ಕರ್ನಾಟಕ

ಬಾತ್​ರೂಂನಲ್ಲಿ ಜಾರಿ ಬಿದ್ದ ಮಾಜಿ ಪ್ರಧಾನಿ ದೇವೇಗೌಡ; ಬಲಗಾಲಿಗೆ ಗಾಯ

Pinterest LinkedIn Tumblr


ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಮನೆಯಲ್ಲಿ ಜಾರಿ ಬಿದ್ದು, ಬಲಗಾಲಿಗೆ ಪೆಟ್ಟು ಮಾಡಿಕೊಂಡಿದ್ಧಾರೆ. 85 ವರ್ಷದ ಗೌಡರ ಕಾಲಿಗೆ ಗಂಭೀರ ಗಾಯವಾಗಿದ್ದು, ನಡೆಯಲು ಕಷ್ಟವಾಗುತ್ತಿದೆ ಎನ್ನಲಾಗಿದೆ.

ಇಳಿವಯಸ್ಸಿನ ದೇವೇಗೌಡರು ಇಂದು ಬೆಳಗ್ಗೆ ತಮ್ಮ ಪದ್ಮನಾಭನಗರ ನಿವಾಸದ ಬಾತ್​ರೂಂನಲ್ಲಿ ಜಾರಿ ಬಿದ್ದಿದ್ಧಾರೆ. ಕಾಲು ಉಳುಕಿದ್ದು, ಯಾವುದೇ ತೊಂದರೆಯಿಲ್ಲ ಎಂದು ತಿಳಿದು ಬಂದಿದೆ. ಮೂಳೆಗೆ ಯಾವುದೇ ರೀತಿಯ ಪೆಟ್ಟಾಗಿಲ್ಲ. ಬಲಗಾಲಿನ ಮಂಡಿ ಬಳಿ ಉಳುಕಿದೆ ಎಂದು ವೈದ್ಯರು ತಿಳಿಸಿದ್ಧಾರೆ.

ಗೌಡರಿಗೆ ಸದ್ಯ ಸ್ವಲ್ಪ ವಿಶ್ರಾಂತಿ ಬೇಕಾಗಿದ್ದು, ಕಾಲಿಗೆ ಭಾರ ಬೀಳದಂತೆ ನೋಡಿಕೊಳ್ಳಬೇಕು. ಆಸ್ಪತ್ರೆಗೆ ತೆರಳಿ ಎಕ್ಸ್​ ರೇ ಮಾಡಿಸಲು ವೈದ್ಯರು ಸಲಹೆ ನೀಡಿದ್ಧಾರೆ ಎನ್ನಲಾಗಿದೆ. ಹೀಗಾಗಿ ಕೆಲವೇ ಕ್ಷಣಗಳಲ್ಲಿ ಗೌಡರು ಆಸ್ಪತ್ರೆಗೆ ತೆರಳಿ ವೈದ್ಯರಿಂದ ಚಿಕಿತ್ಸೆ ಪಡೆಯಲಿದ್ಧಾರೆ.

ಇನ್ನೂ ವಿಷಯ ತಿಳಿದ ತಕ್ಷಣ ದೇವೇಗೌಡರ ಮಗ ಡಾ. ರಮೇಶ್ ಪದ್ಮನಾಭನಗರ ನಿವಾಸಕ್ಕೆ ಆಗಮಿಸಿ ತಮ್ಮ ತಂದೆಯ ಯೋಗಕ್ಷೇಮ ವಿಚಾರಿಸಿದ್ಧಾರೆ.

ಸದ್ಯ ದೇವೇಗೌಡರು ತಿಂಡಿ ತಿಂದು ವಿಶ್ರಾಂತಿ ಪಡೆಯುತ್ತಿದ್ದಾರೆ. ಕುಟುಂಬ ವೈದ್ಯರು ಬಂದು ಈಗಾಗಲೆ ಪರೀಕ್ಷಿಸಿದ್ದಾರೆ. ಯಾರ ಭೇಟಿಗೂ ಅವಕಾಶ ಇಲ್ಲ. ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಮೂಳೆ ತಜ್ಞ ಡಾ. ಚಂದ್ರಶೇಖರ್ ಮನೆಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments are closed.