ಕರ್ನಾಟಕ

ರೈತನನ್ನು ಮದುವೆಯಾದರೆ 1 ಲಕ್ಷ ರೂಪಾಯಿ!

Pinterest LinkedIn Tumblr


ಬೆಂಗಳೂರು: ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಒಂದು ವೇಳೆ ನೀವು ರೈತನನ್ನು ಮದುವೆಯಾದರೆ ನಿಮಗೆ ಶಾದಿ ಭಾಗ್ಯದ ಅಡಿಯಲ್ಲಿ ಬರೋಬ್ಬರಿ ಬಂಪರ್ 1 ಲಕ್ಷ ರೂಪಾಯಿ ನಿಮ್ಮದಾಗಲಿದೆ ಅಂತೆ!

ಅಷ್ಟಕ್ಕೂ ಈ ಯೋಜನೆ ಎಲ್ಲಿ ಇದೆ ಅಂತಿರಾ? ಬೇರೆಲ್ಲೂ ಅಲ್ಲ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಕೋಆಪರೇಟಿವ್ ಸೊಸೈಟಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಅನಗೋಡು ಗ್ರಾಮದ ಮಹಿಳೆಯು ಅದೇ ಗ್ರಾಮದ ಯಾವುದೇ ರೈತನನ್ನು ಮದುವೆಯಾದರೆ ಆಕೆ ಖಾತೆಗೆ 1 ಲಕ್ಷ ರೂಪಾಯಿ ಹಣ ಜಮಾ ಆಗಲಿದೆ.ಅಣಗೋಡು ಸೇವಾ ಸಹಕಾರಿ ಸಂಘದ ಸದಸ್ಯರು ಈ ನೂತನ ಆಫರ್ ನ್ನು ಆ ಗ್ರಾಮದವರಿಗೆ ನೀಡುತ್ತಿದ್ದಾರೆ. ಈ ಯೋಜನೆ ಬರುವ ಏಪ್ರಿಲ್ 1 ರಿಂದ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ.

ಅಷ್ಟಕ್ಕೂ ಈ ಯೋಜನೆಯನ್ನು ಜಾರಿಗೆ ತರುತ್ತಿರುವುದಾದರು ಏಕೆ ಅಂತೀರಾ? ಹೆಚ್ಚಾಗಿ ಉತ್ತರ ಕನ್ನಡದ ಮಹಿಳೆಯರು ಬೆಂಗಳೂರಿನಲ್ಲಿ ಕೆಲಸ ಮಾಡುವ ವರನಿಗೆ ಅಥವಾ ಸರ್ಕಾರಿ ನೌಕರಿ ಮಾಡುತ್ತಿರುವವನಿಗೆ ಹೆಚ್ಚಿನ ಆಧ್ಯತೆಯನ್ನು ನೀಡುತ್ತಾರೆ. ಆದ್ದರಿಂದ ಮಹಿಳೆಯರನ್ನು ಸೆಳೆಯಲು ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ ಅಂತೆ.ಈ ಯೋಜನೆ ಕುರಿತಾಗಿ ವಿವರಿಸಿರುವ ಸಹಕಾರಿ ಸಂಘದ ಅಧ್ಯಕ್ಷ ಎನ್,ಕೆ ಭಟ್ “ಆರ್ಥಿಕವಾಗಿ, ಸಾಮಾಜಿಕವಾಗಿ ಅನೂಕೂಲವಾಗಲು ಮತ್ತು ಸಂಗಾತಿಯನ್ನು ಹುಡುಕಲು ಕಷ್ಟಪಡುತ್ತಿರುವ ಯುವಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

Comments are closed.