಡಲಾಗಿದೆ.

ರಾಮನಗರ ಜಿಲ್ಲೆಯ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು, ಬಾಗಲಕೋಟೆ ಜಿಲ್ಲೆಯ ತೇರದಾಳ, ಚಿಕ್ಕಮಗಳೂರು ಜಿಲ್ಲೆಯ ಕಳಸ ವನ್ನು ಹೊಸ ತಾಲ್ಲೂಕನ್ನಾಗಿ ರಚಿಸಲಾಗಿದೆ.

ಹಲವು ಹೊಸ ತಾಲ್ಲೂಕುಗಳ ರಚನೆಗೆ ಈ ಬಾರಿ ಒತ್ತಾಯ ಹೇರಲಾಗಿತ್ತು, ಆದರೆ ಬಜೆಟ್‌ನಲ್ಲಿ ನಾಲ್ಕು ತಾಲ್ಲೂಕುಗಳನ್ನು ಮಾತ್ರವೇ ಹೊಸದಾಗಿ ವಿಂಗಡಿಸಲಾಗಿದೆ.

ಇದನ್ನು ಹೊರತುಪಡಿಸಿ ಕಲಬುರಗಿ, ವಿಜಯಪುರ, ದಕ್ಷಿಣ ಕನ್ನಡ, ಮೈಸೂರು, ಗದಗ, ದಾವಣಗೆರೆ, ಧಾರವಾಡ ಹಾಗೂ ಕೊಡಗು ಜಿಲ್ಲೆಗಳನ್ನು ಡ್ರೋನ್ ಮೂಲಕ ರೀ-ಸರ್ವೆ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಕುಮಾರಸ್ವಾಮಿ ಘೋಷಿಸಿದ್ದಾರೆ.

Comments are closed.