ಅಂತರಾಷ್ಟ್ರೀಯ

ಶವಾಗಾರಕ್ಕೆ ನುಗ್ಗಿ ಶವದೊಂದಿಗೆ ಸೆಕ್ಸ್ ಮಾಡಿದವನಿಗೆ 6 ವರ್ಷ ಜೈಲು ಶಿಕ್ಷೆ

Pinterest LinkedIn Tumblr


ಲಂಡನ್: ಶವಾಗಾರಕ್ಕೆ ನುಗ್ಗಿ 9 ಶವಪೆಟ್ಟಿಗೆಗಳಿಂದ ಮೃತದೇಹಗಳನ್ನ ಹೊರತೆಗೆದು ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ವ್ಯಕ್ತಿಯೊಬ್ಬನಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಬರ್ಮಿಂಗ್​ಹ್ಯಾಂ ನಗರದಲ್ಲಿ ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು ವರದಿಯಾಗಿದೆ.

ಕಾಸಿಮ್ ಖುರಮ್ ಎಂಬಾತನೇ ಆ ವಿಲಕ್ಷಣ ಅಪರಾಧಿ. 23 ವರ್ಷದ ಕಾಸಿಮ್ ಖುರಮ್ ಶವದೊಂದಿಗೆ ಸೆಕ್ಸ್ ಮಾಡುವ ವೇಳೆ ಕುಡಿತದ ನಶೆಯಲ್ಲಿದ್ದ ಹಾಗೂ ಮಾದಕ ವಸ್ತು ಸೇವನೆಯಿಂದ ಮದೋನ್ಮತನಾಗಿದ್ದನೆನ್ನಲಾಗಿದೆ.

ನೀವು ಮಾಡಿದ್ದು ಮನುಷ್ಯತ್ವ ತದ್ವಿರುದ್ಧವಾಗಿದೆ. ಒಂಬತ್ತು ಮೃತ ದೇಹಗಳನ್ನ ಘಾಸಿಗೊಳಿಸಿದಿರಿ. ಇಂಥ ಕೆಲಸ ಯಾಕೆ ಮಾಡಿದ್ದು ಎಂಬುದು ನಿಮಗೆ ಮಾತ್ರ ಗೊತ್ತು. ಇದು ತುಂಬಾ ಮುಜುಗರ ವಿಷಯ ಎಂದು ನ್ಯಾಯಾಧೀಶರಾದ ಮೆಲ್ಬೋರ್ನ್ ಇನ್ಮನ್ ಅವರು ತೀರ್ಪು ನೀಡುವ ವೇಳೆ ಕಾಸಿಮ್​ನನ್ನು ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ, ಕಾಸಿಮ್ ಪರ ವಕೀಲ ಜೋಸೆಫ್ ಕೀಟಿಂಗ್ ಅವರು, ಘಟನೆಯ ಬಗ್ಗೆ ತಮ್ಮ ಕಕ್ಷಿದಾರನಿಗೆ ತೀರಾ ವಿಷಾದವಿದೆ. ಅಸ್ವಾಭಾವಿಕವಾಗಿ ಈ ಕೆಲಸ ಮಾಡಿರುವುದು ಅವರ ಅರಿವಿಗೆ ಬಂದಿದೆ ಎಂದು ಕೋರ್ಟ್​ನಲ್ಲಿ ಹೇಳಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವ ವಿಫಲ ಪ್ರಯತ್ನಿಸಿದರು.

Comments are closed.