ಕರ್ನಾಟಕ

ಅಣ್ಣಾಮಲೈ ದಿಟ್ಟ ಕ್ರಮ: ಏಕಕಾಲದಲ್ಲಿ 71 ಪೊಲೀಸ್ ಸಿಬ್ಬಂದಿ ವರ್ಗಾವಣೆ

Pinterest LinkedIn Tumblr


ಬೆಂಗಳೂರು: ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಏಕಕಾಲದಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆಯ 71 ಮಂದಿ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ.

ಮೊನ್ನೆ ಮಹಿಳೆ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕುಮಾರಸ್ವಾಮಿ ಲೇಔಟ್ ಠಾಣೆಯ ಎರಡು ಗುಂಪುಗಳ ನಡುವೆ ಜಗಳವಾಗಿತ್ತು. ಅಷ್ಟೇ ಅಲ್ಲದೇ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್ ಪೊಲೀಸರ ನಡುವೆ ಆಗಾಗ ಒಳಜಗಳಗಳು ನಡೆಯುತ್ತಿದ್ದವು.

ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ವರ್ಗಾವಣೆಯ ಅಸ್ತ್ರ ಪ್ರಯೋಗಿಸಿದ್ದಾರೆ. ಮೊನ್ನೇ ಠಾಣೆಗೆ ದೂರು ದಾಖಲಿಸಲು ಬಂದಿದ್ದ ಮಹಿಳೆ ಜೊತೆ ಅಮಾನವೀಯತೆಯಿಂದ ನಡೆದುಕೊಂಡಿದ್ದ ಇಬ್ಬರು ಸಿಬ್ಬಂಧಿಗಳನ್ನ ಅಮಾನತುಗೊಳಿಸಿದ್ದರು.

ಇದೀಗ ಕುಮಾರಸ್ವಾಮಿ ಲೇಔಟ್‌ ಪೊಲೀಸ್ ಠಾಣೆಯಲ್ಲಿ 78 ಸಿಬ್ಬಂದಿಗಳ ಪೈಕಿ 71 ಪೊಲೀಸ್ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿದ್ದಾರೆ. ಶುಕ್ರವಾರ ದಕ್ಷಿಣ ವಲಯ ಡಿಸಿಪಿ ಕೆ.ಅಣ್ಣಾಮಲೈ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಒಂದೇ ಬಾರಿಗೆ ಒಂದೇ ಠಾಣೆಯ 71 ಮಂದಿ ವರ್ಗಾವಣೆ ಆಗಿರುವುದು ಸಿಲಿಕಾನ್‌ ಸಿಟಿ ಇತಿಹಾಸದಲ್ಲಿ ಇದೇ ಮೊದಲು.

ಠಾಣೆಯಲ್ಲಿ ಒಬ್ಬರಿಗೊಬ್ಬರು ಅನ್ಯುನ್ಯವಾಗಿ ಇರಬೇಕು ಎನ್ನುವುದು ಅಣ್ಣಾಮಲೈ ಅವರ ಆಶಯ. ಆದ್ರೆ ಠಾಣೆಯಲ್ಲಿ ಪದೇ-ಪದೇ ಕಚ್ಚಾಟ ನಡೆಯುತ್ತಿರುವುದರಿಂದ ಈ ಕ್ರಮ ಕೈಗೊಂಡಿದ್ದಾರೆ.

Comments are closed.